ಮಗುವನ್ನು ತಾಯಿಯಿಂದ ದೂರ ಮಾಡುವುದು ಕ್ರೌರ್ಯ ಮತ್ತು ಮಾನಸಿಕ ಕಿರುಕುಳಕ್ಕೆ ಸಮ: ಬಾಂಬೆ ಹೈಕೋರ್ಟ್

Bombay High Court: ಮಗುವನ್ನು ತಾಯಿಯಿಂದ ಬೇರ್ಪಡಿಸುವುದು "ಕ್ರೌರ್ಯ"ಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದು ಖಂಡಿತವಾಗಿಯೂ ಮಗುವಿನ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟುಮಾಡುತ್ತದೆ" ಎಂದು ಬಾಂಬೆ ಹೈಕೋರ್ಟ್ ಪೀಠ ಹೇಳಿದೆ.

Written by - Puttaraj K Alur | Last Updated : Dec 17, 2024, 11:20 PM IST
  • ಮಗುವನ್ನು ತಾಯಿಯಿಂದ ಬೇರ್ಪಡಿಸುವುದು "ಕ್ರೌರ್ಯ” ಎಂದು ಪರಿಗಣಿಸಲಾಗುತ್ತದೆ
  • ಮಗುವಿನ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟು ಮಾಡುತ್ತೆ
  • ಇದು ಮಾನಸಿಕ ಕಿರುಕುಳಕ್ಕೆ ಸಮಾನವೆಂದು ಅಭಿಪ್ರಾಯಪಟ್ಟ ಬಾಂಬೆ ಹೈಕೋರ್ಟ್‌
ಮಗುವನ್ನು ತಾಯಿಯಿಂದ ದೂರ ಮಾಡುವುದು ಕ್ರೌರ್ಯ ಮತ್ತು ಮಾನಸಿಕ ಕಿರುಕುಳಕ್ಕೆ ಸಮ: ಬಾಂಬೆ ಹೈಕೋರ್ಟ್   title=
ಬಾಂಬೆ ಹೈಕೋರ್ಟ್‌

Bombay High Court: ಅಪ್ರಾಪ್ತ ಮಗುವನ್ನು ತನ್ನ ತಾಯಿಯನ್ನು ಭೇಟಿಯಾಗದಂತೆ ತಡೆಯುವುದು ಅಥವಾ ತಾಯಿಯಿಂದ ಬೇರ್ಪಡಿಸುವುದು ಕ್ರೌರ್ಯ ಮತ್ತು ಕಿರುಕುಳಕ್ಕೆ ಸಮಾನ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಅಭಿಪ್ರಾಯಪಟ್ಟಿದೆ. ಭಾರತೀಯ ದಂಡ ಸಂಹಿತೆ (IPC)ಯ ಪ್ರಕಾರ, ಇದನ್ನು ಒಪ್ಪಲು ಸಾಧ್ಯವಿಲ್ಲವೆಂದು ಕೋರ್ಟ್‌ ಅಭಿಪ್ರಾಯಟ್ಟಪಟ್ಟಿದೆ. 

ಮಹಿಳೆಯೊಬ್ಬರು ಅತ್ತೆಯ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ನ್ಯಾಯಾಲಯವು ನಿರಾಕರಿಸಿದ್ದು, ಆಕೆಗೆ ಉಂಟಾದ ಮಾನಸಿಕ ಯಾತನೆಯನ್ನು ಉಲ್ಲೇಖಿಸಿದೆ. ಡಿಸೆಂಬರ್ 11ರಂದು ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ರೋಹಿತ್ ಜೋಶಿ ಅವರಿದ್ದ ಪೀಠ, ನಾಲ್ಕು ವರ್ಷದ ಮಗುವನ್ನು ತಾಯಿಯಿಂದ ಬೇರ್ಪಡಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498-A ಅಡಿಯಲ್ಲಿ ಮಾನಸಿಕ ಕಿರುಕುಳಕ್ಕೆ ಸಮವೆಂದು ಒತ್ತಿಹೇಳಿದೆ.   

ಇದನ್ನೂ ಓದಿ: ಮಕ್ಕಳಾಗುತ್ತದೆ ಎನ್ನುವ ಮಾಂತ್ರಿಕ ಮಾತು ನಂಬಿ ಜೀವಂತ ಕೋಳಿ ಮರಿ ನುಂಗಿ ಪ್ರಾಣ ಬಿಟ್ಟ ವ್ಯಕ್ತಿ !ದೇಹದಿಂದ ಜೀವಂತವಾಗಿಯೇ ಹೊರ ಬಂತು ಕೋಳಿ ಮರಿ

"ನಾಲ್ಕು ವರ್ಷದ ಪುಟ್ಟ ಮಗುವನ್ನು ತನ್ನ ತಾಯಿಯಿಂದ ದೂರವಿಡುವುದು ಮಾನಸಿಕ ಕಿರುಕುಳಕ್ಕೆ ಸಮವಾಗಿದ್ದು, ಇದು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ. ಇದು ಖಂಡಿತವಾಗಿಯೂ ಮಗುವಿನ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಹಾನಿಯನ್ನುಂಟುಮಾಡುತ್ತದೆ" ಎಂದು ಪೀಠ ಹೇಳಿದೆ. “ಮಾನಸಿಕ ಕಿರುಕುಳವು ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ, ಇದು ತಪ್ಪು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಆರೋಪಗಳ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯವು ಪ್ರಕರಣವನ್ನು ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿ, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರಲು ನಿರ್ಧರಿಸಿದೆ. 

ಮಹಿಳೆಯು 2022ರಲ್ಲಿ ಜಲ್ನಾ ಜಿಲ್ಲೆಯಲ್ಲಿ ತನ್ನ ಮಾವ, ಅತ್ತೆ ಮತ್ತು ನಾದಿನಿಯ ವಿರುದ್ಧ ಕ್ರೌರ್ಯ, ಕಿರುಕುಳ ಮತ್ತು ಬೆದರಿಕೆಯ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಳು. 2019ರಲ್ಲಿ ಈ ಮಹಿಳೆ ವಿವಾಹವಾಗಿದ್ದಳು. ಆಕೆಯ ಪತಿ ಮತ್ತು ಅವರ ಕುಟುಂಬವು ತನ್ನ ಪೋಷಕರಿಂದ ಹಣಕ್ಕಾಗಿ ಬೇಡಿಕೆಯಿಟ್ಟರು. ದೈಹಿಕ ಮತ್ತು ಮೌಖಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದಳು. 2022ರ ಮೇ ತಿಂಗಳಿನಲ್ಲಿ ತನ್ನ ಮಗಳಿಂದ ದೂರ ಮಾಡಿ ನನ್ನನ್ನು ಗಂಡನ ಮನೆಯಿಂದ ಹೊರಹಾಕಲಾಯಿತು ಅಂತಾ ಆಕೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಶಬರಿಮಲೆ ಸನ್ನಿಧಾನದ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ ಮಾಲಾಧಾರಿ! ಕಾರಣ...

ಮಹಿಳೆ ತನ್ನ ಮಗುವನ್ನು ತನಗೆ ನೀಡುವಂತೆ ಕೋರಿಕೊಂಡಿದ್ದಳು. 2023ರಲ್ಲಿ ಮಗುವನ್ನ ಪತ್ನಿಗೆ ಹಸ್ತಾಂತರಿಸುವಂತೆ ಪತಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶಿಸಿತ್ತು. ಆದರೆ ಈ ಆದೇಶವನ್ನು ಪಾಲಿಸಿದ ಕಾರಣ ಮಗು ಪತಿಯ ಬಳಿಯೇ ಉಳಿದಿದೆ. ಪತಿ ಇರುವ ಸ್ಥಳವನ್ನು ಮರೆಮಾಚಲು ಅತ್ತೆಯಂದಿರು ಸಹಕರಿಸಿದ್ದಾರೆಂಬುದನ್ನು ಸಹ ಹೈಕೋರ್ಟ್‌ ಗಮನಿಸಿದೆ. “ಸಕ್ಷಮ ನ್ಯಾಯಾಲಯವು ನೀಡಿದ ನ್ಯಾಯಾಂಗ ಆದೇಶವನ್ನು ಪಾಲಿಸಲಾಗುತ್ತಿಲ್ಲ. ಮಗಳು ಗಂಡನೊಂದಿಗಿದ್ದರೂ, ಇಲ್ಲಿರುವ ಅರ್ಜಿದಾರರು ಪತಿಗೆ ಸಹಾಯ ಮಾಡುತ್ತಿದ್ದಾರೆಂದು ನಾವು ಈಗಾಗಲೇ ದಾಖಲಿಸಿದ್ದೇವೆ, ಅವರು ಇರುವ ಸ್ಥಳವನ್ನು ಬಹಿರಂಗಪಡಿಸುತ್ತಿಲ್ಲವೆಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ಆದೇಶಗಳನ್ನು ನಿರ್ಲಕ್ಷಿಸುವವರು ಕಾನೂನು ಪರಿಹಾರಗಳನ್ನು ಪಡೆಯಲು ಸಾಧ್ಯವಿಲ್ಲವೆಂದು ಪೀಠವು ಖಡಕ್‌ ಎಚ್ಚರಿಕೆ ನೀಡಿದೆ. ಆದಾಗ್ಯೂ ತಮ್ಮ ವಿರುದ್ಧ ಪತ್ನಿ ಮಾಡಿರುವ ಆರೋಪಗಳನ್ನು ಆಕೆಯ ಪತಿ ನಿರಾಕರಿಸಿದ್ದು, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News