ಕಾಶ್ಮೀರ ಕಣಿವೆಯಿಂದ 200ಕ್ಕೂ ಹೆಚ್ಚು ಯುವಕರು ಕಣ್ಮರೆ
ಕಾಶ್ಮೀರ ಕಣಿವೆಯಿಂದ 200ಕ್ಕೂ ಹೆಚ್ಚು ಯುವಕರು ನಾಪತ್ತೆಯಾದ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ನವದೆಹಲಿ: ಕಾಶ್ಮೀರ ಕಣಿವೆಯಿಂದ 200 ಕ್ಕೂ ಹೆಚ್ಚು ಯುವಕರು ನಾಪತ್ತೆಯಾದ ಸುದ್ದಿ ಭದ್ರತಾ ಸಂಸ್ಥೆಗಳ ಕಿವಿ ನೆಟ್ಟಗಾಗಿಸಿದೆ. ಈ ಯುವಕರು ಪಾಕಿಸ್ತಾನಿ ವೀಸಾಗಳನ್ನು ಹೊಂದಿದ್ದರು, ಆದ್ದರಿಂದ ಪಾಕಿಸ್ತಾನವು (Pakistan) ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿದೆ ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಜನವರಿ 2017 ರಿಂದ ಜಮ್ಮು ಮತ್ತು ಕಾಶ್ಮೀರದ 399 ಯುವಕರಿಗೆ ಪಾಕಿಸ್ತಾನದ ಹೈಕಮಿಷನ್ ಪಾಕಿಸ್ತಾನ ವೀಸಾಗಳನ್ನು ನೀಡಿದೆ ಅದರಲ್ಲಿ 218 ಮಂದಿ ಬಗ್ಗೆ ಇನ್ನೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಫೆಬ್ರವರಿ 14, 2019 ರಂದು ಪುಲ್ವಾಮಾ (Pulwama) ದಾಳಿಯ ಮಾದರಿಯಲ್ಲಿ ಕಣಿವೆಯಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ತನ್ನ ಬಲೆಗೆ ಬೀಳಿಸುತ್ತಿದೆ ಎಂದು ಗುಪ್ತಚರ ಮೂಲಗಳು ನಮ್ಮ ಅಂಗಸಂಸ್ಥೆ ಚಾನೆಲ್ ವಿಯಾನ್‌ಗೆ ತಿಳಿಸಿವೆ. ಇದಕ್ಕಾಗಿ ಯುವಕರಿಗೆ ಸೂಕ್ತವಾಗಿ ತರಬೇತಿ ನೀಡಲಾಗುತ್ತದೆ, ಅವರಿಗೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸಲು ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಪಾಕಿಸ್ತಾನದ ಪತ್ತೇದಾರಿ ಡ್ರೋನ್ ಹೊಡೆದುರುಳಿಸಿದ BSF
ಕಳೆದ ಕೆಲವು ತಿಂಗಳುಗಳಲ್ಲಿ, ದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿ ನೀಡಿರುವ ವೀಸಾಗಳ ಮೇಲೆ ಪಾಕಿಸ್ತಾನಕ್ಕೆ ತೆರಳಿದ ಅನೇಕ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿವೆ ಅಥವಾ ಅವರ ಬಗ್ಗೆ ಪ್ರಕರಣ ದಾಖಲಿಸಿವೆ. ಏಪ್ರಿಲ್ 5 ರಂದು ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ 5 ಉಗ್ರರನ್ನು ಕೊಲ್ಲಲಾಯಿತು. ಅದರಲ್ಲಿ ಮೂವರು ಆದಿಲ್ ಹುಸೇನ್ ಮಿರ್, ಉಮರ್ ನಜೀರ್ ಖಾನ್ ಮತ್ತು ಸಜ್ಜಾದ್ ಅಹ್ಮದ್ ಜಮ್ಮು ಮತ್ತು ಕಾಶ್ಮೀರದವರು ಮತ್ತು 2018 ರ ಏಪ್ರಿಲ್ನಲ್ಲಿ ಪಾಕಿಸ್ತಾನ ಹೈಕಮಿಷನ್ ನೀಡಿದ ವೀಸಾದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಪಾಕಿಸ್ತಾನ ಹೈಕಮಿಷನ್‌ನ ಪಾತ್ರದ ಬಗ್ಗೆ ಪ್ರಶ್ನೆ?
ಈ ವಾರದ ಆರಂಭದಲ್ಲಿ ಮುಂದಿನ ಏಳು ದಿನಗಳಲ್ಲಿ ತನ್ನ ಹೈಕಮಿಷನ್‌ನಲ್ಲಿನ ನೌಕರರ ಸಂಖ್ಯೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವಂತೆ ಭಾರತ ಪಾಕಿಸ್ತಾನವನ್ನು ಕೇಳಿದೆ. ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಭಾರತದಲ್ಲಿ ವಾಸಿಸುವ ನೌಕರರು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವುದು ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರದ ಪರವಾಗಿ ಹೇಳಲಾಗಿತ್ತು. ಅದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಡಿಎಸ್ಪಿ ದೇವೇಂದ್ರ ಸಿಂಗ್ ಅವರೊಂದಿಗೆ ಬಂಧಿಸಲ್ಪಟ್ಟ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಾದ ನವಾಬ್ ಬಾಬು ಮತ್ತು ಆಸಿಫ್ ಅಹ್ಮದ್ ಅವರ ಪ್ರಕರಣದಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾಕಿಸ್ತಾನ ಹೈಕಮಿಷನ್ನ ಸಹಾಯಕ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿದೆ ವಹಿವಾಟಿನಲ್ಲಿ ಮುಖ್ಯ ಪಾತ್ರ ವಹಿಸುತ್ತಿತ್ತು ಎಂದು ಉಲ್ಲೇಖಿಸಿದೆ.
ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ
ಪಾಕಿಸ್ತಾನದ ಮಿಷನ್‌ನ ಮೊದಲ ಕಾರ್ಯದರ್ಶಿ ಮುದಾಸರ್ ಇಕ್ಬಾಲ್ ಚೀಮಾ ಅವರ ಹೆಸರು ಭಯೋತ್ಪಾದಕ ಧನಸಹಾಯಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಎನ್‌ಐಎ ತನಿಖೆಯಲ್ಲಿ ಹೊರಬಂದಿದೆ. 2015 ರ ಸೆಪ್ಟೆಂಬರ್‌ನಿಂದ 2016 ರ ನವೆಂಬರ್ ವರೆಗೆ ಮಿಷನ್‌ನಲ್ಲಿದ್ದ ಚೀಮಾ ಮುಖ್ಯ ಆರೋಪಿ ಜಹೂರ್ ಅಹ್ಮದ್ ಶಾ ವಟಾಲಿಗೆ 2 ಕಂತುಗಳಲ್ಲಿ 70 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು. ಪಾಕಿಸ್ತಾನದ ಹೈಕಮಿಷನ್ನಿಂದ ಹುರಿಯತ್ ನಾಯಕರಿಗೆ ಹಣವನ್ನು ಕಳುಹಿಸುವಲ್ಲಿ ವಟಾಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದಲ್ಲದೆ ಪಾಕಿಸ್ತಾನದ ಅಧಿಕಾರಿಗಳ ಮೇಲೂ ಗೂಢಚರ್ಯೆ ಆರೋಪವಿದೆ. ಮೇ 31 ರಂದು ಪಾಕಿಸ್ತಾನದ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳನ್ನು ದೆಹಲಿಯ ಕರೋಲ್ ಬಾಗ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು, ನಂತರ ಅವರನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಲಾಯಿತು.