ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ

ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ 2020ರ ವರದಿಯು ಬಹಳಷ್ಟು ಸಾಕಷ್ಟು ವಿಷಯಗಳನ್ನು ಬಹಿರಂಗಪಡಿಸಿದೆ.

Last Updated : Jun 15, 2020, 12:07 PM IST
ಚೀನಾ- ಪಾಕ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು! ಆದರೂ ಭಾರತಕ್ಕಿಲ್ಲ ಹೆದರಿಕೆ title=

ನವದೆಹಲಿ: ಭಾರತವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶ. ಆದರೆ ಅಂತರರಾಷ್ಟ್ರೀಯ ಥಿಂಕ್ ಟ್ಯಾಂಕ್ ಆಶ್ಚರ್ಯಕರ ಮಾಹಿತಿಯನ್ನು ನೀಡಿದೆ. ಅಂತರರಾಷ್ಟ್ರೀಯ ಥಿಂಕ್ ಟ್ಯಾಂಕ್ ಪ್ರಕಾರ, ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳು ಭಾರತಕ್ಕಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು (Nuclear weapons) ಹೊಂದಿವೆ.

ಚೀನಾದಲ್ಲಿ 320 ಮತ್ತು ಪಾಕಿಸ್ತಾನ (Pakistan) ದಲ್ಲಿ 160 ಪರಮಾಣು ಶಸ್ತ್ರಾಸ್ತ್ರಗಳಿವೆ ಮತ್ತು ಭಾರತದಲ್ಲಿ 150 ಪರಮಾಣು ಶಸ್ತ್ರಾಸ್ತ್ರಗಳಿವೆ. ಸ್ಟಾಕ್ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ 2020 ರ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

 ಚೀನಾ (China) ದೊಂದಿಗೆ ಭಾರತದ ಲಡಾಖ್ ವಿವಾದ ನಡೆಯುತ್ತಿರುವ ಸಮಯದಲ್ಲಿ ಈ ವರದಿ ಬಂದಿದೆ. ಇತ್ತೀಚೆಗೆ ಚೀನಾ ಜೊತೆ ಭಾರತದ ಗಡಿಯಲ್ಲಿನ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಉಭಯ ದೇಶಗಳ ಪಡೆಗಳು ಹಂತಹಂತವಾಗಿ ಹಿಂದೆ ಸರಿಯುತ್ತಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರ್ವಾನೆ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಜನರಲ್ ನರ್ವಾನೆ ಅವರ ಈ ಹೇಳಿಕೆಯು ಗಾಲ್ವಾನ್ ಕಣಿವೆ ಪ್ರದೇಶದಿಂದ ಸೈನ್ಯವನ್ನು ಪರಸ್ಪರ ಹಿಂತೆಗೆದುಕೊಳ್ಳುವ ಮೊದಲ ಅಧಿಕೃತ ದೃಢೀಕರಣವಾಗಿದೆ.

ಭಾರತದ ಬಗ್ಗೆ ನೇಪಾಳದ ವರ್ತನೆ ಬದಲಾವಣೆ ಹಿಂದೆ ಚೀನಾ-ಪಾಕ್ ಪಿತೂರಿ

ಜನರಲ್ ನಾರ್ವಾನೆ ಅವರು ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪೆರೇಡ್ನ ಸಂದರ್ಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ಸಂವಾದವು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಗ್ಗೆ ಪರಿಗಣಿಸಲಾಗುತ್ತಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ತೀವ್ರಗೊಂಡ Boycott Chinese products ಕೂಗು, ಜೂನ್ 10ರಿಂದ ದೇಶವ್ಯಾಪಿ CAIT ಅಭಿಯಾನ

ಎರಡೂ ಕಡೆಯವರು ಹಂತಹಂತವಾಗಿ ಹಿಂದೆ ಸರಿಯುತ್ತಿದ್ದಾರೆ. ನಾವು ಅದನ್ನು ಗಾಲ್ವಾನ್ ನದಿಯ ಪ್ರದೇಶವಾದ ಉತ್ತರದಿಂದ ಪ್ರಾರಂಭಿಸಿದ್ದೇವೆ. ನಾವು ಬಹಳ ಅರ್ಥಪೂರ್ಣ ಸಂಭಾಷಣೆ ನಡೆಸಿದೆವು ಮತ್ತು ನಾನು ನುಡಿದಂತೆ ನಡೆಯುತ್ತಿದ್ದು ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
 

Trending News