New Rules: ಕೆಲವು ಕಾನೂನುಗಳು ಅಥವಾ ನಿಯಮಗಳು ವಿಚಿತ್ರ ಎನಿಸುತ್ತವೆ. ಆದರೆ ಸಮಾಜದ ಸುಧಾರಣೆಗೆ, ಅಕ್ರಮಗಳ ನಿಯಂತ್ರಣಕ್ಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಂತಹ ಕಾನೂನು ಅಥವಾ ನಿಯಮಗಳು ಅಗತ್ಯ ಎನ್ನುವುದನ್ನು ಕೂಡ ಮನಗಾಣಬೇಕಾಗುತ್ತದೆ. ಇದು ಕೂಡ ಅಂತಹುದೇ ಒಂದು ನಿಯಮ. ಭಿಕ್ಷುಕರಿಗೆ ಹಣ ಕೊಡಬೇಡಿ, ಕೊಟ್ಟರೆ ನಿಮ್ಮ ಮೇಲೆ ಎಫ್‌ಐ‌ಆರ್ ಹಾಕುತ್ತೇವೆ ಎನ್ನುವ ಹೊಸ ನಿಯಮ. 


COMMERCIAL BREAK
SCROLL TO CONTINUE READING

ಭಿಕ್ಷುಕರಿಗೆ ಹಣ ಕೊಟ್ಟರೆ ಪುಣ್ಯ ಬರುತ್ತೆ ಎನ್ನುವುದು ನಂಬಿಕೆ. ಆದರೆ, ಇನ್ಮುಂದೆ ಭಿಕ್ಷುಕರಿಗೆ ಹಣ ನೀಡಿದರೆ ಪುಣ್ಯ ಬರುತ್ತೋ... ಇಲ್ಲವೋ... ನಿಮ್ಮ ಮೇಲೆ ಪೊಲೀಸರು ಕೇಸ್ ಅಂತೂ ಹಾಕ್ತಾರೆ...  


ಇದನ್ನೂ ಓದಿ- ಇನ್ಮುಂದೆ‌ ಪಡಿತರ ಚೀಟಿಗೆ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಣೆ! ಹೊಸ ಪಡಿತರ ಪಡೆಯುವುದು ಹೇಗೆ?


ವಾಸ್ತವವಾಗಿ, ಮಧ್ಯಪ್ರದೇಶದ ಎರಡನೇ ಅತಿದೊಡ್ಡ ನಗರ ಮತ್ತು ಆ ರಾಜ್ಯದ ವಾಣಿಜ್ಯ ರಾಜಧಾನಿಯಾದ ಇಂದೋರ್ ನ ಜಿಲ್ಲಾಡಳಿತ ಪರಿಚಯ ಮಾಡುತ್ತಿರುವ ಹೊಸ ನಿಯಮ. 2025ರ ಜನವರಿ 1ರಿಂದ ಜಾರಿಯಾಗುತ್ತಿದೆ. ಜಿಲ್ಲಾಡಳಿತ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಭಿಕ್ಷೆ ಹಾಕುವವರ ಮೇಲೆ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿ ಕ್ರಮ ಜರುಗಿಸಲಾಗುತ್ತದೆ. ಇಂದೋರ್ ಸೇರಿದಂತೆ ಒಟ್ಟು 10 ನಗರಗಳಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದೆ.  


ಇಂದೋರ್ ಜಿಲ್ಲಾಡಳಿತವು 2024ರ ಡಿಸೆಂಬರ್ ಕೊನೆಯವರೆಗೆ ಭಿಕ್ಷಾಟನೆ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದರ ಮುಂದುವರೆದ ಭಾಗವಾಗಿ 2025ರ ಜನವರಿ 1ರಿಂದ ಭಿಕ್ಷಾಟನೆಗೆ ಪರೋಕ್ಷವಾಗಿ ಕಾರಣವಾಗುವ ಭಿಕ್ಷೆ ನೀಡುವವರ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಇಂದೋರ್ ಅನ್ನು ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ- ಭಾರತಕ್ಕೆ ಬಾಂಗ್ಲಾತಂಕ: ಸುದೀರ್ಘ, ಅಸುರಕ್ಷಿತ ಗಡಿಯಾದ್ಯಂತ ಅಕ್ರಮ ನುಸುಳುವಿಕೆಯ ಭೀತಿ


ಇಂದೋರ್ ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು ಅದು ಕೂಡ 2025ರ ಜನವರಿ 1ರಿಂದ ಜಾರಿಗೆ ಬರಲಿದೆ. ಭಿಕ್ಷಾಟನೆ ನಿರ್ಮೂಲನೆ ಆಗಬೇಕೆಂದರೆ ಭಿಕ್ಷೆ ಪಡೆಯುವವರು ಮತ್ತು ನೀಡುವವರು ಇಬ್ಬರ ಪಾತ್ರವೂ ಇರುವುದರಿಂದ ಭಿಕ್ಷೆ ನೀಡುವವರ ಮೇಲೂ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಲಾಗಿದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ 4.13  ಲಕ್ಷ ಭಿಕ್ಷುಕರು ಮತ್ತು ಅಲೆಮಾರಿ ಜನರಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.