ನವದೆಹಲಿ: Latest Onion Rate - ಈರುಳ್ಳಿ ಬೆಲೆ ಮತ್ತೊಮ್ಮೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ಬರಿಸಲಾರಂಭಿಸಿದೆ.  ದೆಹಲಿ-ಎನ್‌ಸಿಆರ್‌ನಲ್ಲಿ ಈರುಳ್ಳಿಯ ಬೆಲೆ ಕಳೆದ ಮೂರು ವಾರಗಳಿಂದ ಸುಮಾರು 50-60 ರೂ.ಗಳಷ್ಟಿತ್ತು, ಆದರೆ ಇದೀಗ ಈ ದರ ಇಂದು ಪ್ರತಿ ಕೆ.ಜಿಗೆ ರೂ.65 ರಿಂದ ರೂ.70 ಕ್ಕೆ ತಲುಪಿದೆ (Latest Onion Price). ಕಳೆದ ಒಂದೂವರೆ ತಿಂಗಳಲ್ಲಿ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ. ಇದೆ ವೇಳೆ ಅತಿದೊಡ್ಡ ಮಂಡಿಯಾಗಿರುವ ಲಾಸಲ್ ಗಾವ್ (Onion Rate In Delhi) ನಲ್ಲಿ, ಈರುಳ್ಳಿ ಬೆಲೆ (Onion Rate) ಎರಡು ದಿನಗಳಲ್ಲಿ ಕ್ವಿಂಟಾಲ್ಗೆ 1000 ರೂ.ಗಳಷ್ಟು ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇನ್ನೂ ಇಳಿಕೆಯಾಗಲ್ಲ ದರ
IANS ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಈರುಳ್ಳಿ ಬೆಲೆಯಲ್ಲಿ ಪ್ರಸ್ತುತ ಯಾವುದೇ ಇಳಿಕೆಯ ಲಕ್ಷಣಗಳು ಗೋಚರಿಸುತ್ತಿಲ್ಲ ಎನ್ನಲಾಗಿದೆ. ವ್ಯಾಪಾರಿಗಳ ಪ್ರಕಾರ ಇನ್ನೂ ಸುಮಾರು 15 ದಿನಗಳವರೆಗೆ ಈರುಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆಯ ಸಂಭವನಿಯತೆಗಳಿಲ್ಲ ಎಂದಿದ್ದಾರೆ. ಏಕೆಂದರೆ ಮುಂದಿನ ರಬ್ಬಿ ಫಸಲು ಮಾರ್ಚ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರುತ್ತದೆ. ಹಣ್ಣು-ಹಂಪಲಗಳಿಗಾಗಿ ಮತ್ತು ತರಕಾರಿಗಳಿಗಾಗಿ ಏಷ್ಯಾದಲ್ಲಿ ಅತಿ ದೊಡ್ಡ ಮಾರುಕಟ್ಟೆಯಾಗಿರುವ ದೆಹಲಿಯ ಆಜಾದ್ ಪುರ್ ಮಂದಿಯಲ್ಲಿ ಶನಿವಾರ ಈರುಳ್ಳಿಯ ಸಗಟು ಬೆಲೆ ರೂ.12.50 ರಿಂದ ರೂ.45 ಪ್ರತಿ ಕೆ.ಜಿಯಾಗಿತ್ತು. ಮಾಡೆಲ್ ದರ ರೂ.31.25 ಪ್ರತಿ ಕೆ.ಜಿಯಾಗಿತ್ತು.


ಮಹಾರಾಷ್ಟ್ರದಲ್ಲಿಯೂ ಕೂಡ ಏರಿಕೆಯಾದ ಈರುಳ್ಳಿ ದರ
ವರದಿಗಳ ಪ್ರಕಾರ  ಮಹಾರಾಷ್ಟ್ರದ ಈರುಳ್ಳಿ (Onion Rate In Maharashtra) ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿನ ಬೆಲೆಗಳು ಪ್ರತಿ ಕೆ.ಜಿ.ಗೆ 20 ರೂ. ನಿಂದ ರೂ.43 ದಾಖಲಾಗಿದೆ. ನಾಸಿಕ್ ಈರುಳ್ಳಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.  ಕಾರಣ, ನಾಸಿಕ್ ಈರುಳ್ಳಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಈರುಳ್ಳಿ ಉತ್ಪಾದನೆಯು ದೇಶದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ನಡೆಯುತ್ತದೆ, ಆದರೆ ನಾಸಿಕ್ ಅನ್ನು ಮಹಾರಾಷ್ಟ್ರದ ಈರುಳ್ಳಿ ಉತ್ಪಾದಿಸುವ ಪ್ರಮುಖ ಪ್ರದೇಶವೆಂದು ಪರಿಗಣಿಸಲಾಗಿದೆ. ನಾಸಿಕ್ ಈರುಳ್ಳಿಯ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಈ ಈರುಳ್ಳಿ ದೀರ್ಘಕಾಲ ಬಾಳಿಕೆ ಬರುತ್ತದೆ. ಅಂದರೆ ಅದು ಬೇಗ ಹಾಳಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.


ಇದನ್ನೂ ಓದಿ- Shani Vakri 2021: ಶನಿಯ ವಕ್ರ ನಡೆ, ಯಾವ ರಾಶಿಯ ಜನರ ಮೇಲೆ ಏನು ಪ್ರಭಾವ? ನಿಮ್ಮ ರಾಶಿ ಯಾವುದು?


ಈರುಳ್ಳಿ ಸಪ್ಲೈ ನಲ್ಲಿ ಭಾರಿ ಇಳಿಕೆ
ಈ ಕುರಿತು ಹೇಳಿಕೆ ನೀಡಿರುವ ಹರ್ಟಿಕಲ್ಚರ್ ಪ್ರೊಡ್ಯೂಸ್ ಅಸೋಸಿಯೇಶನ್ ಅಧ್ಯಕ್ಷ ಅಜೀತ್ ಷಾ, ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಆಗಮನ ಶೇ. 30 ರಷ್ಟು ಕುಸಿಯುತ್ತದೆ. ಈ ಹಿನ್ನೆಲೆ ಕಳೆದ ವಾರ ಈರುಳ್ಳಿ ಬೆಲೆ ಕಿಲೋ ಹಿಂಬಾಲಿಗೆ ರೂ.10ರಷ್ಟು ಹೆಚ್ಚಾಗಿತ್ತು. ಮುಂದಿನ ಕೆಲವಾರಗಳಲ್ಲಿ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿ ಬರುವಿಕೆಯೊಂದಿಗೆ ದರಗಳು ಇಳಿಮುಖವಾಗಲಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-LIC Policy - ತನ್ನ ಗ್ರಾಹಕರಿಗಾಗಿ ವಿಶೇಷ ಸೌಲಭ್ಯ ತಂದ LIC, ಮಾ.6 ರೊಳಗೆ ನೀವೂ ಇದರ ಲಾಭ ಪಡೆಯಿರಿ


15 ರಿಂದ 20 ದಿನಗಳವರೆಗೆ ಕಾಯಬೇಕಾಗಲಿದೆ
ಇದೆ ರೀತಿ ದೆಹಲಿಯ ಆಜಾದ್‌ಪುರ ಮಂಡಿಯ ಉದ್ಯಮಿ ಮತ್ತು ಆಲೂಗಡ್ಡೆ ಮತ್ತು ಈರುಳ್ಳಿ ವ್ಯಾಪಾರಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶರ್ಮಾ ಅವರು ರಬ್ಬಿ ಹಂಗಾಮಿನ ಬೆಳೆ ಬಂದ ನಂತರ ಈರುಳ್ಳಿ ಬೆಳೆಗಳು ನಿಯಂತ್ರಣಕ್ಕೆ ಬರಲಿವೆ ಎಂದು ಹೇಳಿದ್ದಾರೆ. ಈರುಳ್ಳಿ ಬೆಲೆ ಇಳಿಕೆಗಾಗಿ ನಾವು ಇನ್ನೂ 15 ರಿಂದ 20 ದಿನಗಳವರೆಗೆ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- SBIನ ಈ ಯೋಜನೆಯಡಿ ಒಂದೇ ಬಾರಿಗೆ ಹೂಡಿಕೆ ಮಾಡಿ ಪ್ರತಿ ತಿಂಗಳಿಗೆ ಉತ್ತಮ ಆದಾಯ ಪಡೆಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.