SBIನ ಈ ಯೋಜನೆಯಡಿ ಒಂದೇ ಬಾರಿಗೆ ಹೂಡಿಕೆ ಮಾಡಿ ಪ್ರತಿ ತಿಂಗಳಿಗೆ ಉತ್ತಮ ಆದಾಯ ಪಡೆಯಿರಿ

SBI Annuity Deposit Scheme - ಭಾರತೀಯ ಸ್ಟೇಟ್ ಬ್ಯಾಂಕ್ ನ Annuity Deposit Scheme ಅಡಿ ಹೂಡಿಕೆದಾರರಿಗೆ ಒಂದೇ ಬಾರಿಗೆ ಒಂದು ನಿರ್ಧಿಷ್ಟ ಪ್ರಮಾಣದ ಹಣ ಹೂಡಿಕೆ ಮಾಡಬೇಕಾಗುತ್ತದೆ. ಬಳಿಕ ಅವರಿಗೆ ಆ ಹಣ ನಿರ್ಧಾರಿತ ಸಮಯದ ಪ್ರಕಾರ ಮಾಸಿಕ ಕಂತುಗಳ ರೂಪದಲ್ಲಿ ಮರಳಿ ಸಿಗುತ್ತದೆ.

ನವದೆಹಲಿ: SBI Annuity Deposit Scheme - ಒಂದು ವೇಳೆ ನೀವೂ ಕೂಡ ಒಂದೇ ಬಾರಿಗೆ ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India)ನ Annuity Deposit Scheme ಒಂದು ಉತ್ತಮ ಆಯ್ಕೆಯಾಗಿದೆ. SBI ನ ಈ ಯೋಜನೆಯ ಅಡಿ ಹೂಡಿಕೆದಾರರು ಒಂದೇ ಬಾರಿಗೆ ಹಣವನ್ನು ಹೂಡಿಕೆ ಮಾಡಿ, ಬಳಿಕ ಒಂದು ನಿರ್ಧಿಷ್ಟ ಅವಧಿಯ ಬಳಿಕ ತಮ್ಮ ಹಣವನ್ನು ಮಾಸಿಕ ಕಂತುಗಳ ರೂಪದಲ್ಲಿ ಮರಳಿ ಪಡೆಯಬಹುದು. 

 

ಇದನ್ನೂ ಓದಿ-LIC Policy - ತನ್ನ ಗ್ರಾಹಕರಿಗಾಗಿ ವಿಶೇಷ ಸೌಲಭ್ಯ ತಂದ LIC, ಮಾ.6 ರೊಳಗೆ ನೀವೂ ಇದರ ಲಾಭ ಪಡೆಯಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಉಳಿತಾಯ ಖಾತೆಗಿಂತಲೂ ಹೆಚ್ಚಿನ ಬಡ್ಡಿ ಸಿಗುತ್ತದೆ - ಈ ಯೋಜನೆಯಲ್ಲಿ ಹೂಡಿಕೆದಾರರಿಗೆ ಅವರ ಮೂಲಧನದ ಜೊತೆಗೆ ಅದರ ಬಡ್ಡಿ ಕೂಡ ನೀಡಲಾಗುತ್ತದೆ. ಈ ಬಡ್ಡಿ ಖಾತೆಯಲ್ಲಿ ಉಳಿದ ಹಣದ ಮೇಲೆ ತ್ರೈಮಾಸಿಕ ಚಕ್ರಬಡ್ಡಿ ದರ ಆಗಿರಲಿದೆ. ಪ್ರಸ್ತುತ ಅನಿಶ್ಚಿತತೆಯ ವಾತಾವರಣ ಇರುವುದರಿಂದ ಹೂಡಿಕೆದಾರರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಉಳಿತಾಯ ಖಾತೆಗಿಂತಲೂ (SBI SB Account) ಹೆಚ್ಚು ಬಡ್ಡಿ ಸಿಗುತ್ತದೆ. 

2 /4

2. ಈ ಖಾತೆಯನ್ನು ನೀವು ಜಂಟಿಯಾಗಿ ಕೂಡ ನಿರ್ವಹಿಸಬಹುದು - ಯೋಜನೆಯ ಅಡಿ ಟರ್ಮ್ ಡಿಪಾಸಿಟ್ ಮೇಲೆ ಯಾವ ದರದಲ್ಲಿ ಬಡ್ಡಿ ಸಿಗುತ್ತದೆಯೋ, ಅದೇ ಬಡ್ಡಿ ದರ ಇದಕ್ಕೂ ಅನ್ವಯಿಸುತ್ತದೆ. ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯನ್ನು ತಮ್ಮದಾಗಿಸಿಕೊಳ್ಳಬಹುದು ಮತ್ತು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಈ ಯೋಜನೆಯ ಅಡಿ ಖಾತೆ ತೆರೆಯಬಹುದು.

3 /4

3. Annuity Deposit Scheme ನ ವೈಶಿಷ್ಟ್ಯಗಳು - ಯೋಜನೆಯಡಿಯಲ್ಲಿ, ಗ್ರಾಹಕರು ಒಂದೇ ಬಾರಿಗೆ ಒಂದು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಅದರ ನಂತರ ಅಸಲು ಮತ್ತು ಬಡ್ಡಿಯನ್ನು ಮಾಸಿಕ ಕಂತಾಗಿ ಸ್ವೀಕರಿಸಲಾಗುತ್ತದೆ. - ಠೇವಣಿ ಅವಧಿ: 36 ತಿಂಗಳು, 60 ತಿಂಗಳು, 54 ತಿಂಗಳು ಅಥವಾ 120 ತಿಂಗಳು. - ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. - ಕನಿಷ್ಠ ಠೇವಣಿ ಮೊತ್ತ - 25 ಸಾವಿರ ರೂಪಾಯಿ. - ಕನಿಷ್ಠ ಅನೂಟಿ : 1 ಸಾವಿರ ರೂಪಾಯಿ. - ಟರ್ಮ್ ಠೇವಣಿಗಳ ಬಡ್ಡಿದರಗಳು ಈ ಯೋಜನೆಗೆ ಅನ್ವಯಿಸುತ್ತವೆ. - ಎಸ್‌ಬಿಐ ಸಿಬ್ಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ 1% ಹೆಚ್ಚಿನ ಬಡ್ಡಿ ಸಿಗುತ್ತದೆ. - ಹಿರಿಯ ನಾಗರಿಕರಿಗೆ ಶೇಕಡಾ 0.5 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. - ಠೇವಣಿಯ ಮುಂದಿನ ತಿಂಗಳು ನಿಗದಿತ ದಿನಾಂಕದಿಂದ ಅನೂಟಿ ಪಾವತಿಸಲಾಗುವುದು ಮತ್ತು ದಿನಾಂಕ (29, 30 ಮತ್ತು 31) ಯಾವುದೇ ತಿಂಗಳಲ್ಲಿ ಬರದಿದ್ದರೆ, ಮುಂದಿನ ತಿಂಗಳು ಒಂದನೇ ತಾರೀಖಿಗೆ ಅನೂಟಿಯನ್ನು ಪಾವತಿಸಲಾಗುತ್ತದೆ. - ಟಿಡಿಎಸ್ ಅನ್ನು ಕಡಿತಗೊಳಿಸಿದ ನಂತರ ಮತ್ತು ಲಿಂಕ್ ಮಾಡಿದ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಗೆ ಜಮಾ ಮಾಡಿದ ನಂತರ ಅನೂಟಿ ಪಾವತಿ ಮಾಡಲಾಗುತ್ತದೆ.

4 /4

4. ಯುನಿವರ್ಸಲ್ ಪಾಸ್ ಬುಕ್ ವ್ಯವಸ್ಥೆ ಇದೆ - ಇದರಲ್ಲಿ ನಿಮಗೆ ನಾಮನಿರ್ದೇಶನ ಅಥವಾ ನಾಮಿನೆಶನ್ ಸೌಲಭ್ಯ ಲಭ್ಯವಿದೆ. - ವಿಶೇಷ ಸಂದರ್ಭಗಳಲ್ಲಿ ಅನೂಟಿ ಬಾಕಿ ಮೊತ್ತದ 75% ವರೆಗಿನ ಓವರ್‌ಡ್ರಾಫ್ಟ್ / ಸಾಲವನ್ನು ಪಡೆಯಬಹುದು. - ಸಾಲ / ಓವರ್‌ಡ್ರಾಫ್ಟ್ ತೆಗೆದುಕೊಂಡ ನಂತರ, ಅನೂಟಿ ಪಾವತಿಯನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ. - ಯುನಿವರ್ಸಲ್ ಪಾಸ್ಬುಕ್ ನೀಡಲಾಗುವುದು. - ಈ ಖಾತೆಯನ್ನು ನೀವು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು. - ಠೇವಣಿದಾರರ ಸಾವಿನ ಸಂದರ್ಭದಲ್ಲಿ ಅಕಾಲಿಕ ಖಾತೆ ಬಂದ್ ಮಾಡಲು ಅವಕಾಶ ಇದೆ. - ಇದಲ್ಲದೆ, 15 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಅವಧಿಗೂ ಮುನ್ನ ಹಣ ಪಾವತಿಗೆ ಅವಕಾಶವಿದೆ. - ಟರ್ಮ್ ಡಿಪಾಸಿಟ್ (Term Deposit) ಪ್ರಕಾರ, ಯೋಜನೆಯು ಪ್ರಿ ಮ್ಯಾಚುರ್ಡ್ ಪೆನಾಲ್ಟಿ ಕೂಡ ಆಕರ್ಷಿಸುತ್ತದೆ.