ಶ್ರೀನಗರ: ಪಾಕಿಸ್ತಾನ ಮತ್ತು ಅದರ ಮಿಲಿಟರಿಯ ದುರುದ್ದೇಶವನ್ನು ಬಿಚ್ಚಿಟ್ಟ ಭಾರತೀಯ ಸೇನೆಯು ಬುಧವಾರ, ನೆರೆಯ ರಾಷ್ಟ್ರ ಭಾರತದೊಳಗೆ ಗರಿಷ್ಠ ಭಯೋತ್ಪಾದಕರನ್ನು ಒಳನುಸುವಿಕೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಾದಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಭಂಗಗೊಳಿಸಲು ಪಾಕಿಸ್ತಾನ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದೂರಿದರು.


COMMERCIAL BREAK
SCROLL TO CONTINUE READING

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್, ಪಾಕಿಸ್ತಾನದಿಂದ ಉಗ್ರರ ಒಳನುಸುಳುವಿಕೆ ಪ್ರಯತ್ನ ಪ್ರತಿದಿನವೂ ನಡೆಯುತ್ತಿವೆ ಎಂದು ಅವರು ಹೇಳಿದರು. ದಿನದ 24 ಗಂಟೆ ಪಾಕಿಸ್ತಾನ ಸೇನೆಯ ಸಹಾಯದಿಂದ ಗಡಿ ಸುತ್ತಲೂ ಒಳನುಗ್ಗುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.


ಪೂಂಚ್ ಮತ್ತು ರಾಜೌರಿ ಪ್ರದೇಶದಲ್ಲಿ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಸಂಶಯ ವ್ಯಕ್ತವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಧಿಲ್ಲಾನ್ ದೃಢಪಡಿಸಿದರು. ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ಸಂಬಂಧಿಸಿದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಆಗಸ್ಟ್ 21 ರಂದು ಜಮ್ಮು ಮತ್ತು ಕಾಶ್ಮೀರದಿಂದ ಬಂಧಿಸಿರುವುದಾಗಿ ಸೇನೆಯು ತಿಳಿಸಿದೆ. ಅದು ಭಯೋತ್ಪಾದಕರ ತಪ್ಪೊಪ್ಪಿಗೆಯ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿತು.


ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮೈ ಎಲ್ಲಾ ಕಣ್ಣಾಗಿ ಹಗಲು-ರಾತ್ರಿ ಎನ್ನದೆ ಕಟ್ಟೆಚ್ಚರ ವಹಿಸಿರುವ ಭಾರತೀಯ ಭದ್ರತಾ ಸಂಸ್ಥೆಗಳು ಖಲೀಲ್ ಅಹ್ಮದ್ ಮತ್ತು ನಜೀಮ್ ಖೋಕರ್ ಎಂಬ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ್ದವು. ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ (ಪಿಒಕೆ) ಎಲ್‌ಇಟಿ ಶಿಬಿರಗಳಿಗೆ ಭಯೋತ್ಪಾದಕರನ್ನು ಕಳುಹಿಸಲಾಗಿದೆ ಎಂದು ಅವರಿಂದ ಮಾಹಿತಿ ಲಭ್ಯವಾಗಿತ್ತು. ಅಲ್ಲಿ ಅವರು ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ತರಬೇತಿ ನೀಡಲಾಗಿದೆ. ತರುವಾಯ, ಪಾಕಿಸ್ತಾನವು ಏಳು ಎಲ್‌ಇಟಿ ಭಯೋತ್ಪಾದಕರ ಗುಂಪನ್ನು ನೇಮಕ ಮಾಡಿ ಕಾಶ್ಮೀರಕ್ಕೆ ಕಳುಹಿಸಿತು. ಅಹ್ಮದ್ ಮತ್ತು ಖೋಕರ್ ಈ ಗುಂಪಿನ ಭಾಗವಾಗಿದ್ದರು, ಇದರಲ್ಲಿ ಮೂವರು ಅಫಘಾನ್ ಪ್ರಜೆಗಳೂ ಇದ್ದರು. ಭಾರತೀಯ ಪಡೆಗಳನ್ನು ಗುರಿಯಾಗಿಸಲು ಅವರಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.


ಜಮ್ಮು-ಕಾಶ್ಮೀರದಲ್ಲಿ ಒಳನುಸುಳಿರುವ ಪಾಕಿಸ್ತಾನದ 7 ಉಗ್ರರಿಂದ ದಾಳಿಗೆ ಸಂಚು


ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ಕೇಂದ್ರ ರದ್ದುಪಡಿಸಿದ ನಂತರ, ಹಿಂದಿನ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ ಭಾರತವನ್ನು ಅಪಚಾರ ಮಾಡುವ ಪಾಕಿಸ್ತಾನದ ಹತಾಶೆಯು ಉತ್ತುಂಗಕ್ಕೇರಿತು.


"ಪಾಕಿಸ್ತಾನದ ಸೈನ್ಯದ ಸಹಾಯದಿಂದ ಹಗಲು ರಾತ್ರಿ ಒಳನುಗ್ಗುವ ಪ್ರಯತ್ನಗಳು ನಡೆಯುತ್ತಿವೆ. ರಾಜೌರಿಯ ಪೂಂಚ್‌ನಲ್ಲೂ ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳಿಗೆ ಸೇನೆಯು ಸೂಕ್ತ ಉತ್ತರವನ್ನು ನೀಡಿದೆ. ಸೆರೆಹಿಡಿದ ಭಯೋತ್ಪಾದಕರ ಬಗ್ಗೆ ನಾವು ಡಿಜಿಎಂಒ ಪಾಕಿಸ್ತಾನಕ್ಕೂ ಮಾಹಿತಿ ನೀಡಿದ್ದೇವೆ," ಎಂದು ಅವರು ತಿಳಿಸಿದರು.


ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಕಾನೂನು ಸುವ್ಯವಸ್ಥೆ ಮುನೀರ್ ಖಾನ್, ಆಗಸ್ಟ್ 5 ರಿಂದ ನಾಗರಿಕ ಅಪಘಾತದ ಯಾವುದೇ ಘಟನೆಗಳು ನಡೆದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಅಲ್ಲದೆ ಕಣಿವೆ ರಾಜ್ಯ ನಿಧಾನವಾಗಿಸಾಮಾನ್ಯ ಸ್ಥಿತಿ ಹಿಂದಿನ ಸ್ಥಿತಿಗೆ ಮರಳುತ್ತಿದೆ ಎಂದರು.


ಸಕಾರಾತ್ಮಕ ಟಿಪ್ಪಣಿಯಲ್ಲಿ, ಗುಲ್ಮಾರ್ಗ್ನ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಸೇನೆಯು ಸ್ಪಷ್ಟಪಡಿಸಿತು ಮತ್ತು ಪರಿಸ್ಥಿತಿಯನ್ನು ಸ್ವತಃ ನಿರ್ಣಯಿಸಲು ಪಟ್ಟಣಕ್ಕೆ ಭೇಟಿ ನೀಡುವಂತೆ ಜನರನ್ನು ಕೇಳಿದೆ.