ನವದೆಹಲಿ : ಸಾಮಾಜಿಕ ಮಾಧ್ಯಮಗಳ (Social media)ಈ ಯುಗದಲ್ಲಿ ಒಂದು ಫೋಟೋ ನಿಮ್ಮ ಜೀವನವನ್ನೇ ಬದಲಾಯಿಸಿಬಿದಬಹುದು. ಪ್ರಪಂಚದಾದ್ಯಂತ ಇಂತಹ ಅದೆಷ್ಟೋ ಕತೆಯನ್ನು ನಾವು ಕೇಳಿರುತ್ತೇವೆ. ಉದಾಹರಣೆಗೆ ಪಾಕಿಸ್ತಾನದ ಟೀ ಮಾರುವ ಅರ್ಷದ್ ಖಾನ್ ಜೀವನವನ್ನೇ ತೆಗೆದುಕೊಳ್ಳಿ. ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರು ರಾತ್ರೋರಾತ್ರಿ ಸುದ್ದಿಯಾಗಿ ಬಿಟ್ಟರು (Viral Photo). ಇದೀಗ ಜಾತ್ರೆಯಲ್ಲಿ ಬಾಲಕಿಯೊಬ್ಬಳು ಬಲೂನ್ ಮಾರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಮೂಡಿಸಿದೆ. ಹುಡುಗಿಯ ಮೇಕ್ ಓವರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. 


COMMERCIAL BREAK
SCROLL TO CONTINUE READING

ಫೋಟೋಶೂಟ್ ಮಾಡಿಸಿಕೊಂಡ ಬಲೂನ್ ಮಾರುವ ಹುಡುಗಿ  : 
ಈ ಕತೆ ಶುರುವಾದದ್ದು ಒಂದು ಜಾತ್ರೆಯಿಂದ. ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಈ ಹುಡುಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ, ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್,  ಕಣ್ಣಿಗೆ ಬಿದ್ದಿದ್ದಾಳೆ (Baloon selling girl).  ಆಕೆ  ಆಕಾಶಬುಟ್ಟಿಗಳು ಮತ್ತು ದೀಪಗಳ ನಡುವೆ ನಿಂತಿದ್ದಳು. ಇದನ್ನೇ ಗಮನಿಸಿದ ಛಾಯಾಗ್ರಾಹಕ ಹುಡುಗಿಯ ಫೋಟೋ ಕ್ಲಿಕ್ಕಿಸಿದ್ದಾರೆ.  ನಂತರ ಈ ಫೋಟೋವನ್ನು ಹುಡುಗಿಯಾ ತಾಯಿಗೂ ತೋರಿಸಲಾಗಿದೆ (Viral photo). ಅವರು ಕೂಡಾ ತಸ್ಮ್ಮ್ ಮಗಳ ಫೋಟೋ ನೋಡಿ ಸಂತೋಷ ಪಟ್ಟಿದ್ದಾರೆ.  ಅಂದ ಹಾಗೆ ಈ ಬಲೂನ್ ಮಾರುವ ಹುಡುಗಿಯ ಹೆಸರು ಕಿಸ್ಬು..


BrahMos missile: ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ನೌಕಾಪಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.