ಶೀಘ್ರವೇ ಈರುಳ್ಳಿ ಬೆಲೆಯಲ್ಲಿ ಇಳಿಕೆ, ಯಾವ ರಾಜ್ಯಕ್ಕೆ ಮೊದಲು ಈರುಳ್ಳಿ ಭಾಗ್ಯ?
ಗ್ರಾಹಕ ವ್ಯವಹಾರ ಖಾತೆ ಮೂಲಗಳ ಪ್ರಕಾರ ಆಮದುಗೊಂಡ ಈರುಳ್ಳಿಯ ಮೊದಲ ಸರಕಿನ ಬಹುತಾಂಶ ಭಾಗ ಆಂಧ್ರಪ್ರದೇಶ, ತೆಲಂಗಾಣಗಳಂತಹ ರಾಜ್ಯಗಳಿಗೆ ರವಾನಿಸಲಾಗುವುದು ಎನ್ನಲಾಗಿದ್ದು, ಎರಡನೆಯ ಸರಕಿನ ಬಹುತಾಂಶ ಭಾಗ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುವುದು ಎನ್ನಲಾಗಿದೆ.
ನವದೆಹಲಿ: ವಾರದ ಕೊನೆಯಲ್ಲಿ ಅಂದರೆ ಮುಂದಿನ 3-4 ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬರುವ ಡಿಸೆಂಬರ್ 12 ರಿಂದ 15 ರ ಮಧ್ಯೆ ಈರುಳ್ಳಿಯ ಎರಡು ದೊಡ್ಡ ಸರಕುಗಳನ್ನು ಭಾರತ ತಲುಪಲಿವೆ ಎಂದು ಸರ್ಕಾರ ಹೇಳಿದ್ದು, ಡಿಮ್ಯಾಂಡ್ ಮತ್ತು ಸಪ್ಲೈ ನಡುವಿನ ಅಂತರ ಬಹುತೇಕ ಕಮ್ಮಿ ಮಾಡಲು ಸಹಕಾರಿಯಾಗಲಿದೆ ಎಂದಿದೆ.
ಈಜಿಪ್ಟ್ ನಿಂದ ಆಮದಾಗುತ್ತಿರುವ ಸುಮಾರು 1500 ಟನ್ ಈರುಳ್ಳಿಯ ಮೊದಲ ಸರಕು ಡಿಸೆಂಬರ್ 12ರಂದು ಮುಂಬೈ ಪೋರ್ಟ್ ತಲುಪಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. 3 ದಿನಗಳ ಬಳಿಕ ಅಂದರೆ ಡಿಸೆಂಬರ್ 15ಕ್ಕೆ ಮತ್ತೆ 1500 ಟನ್ ಗಳಷ್ಟು ಈರುಳ್ಳಿ ತುರ್ಕಿಯಿಂದ ಭಾರತ ತಲುಪಲಿದೆ ಎನ್ನಲಾಗಿದೆ. ಈ ಎರಡು ದೇಶಗಳಿಂದ ಸುಮಾರು 6000-6000 ಟನ್ ಗಳಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಗ್ರಾಹಕ ವ್ಯವಹಾರ ಖಾತೆ ಮೂಲಗಳ ಪ್ರಕಾರ ಆಮದುಗೊಂಡ ಈರುಳ್ಳಿಯ ಮೊದಲ ಸರಕಿನ ಬಹುತಾಂಶ ಭಾಗ ಆಂಧ್ರಪ್ರದೇಶ, ತೆಲಂಗಾಣಗಳಂತಹ ರಾಜ್ಯಗಳಿಗೆ ರವಾನಿಸಲಾಗುವುದು ಎನ್ನಲಾಗಿದ್ದು, ಎರಡನೆಯ ಸರಕಿನ ಬಹುತಾಂಶ ಭಾಗ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುವುದು ಎನ್ನಲಾಗಿದೆ.
ಈ ರೀತಿ ಮುಂಬೈ ತಲುಪುವ ಈರುಳ್ಳಿಯನ್ನು ಬುಲೆಟ್ ಸ್ಪೀಡ್ ನಲ್ಲಿ ಗ್ರಾಹಕರಿಗೆ ತಲುಪಿಸಲು ಸರ್ಕಾರ ಹೈ ಆಕ್ಷನ್ ಪ್ಲ್ಯಾನ್ ಸಿದ್ಧಪಡಿಸಿದೆ ಎಂದು ಹೇಳಿದೆ.
ಆಮದುಗೊಳಿಸಲಾದ ಈರುಳ್ಳಿಯನ್ನು ವೇಗವಾಗಿ ರಾಜ್ಯಗಳಿಗೆ ತಲುಪಿಸಲು ಗ್ರಾಹಕ ವ್ಯವಹಾರಗಳ ಸಚಿವಾಲಯ, ಶಿಪ್ಪಿಂಗ್ ಸಚಿವಾಲಯ, ರೇಲ್ವೆ ಸಚಿವಾಲಯ ಹಾಗೂ ವಿಮಾನಯಾನ ಸಚಿವಾಲಯ ಜೊತೆ ಸೇರಿ ಈ ಜವಾಬ್ದಾರಿಯನ್ನು ಪೂರ್ಣಗೊಳಿಸಲಿದೆ. ಇತ್ತೀಚೆಗೆ ದೇಶದಲ್ಲಿ ಗಗನಮುಖಿಯಾಗುತ್ತಿರುವ ಈರುಳ್ಳಿ ಬೆಲೆ ಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುತ್ತಿದೆ.
ಇಂದಿಗೂ ಕೂಡ ದೆಹಲಿಗಳಂತಹ ರಾಜ್ಯಗಳಲ್ಲಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ 1 ಕೆ.ಜಿ ಈರುಳ್ಳಿ ಬೆಲೆ ರೂ.120-140ರಷ್ಟಿದ್ದರೆ, ಬೆಂಗಳೂರಿನಂತಹ ನಗರಗಳಲ್ಲಿ ಈರುಳ್ಳಿ ಬೆಲೆ ದ್ವಿಶತಕ ಬಾರಿಸಿದೆ.
ಈ ಮಧ್ಯೆ ಆಮದಾಗುತ್ತಿರುವ ಈರುಳ್ಳಿ ಸರಕು ಭಾರತ ತಲುಪಿ ಇತರೆ ರಾಜ್ಯಗಳಿಗೆ ತಲುಪುವುದರ ಜೊತೆಗೆ ಸರ್ಕಾರ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಭರವಸೆ ಹೊಂದಿದೆ.