ನವದೆಹಲಿ: ದೇಶದ ಆರ್ಥಿಕತೆ ಮತ್ತು ಉತ್ಪಾದನೆ ಕುಸಿಯದಿರಲು ಹಾಗೂ ಜನ ಜೀವನ ಸುಗಮವಾಗಲು ಹಂತಹಂತವಾಗಿ ಲಾಕ್‌ಡೌನ್ (Lockdown)  ನಿಯಮಗಳನ್ನು ಸಡಿಲಿಸಲಾಗುತ್ತಿದ್ದು ಈಗ ಇನ್ನಷ್ಟು ವಿನಾಯಿತಿ ನೀಡಲಾಗಿದೆ. ಮೂರನೇ ಬಾರಿಗೆ ಲಾಕ್​ಡೌನ್ ನಿಯಮ ಸಡಿಲಿಸಿರುವ ಕೇಂದ್ರ ಸರ್ಕಾರ ಕೆಲವು ಅವಕಾಶಗಳನ್ನು ತೆರೆದಿಟ್ಟಿದೆ.


COMMERCIAL BREAK
SCROLL TO CONTINUE READING

PM Kisan ಯೋಜನೆ ಮೂಲಕ 8.89 ಕೋಟಿ ಜನರ ಖಾತೆಗೆ ಹಣ


  • ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿರುವುದರಿಂದ ಇವುಗಳೀಗ ಮುಕ್ತ ಮುಕ್ತ...

  • ವಿದ್ಯಾರ್ಥಿಗಳ ಹೋಂ ವರ್ಕ್, ಮುಂದಿನ ತರಗತಿಗಳಿಗೆ ತಯಾರಿ ಮಾಡಿಕೊಳ್ಳುವ ದೃಷ್ಟಿಯಿಂದ ಪುಸ್ತಕದ ಅಂಗಡಿ ತೆರೆಯಬಹುದು.

  • ಉತ್ತರ ಭಾರತದಲ್ಲಿ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಫ್ಯಾನ್ ಅಂಗಡಿಗಳನ್ನು ತೆರೆಯಬಹುದು.

  • ಪ್ರಮುಖ ಸಿದ್ದ ಆಹಾರ ಸಾಮಗ್ರಿಗಳಲ್ಲಿ ಒಂದಾದ ಬ್ರೆಡ್ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

  • ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಫ್ಲೋರ್ ಮಿಲ್, ದಾಲ್ ಮಿಲ್ ಗಳನ್ನು ತೆರೆಯಬಹುದು.

  • ಹಾಲಿನ‌ ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

  • ಹಿರಿಯ ನಾಗರಿಕರು ತಾವಿರುವಲ್ಲಿಗೆ ಮೊಬೈಲ್ ರಿಪೇರಿದಾರರನ್ನು ಕರೆಸಿಕೊಳ್ಳಬಹುದಾಗಿದೆ.

  • ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಹೆಚ್ಚುವರಿ ಉತ್ಪನ್ನ, ಸಾಗಾಣೆ ಮತ್ತು ಮಾರಾಟಕ್ಕೆ ಅವಕಾಶ ಒದಗಿಸಲಾಗಿದೆ.

  • ಬಂದರುಗಳಲ್ಲಿ ನೌಕಾದಳ ಸಂಚಾರ ಮಾಡುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.

    ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು

    ಮೇ 3ರವರೆಗೆ ಲಾಕ್​ಡೌನ್ ಜಾರಿಯಲ್ಲಿದ್ದು ಲಾಕ್​ಡೌನ್ ವೇಳೆ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ರಮೇಣ ಅಗತ್ಯ ವಸ್ತುಗಳ ಉತ್ಪಾದನೆ, ಸಾಗಾಣೆ, ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಕೇಂದ್ರ ಗೃಹ ಇಲಾಖೆ ತನ್ನ ಮೂಲ ಮಾರ್ಗಸೂಚಿಗೆ ತಿದ್ದುಪಡಿ ಮಾಡಿ ಜನರಿಗೆ ಇನ್ನೊಂದಿಷ್ಟು ವಿನಾಯಿತಿ ನೀಡಿದೆ.