ವಾಷಿಂಗ್ಟನ್: ಚೀನಾದೊಂದಿಗಿನ ಭಾರೀ ಉದ್ವಿಗ್ನತೆಯ ಮಧ್ಯೆ ಭಾರತ ಮತ್ತೊಂದು ಪ್ರಮುಖ ಗೆಲುವು ಸಾಧಿಸಿದೆ. ಭಾರತಕ್ಕೆ ಬಹಿರಂಗವಾಗಿ ಅಮೆರಿಕ (America) ಬೆಂಬಲ ನೀಡಲು ಮುಂದಾಗಿದ್ದು ಈ ಸುದ್ದಿ ಚೀನಾಕ್ಕೆ ಆಘಾತಕಾರಿಯಾಗಿದೆ.  


COMMERCIAL BREAK
SCROLL TO CONTINUE READING

ಅಮೆರಿಕದ ಉನ್ನತ ಸಂಸದರು ಭಾರತದ ಗಡಿಯಲ್ಲಿ ಚೀನಾದ ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳನ್ನು ಖಂಡಿಸಿದ್ದು ಉದ್ವಿಗ್ನತೆಯನ್ನು ತ್ಯಜಿಸಿ ರಾಜತಾಂತ್ರಿಕತೆಯನ್ನು ಹೆಚ್ಚಿಸುವಂತೆ ಚೀನಾಕ್ಕೆ ಮನವಿ ಮಾಡಿದ್ದಾರೆ.


ಕಳೆದ ವಾರ ಗಾಲ್ವಾನ್ ಕಣಿವೆಯಲ್ಲಿ ಚೀನಾ (China)ದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಕಳೆದ ಐದು ದಶಕಗಳಲ್ಲಿ ಉಭಯ ದೇಶಗಳ ಗಡಿಯಲ್ಲಿ ನಡೆಯುತ್ತಿರುವ ಅಸ್ತವ್ಯಸ್ಥೆಯ ಮಧ್ಯೆ ನಡೆದ ಈ ಭಾರಿ ಹಿಂಸಾತ್ಮಕ ಘರ್ಷಣೆಯು ಪರಿಸ್ಥಿತಿಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಿತು.


ಇಂದು ಚೀನಾ ಮತ್ತು ರಷ್ಯಾದೊಂದಿಗೆ ವಿದೇಶಾಂಗ ಸಚಿವರ ಸಭೆ


ಚೀನಾ ಸರ್ಕಾರವು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಇತ್ತೀಚಿನ ಅಪಾಯಕಾರಿ ಆಕ್ರಮಣಕಾರಿ ಚಟುವಟಿಕೆ ಮತ್ತು ಅನಗತ್ಯವಾಗಿ ಪ್ರಾಣಹಾನಿ ಮಾಡುವ ಬಗ್ಗೆ ನನಗೆ ತೀವ್ರ ಕಾಳಜಿ ಇದೆ ಎಂದು ಸಸಂದ್ ರಾಜಾ ಕೃಷ್ಣಮೂರ್ತಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಪಿಎಲ್‌ಎ ಕೋರಿಕೆಯ ಮೇರೆಗೆ LAC ಉದ್ವಿಗ್ನತೆ ಕುರಿತಂತೆ ಇಂಡೋ-ಚೀನಾ ಮಾತುಕತೆ


ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ ಚೀನಾ ಸರ್ಕಾರವು ನೆರೆಹೊರೆಯವರೊಂದಿಗೆ ವಿವಾದಗಳನ್ನು ಎದುರಿಸುವಾಗ ಪ್ರಚೋದನೆ ಮತ್ತು ಬೆದರಿಸುವಿಕೆಯ ಬಳಕೆಯನ್ನು ನಿಲ್ಲಿಸಬೇಕು ಎನ್ನಲಾಗಿದೆ.


ಇಲಿಯೊನಿಸ್‌ನ ಡೆಮಾಕ್ರಟಿಕ್ ಶಾಸಕರು ಚೀನಾ ಸರ್ಕಾರಕ್ಕೆ ರಾಜತಾಂತ್ರಿಕ ಉಲ್ಬಣವನ್ನು ಬಿಡಲು ಮತ್ತು ಭಾರತದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಹರಿಸಲು ರಾಜತಾಂತ್ರಿಕತೆಯನ್ನು ಅನುಸರಿಸಬೇಕೆಂದು ನಾನು ಬಲವಾಗಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.


ಚೀನಾ ಉತ್ಪನ್ನಗಳಿಗೆ ಹಾಕಲು ಕತ್ತರಿ, ನಡೆಯುತ್ತಿದೆ ಪಟ್ಟಿ ಸಿದ್ದಪಡಿಸುವ ತಯಾರಿ


ಗಾಲ್ವಾನ್ ಕಣಿವೆಯಲ್ಲಿನ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿಯನ್ನು ಪೂರ್ವಭಾವಿ ದಾಳಿ ಎಂದು ಭಾರತ ಸೋಮವಾರ ಹೇಳಿದೆ ಮತ್ತು ಚೀನಾ ತನ್ನ ಸೈನ್ಯವನ್ನು ಪೂರ್ವ ಲಡಾಖ್‌ನ ಎಲ್ಲಾ ಭಾಗಗಳಿಂದ ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.