ನವದೆಹಲಿ: ಕಾಂಗ್ರೆಸ್, ಡಿಎಂಕೆ, ಆರ್‌ಜೆಡಿ, ಸಮಾಜವಾದಿ ಪಕ್ಷ,ಹಾಗೂ ಎಡ ಪಕ್ಷಗಳು ಡಿ.8 ರಂದು ರೈತರು ಕರೆ ನೀಡಿರುವ ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಜಂಟಿ ಹೇಳಿಕೆಯನ್ನು ನೀಡಿವೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 08 ಕ್ಕೆ ದೇಶವ್ಯಾಪಿ ಬಂದ್ ಕರೆ ನೀಡಿದ ರೈತರು


'ನಾವು ಭಾರತೀಯ ರೈತರು ನಡೆಸುತ್ತಿರುವ ಬೃಹತ್ ಹೋರಾಟಕ್ಕೆ ನಮ್ಮ ಬೆಂಬಲವನ್ನು ನೀಡುತ್ತೇವೆ...ಮತ್ತು ಡಿಸೆಂಬರ್ 8 ರಂದು ಕೃಷಿ ಕಾನೂನುಗಳು ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕರೆ ನೀಡಿರುವ ಭಾರತ ಬಂದ್ ಗೆ ಬೆಂಬಲವನ್ನು ನೀಡುತ್ತೇವೆ  ಪ್ರತಿಪಕ್ಷದ ನಾಯಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ರೈತರ ಪ್ರತಿಭಟನೆ ನಡುವೆ ಪಂಜಾಬ್-ಹರಿಯಾಣ ಸಿಎಂ ಟ್ವಿಟ್ಟರ್ ವಾರ್, ಯಾರು ಏನು ಹೇಳಿದರು?


'ಈ ಹೊಸ ಕೃಷಿ ಕಾನೂನುಗಳು ಸಂಸತ್ತಿನಲ್ಲಿ  ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ರಚಿಸಿ ರಚನಾತ್ಮಕ ಚರ್ಚೆ ಮತ್ತು ಮತದಾನವನ್ನು ತಡೆಯುವುದು, ಭಾರತದ ಆಹಾರ ಭದ್ರತೆಗೆ ಭೀತಿಯನ್ನುಂಟು ಮಾಡುವುದು,ಭಾರತೀಯ ಕೃಷಿ ಮತ್ತು ನಮ್ಮ ರೈತರನ್ನು ನಾಶಪಡಿಸುವುದು, ಎಂಎಸ್ಪಿ ನಿರ್ಮೂಲನೆಗೆ ಆಧಾರವಾಗಿದೆ ಮತ್ತು ಭಾರತೀಯ ಕೃಷಿ ಮತ್ತು ನಮ್ಮ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕೃಷಿ-ವ್ಯಾಪಾರ ಸಂಸ್ಥೆಗಳ ನಿಯಂತ್ರಣದಲ್ಲಿ ಇಡುವುದಾಗಿ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


'ರೈತರ ಬೇಡಿಕೆ ಈಡೇರದೆ ಹೋದಲ್ಲಿ ಖೇಲ್ ರತ್ನಾ ಪ್ರಶಸ್ತಿ ವಾಪಸ್ ಮಾಡುತ್ತೇನೆ'


ವಿರೋಧ ಪಕ್ಷಗಳು ಸುಸ್ಥಾಪಿತ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ನಿಯಮಗಳನ್ನು ಪಾಲಿಸಬೇಕೆಂದು ಮತ್ತು 'ನಮ್ಮ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿವೆ.ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಡಿಎಂಕೆ ಎಂ.ಕೆ.ಸ್ಟಾಲಿನ್, ಎನ್‌ಸಿಪಿ ಮುಖಂಡ ಶರದ್ ಪವಾರ್, ರಾಷ್ಟ್ರೀಯ ಜನತಾದಳದ ಮುಖಂಡ ತೇಜಶ್ವಿ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಎಲ್ಲರೂ ಈ ಹೇಳಿಕೆಗೆ ಸಹಿ ಹಾಕಿದ್ದಾರೆ.


ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ  ಮತ್ತು ಹಲವಾರು ಎಡ ಪಕ್ಷಗಳು - ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ (ಎಂ), ಸಿಪಿಐ (ಎಂಎಲ್), ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷಗಳು ಸಹ ರೈತರಿಗೆ ಬೆಂಬಲ ವ್ಯಕ್ತಪಡಿಸಿವೆ.ಭಾನುವಾರ ಬೆಳಿಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರೈತರು ಮತ್ತು "ಭಾರತ್ ಬಂದ್" ಗೆ ಬೆಂಬಲವಾಗಿ ಟ್ವೀಟ್ ಮಾಡಿದ್ದಾರೆ, ಆಡಳಿತಾರೂ ಆಮ್ ಆದ್ಮಿ ಪಕ್ಷದ ಎಲ್ಲಾ ಸದಸ್ಯರು ಸ್ಥಗಿತಗೊಳಿಸುವಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.


ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸಿದ ಸಂಸದ ಸುಖದೇವ್ ಧಿಂಡ್ಸಾ


ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು "ಸಂಪೂರ್ಣ ಬೆಂಬಲ" ವನ್ನು ವಿಸ್ತರಿಸುವುದರೊಂದಿಗೆ ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಸಹ ಬಂದ್ ಕರೆಗೆ ಬೆಂಬಲ ನೀಡಲಿದ್ದು, ಎಲ್ಲಾ ಮೂರು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವಂತೆ ರೈತರನ್ನು ಒತ್ತಾಯಿಸಿದೆ.ಮೂರು ದಿನಗಳ ಕಾಲ ರಾಜ್ಯದ ವಿವಿಧ ಪ್ರದೇಶಗಳಲ್ಲಿ ರೈತರಧರಣಿಗೆ "ನೈತಿಕ ಬೆಂಬಲ" ನೀಡುವುದಾಗಿ ಬಂಗಾಳದ ಆಡಳಿತಾರೂ ತೃಣಮೂಲ ಕಾಂಗ್ರೆಸ್ ಹೇಳಿದೆ.


ರಾಜಕೀಯ ಪಕ್ಷಗಳಲ್ಲದೆ, ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಮತ್ತು ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್) ಸೇರಿದಂತೆ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ಬಂದ್‌ಗೆ ಬೆಂಬಲವಿದೆ.