ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆ ಶನಿವಾರ (ಜೂನ್ 20) ಪಾಕಿಸ್ತಾನದ ಪತ್ತೇದಾರಿ ಡ್ರೋನ್ (Spy drone) ಅನ್ನು ಹೊಡೆದುರುಳಿಸಿದೆ. ವರದಿಯ ಪ್ರಕಾರ ಕತುವಾ ಜಿಲ್ಲೆಯ ಹಿರಾನಗರ ತಾಲ್ಲೂಕಿನ ರಾತುವಾ ಗ್ರಾಮದಲ್ಲಿರುವ ಫಾರ್ವರ್ಡ್ ಪೋಸ್ಟ್ನಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
19 ಬೆಟಾಲಿಯನ್ನ ಬಿಎಸ್ಎಫ್ನ ಪೆಟ್ರೋಲಿಂಗ್ ತಂಡವು ಹಿರಾನಗರ ಸೆಕ್ಟರ್ನ ಕತುವಾ ಪ್ರದೇಶದಲ್ಲಿ ಪಾಕಿಸ್ತಾನದ (Pakistan) ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಕಂಡು ಅದರ ಮೇಲೆ ಎಂಟರಿಂದ ಒಂಬತ್ತು ಸುತ್ತು ಗುಂಡು ಹಾರಿಸಿ ಅದನ್ನು ನೆಲಕಚ್ಚಿಸಿದೆ.
ಶನಿವಾರ ಬೆಳಿಗ್ಗೆ 5.10 ರ ಸುಮಾರಿಗೆ ಪಾಕಿಸ್ತಾನದ ಪತ್ತೇದಾರಿ ಡ್ರೋನ್ ಬಿಎಸ್ಎಫ್ನ (BSF) ಬಾರ್ಡರ್ ಔಟ್ಪೋಸ್ಟ್ ಪನ್ಸಾರ್ ಬಳಿ ಹಾರಾಡುತ್ತಿರುವುದು ಗಮನಕ್ಕೆ ಬಂದಿದೆ. ಡ್ರೋನ್ ಅನ್ನು ಪತ್ತೆಹಚ್ಚಿದ ನಂತರ ಸಬ್ ಇನ್ಸ್ಪೆಕ್ಟರ್ ದೇವೇಂದರ್ ಸಿಂಗ್ ಅವರು 9 ಎಂಎಂ ಬ್ಯಾರೆಟ್ಟಾದ 8 ಸುತ್ತುಗಳನ್ನು ಹಾರಿಸಿದರು ಮತ್ತು ಅದನ್ನು ಹೊಡೆದುರುಳಿಸಿದರು.
ಬಾರ್ಡರ್ ಔಟ್ಪೋಸ್ಟ್ ಪನ್ಸಾರ್ ಬಳಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ.
ಡ್ರೋನ್ ಅನ್ನು ಹೊಡೆದುರುಳಿಸಿದ ಪ್ರದೇಶವು ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿಯಿಂದ ಭಾರತದ ಕಡೆಯಿಂದ ಸುಮಾರು 250 ಮೀಟರ್ ದೂರದಲ್ಲಿದೆ.