ನವದೆಹಲಿ: ಸೋಮವಾರ ರಾತ್ರಿ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಪಾಕಿಸ್ತಾನದ ಡ್ರೋನ್ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸುತ್ತಿರುವುದನ್ನು ಪತ್ತೆ ಹಚ್ಚಿದ ನಂತರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಕೆಲವು ವಾರಗಳ ಹಿಂದೆ ರಾಜ್ಯದ ತಾರ್ನ್ ತರಣ್ ಜಿಲ್ಲೆಯಲ್ಲಿ ಹೆವಿ ಡ್ಯೂಟಿ ಮಾನವರಹಿತ ವೈಮಾನಿಕ ವಾಹನಗಳು ಹೆಚ್ಚಿನ ಸಂಖ್ಯೆಯ ಎಕೆ -47 ರೈಫಲ್‌ಗಳು, ಉಪಗ್ರಹ ಫೋನ್‌ಗಳು ಮತ್ತು ಗ್ರೆನೇಡ್‌ಗಳನ್ನು ಬಿಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವವನ್ನು ಪಡೆದಿದೆ.


"ಸೋಮವಾರ ರಾತ್ರಿ, ಫಿರೋಜ್‌ಪುರದ ಹುಸೇನಿವಾಲಾ ಗಡಿ ಪೋಸ್ಟ್‌ನಲ್ಲಿರುವ ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನ ಕಡೆಯಿಂದ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುವ ಡ್ರೋನ್ ಅನ್ನು ಗುರುತಿಸಿದ್ದಾರೆ. ಬಿಎಸ್ಎಫ್ ಪಂಜಾಬ್ ಪೊಲೀಸರನ್ನು ಎಚ್ಚರಿಸಿದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಬಿಎಸ್ಎಫ್ ಮೂಲವನ್ನು ಉಲ್ಲೇಖಿಸಿದೆ. ಡ್ರೋನ್ ಮಧ್ಯರಾತ್ರಿಯ ಆಸುಪಾಸಿನಲ್ಲಿ ಕಣ್ಮರೆಯಾಗುವ ಮೊದಲು ಗಡಿ ಹೊರಠಾಣೆ ಹತ್ತಿರ ಭಾರತೀಯ ಭೂಪ್ರದೇಶಕ್ಕೆ ಒಂದು ಕಿಲೋಮೀಟರ್ ದೂರದಲ್ಲಿತ್ತು ಎಂದು ವರದಿಯಾಗಿದೆ.  


ಆ ರಾತ್ರಿಯ ಮುಂಚೆಯೇ, ಆ ಪ್ರದೇಶದ ಬಿಎಸ್ಪಿ ಸಿಬ್ಬಂದಿ ರಾತ್ರಿ 10 ರಿಂದ 10:40 ರ ನಡುವೆ ನಾಲ್ಕು ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಗಡಿಯ ಪಾಕಿಸ್ತಾನ ಭಾಗದಲ್ಲಿ ಡ್ರೋನ್‌ಗಳು ಅನುಮಾನಾಸ್ಪದವಾಗಿ ಹಾರುತ್ತಿರುವುದನ್ನು ನೋಡಿದ್ದರು ಎನ್ನಲಾಗಿದೆ.


ಕೇಂದ್ರ ಸರ್ಕಾರವು ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ನಿರಂತರವಾಗಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ ಎನ್ನುವ ಮಾಹಿತಿ ಇದೆ.