ರಾಜ್ಯದ 31 ಲಕ್ಷ ಜನರಿಗೆ ಗುಡ್‌ ನ್ಯೂಸ್‌... ಇನ್ಮುಂದೆ‌ ಪಡಿತರ ಚೀಟಿಗೆ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಣೆ! ಹೊಸ ಪಡಿತರ ಪಡೆಯುವುದು ಹೇಗೆ?

Telangana government new ration card: ತೆಲಂಗಾಣ ವಿಧಾನ ಪರಿಷತ್ತಿನಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಎಂಎಲ್ಸಿಗಳಾದ ಕೋದಂಡ ರೆಡ್ಡಿ, ಮಿರ್ಜಾ ರಿಯಾಜುಲ್ ಹಸನ್, ಜೀವನ್ ರೆಡ್ಡಿ, ಸತ್ಯವತಿ ರಾಥೋಡ್ ಮತ್ತಿತರರು ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರಿಗೆ ಉತ್ತರ ನೀಡಿ ಹೊಸ ಪಡಿತರ ಚೀಟಿ ವಿಚಾರ ಪ್ರಸ್ತಾಪಿಸಿದರು.

Written by - Bhavishya Shetty | Last Updated : Dec 16, 2024, 06:24 PM IST
    • ಪಡಿತರ ಚೀಟಿಗಾಗಿ ಕಾದು ಕುಳಿತಿದ್ದ ಜನರಿಗೆ ತೆಲಂಗಾಣ ಸರ್ಕಾರದಿಂದ ಸಿಹಿ ಸುದ್ದಿ
    • ಹೊಸ ಬಿಳಿ ಪಡಿತರ ಚೀಟಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.
    • ಹತ್ತು ಲಕ್ಷ ಹೊಸ ಪಡಿತರ ಚೀಟಿಗಳ ಮಂಜೂರು

Trending Photos

ರಾಜ್ಯದ 31 ಲಕ್ಷ ಜನರಿಗೆ ಗುಡ್‌ ನ್ಯೂಸ್‌... ಇನ್ಮುಂದೆ‌ ಪಡಿತರ ಚೀಟಿಗೆ ಬದಲಾಗಿ ಸ್ಮಾರ್ಟ್ ಕಾರ್ಡ್ ವಿತರಣೆ! ಹೊಸ ಪಡಿತರ ಪಡೆಯುವುದು ಹೇಗೆ? title=
Ration card

Telangana government new ration card: ಪಡಿತರ ಚೀಟಿಗಾಗಿ ಕಾದು ಕುಳಿತಿದ್ದ ಜನರಿಗೆ ತೆಲಂಗಾಣ ಸರ್ಕಾರದಿಂದ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಸಂಕ್ರಾಂತಿ ನಂತರ ಹೊಸ ಬಿಳಿ ಪಡಿತರ ಚೀಟಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಹತ್ತು ಲಕ್ಷ ಹೊಸ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗುತ್ತಿದ್ದು, ಪಡಿತರ ಚೀಟಿಗೆ ಬದಲಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಈ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ನಾಗರಿಕ ಸರಬರಾಜು ಸಚಿವ ಉತ್ತಮ್ ಕುಮಾರ್ ರೆಡ್ಡಿ ಘೋಷಿಸಿದರು.

ಇದನ್ನೂ ಓದಿ: ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌

ತೆಲಂಗಾಣ ವಿಧಾನ ಪರಿಷತ್ತಿನಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಎಂಎಲ್ಸಿಗಳಾದ ಕೋದಂಡ ರೆಡ್ಡಿ, ಮಿರ್ಜಾ ರಿಯಾಜುಲ್ ಹಸನ್, ಜೀವನ್ ರೆಡ್ಡಿ, ಸತ್ಯವತಿ ರಾಥೋಡ್ ಮತ್ತಿತರರು ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರಿಗೆ ಉತ್ತರ ನೀಡಿ ಹೊಸ ಪಡಿತರ ಚೀಟಿ ವಿಚಾರ ಪ್ರಸ್ತಾಪಿಸಿದರು.

ಸರ್ಕಾರದ ಅಂದಾಜಿನ ಪ್ರಕಾರ 10 ಲಕ್ಷ ಹೊಸ ಪಡಿತರ ಚೀಟಿಗಳು ಮಂಜೂರಾಗಲಿವೆ. ಇದರಿಂದ 31 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು. ಪಡಿತರ ಚೀಟಿ ನೀಡಲು ಜಾತಿ ಗಣತಿ ಸಮೀಕ್ಷೆಯನ್ನು ಆಧಾರವಾಗಿ ಬಳಸಿಕೊಳ್ಳಲಾಗುವುದು ಎಂದರು. ಪಡಿತರ ಚೀಟಿಯಿಂದ ಸರ್ಕಾರಕ್ಕೆ ರೂ.956 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ವಿವರಿಸಿದರು.

ಪಡಿತರ ಚೀಟಿಯಲ್ಲಿ ಹೆಚ್ಚುವರಿ ಹೆಸರು ನೋಂದಾಯಿಸಲು ಮೀ ಸೇವಾ ಕೇಂದ್ರದ ಮೂಲಕ 18 ಲಕ್ಷ ಅರ್ಜಿಗಳು ಬಂದಿವೆ ಎಂದು ಸಚಿವ ಉತ್ತಮ್‌ಕುಮಾರ್‌ ರೆಡ್ಡಿ ಬಹಿರಂಗಪಡಿಸಿದರು.

ಇದನ್ನೂ ಓದಿ: ಪಾಸಿಟಿವಿಟಿ ಅಂತಲೇ ಫೇಮಸ್‌ ಆಗಿರೋ ಬಿಗ್‌ ಬಾಸ್‌ ಸ್ಪರ್ಧಿ ಗೌತಮಿ ಜಾಧವ್‌ ಯಾರು ಗೊತ್ತಾ? ಇವ್ರ ಮಾವ ಕನ್ನಡದ ಹೆಸರಾಂತ ವ್ಯಕ್ತಿ...ಕಿಚ್ಚ ಸುದೀಪ್‌ ಗೆಳೆಯನೂ ಹೌದು!

ಎಲ್ಲವನ್ನೂ ಅಧ್ಯಯನ ಮಾಡಿರುವ ಉಪಸಮಿತಿ ಹೊಸ ಬಿಳಿ ಪಡಿತರ ಚೀಟಿ ನೀಡಲು ಅರ್ಹತಾ ಮಾನದಂಡ ನಿರ್ಧರಿಸಿ ಮಾಡಿರುವ ಶಿಫಾರಸುಗಳನ್ನು ಸಚಿವ ಸಂಪುಟದ ಮುಂದೆ ಇಡಲಾಗಿದೆ. ಅಲ್ಲದೆ, ಖಾಲಿ ಇರುವ ನ್ಯಾಯ ಬೆಲೆ ಅಂಗಡಿಗಳ ವಿತರಕರ ಬದಲಾವಣೆ ಪ್ರಕ್ರಿಯೆ ನಡೆಸಿ ತಾಂಡಾಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಅಂಗಡಿಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವ ಉತ್ತಮ್ ಘೋಷಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News