Exclusive: ಜಮ್ಮು-ಕಾಶ್ಮೀರದಲ್ಲಿ ಒಳನುಸುಳಿರುವ ಪಾಕಿಸ್ತಾನದ 7 ಉಗ್ರರಿಂದ ದಾಳಿಗೆ ಸಂಚು

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯಿಂದ ಯಾವುದೇ ಹಿಂಸಾಚಾರ ಘಟನೆಗಳು ನಡೆದಿಲ್ಲವಾದ್ದರಿಂದ ಪಾಕಿಸ್ತಾನ ಭಯೋತ್ಪಾದಕರ ಸಹಾಯದಿಂದ ಹಿಂಸಾಚಾರ ಘಟನೆಗಳನ್ನು ನಡೆಸಲು  ಯೋಜನೆಯನ್ನು ರೂಪಿಸಿದೆ.

Last Updated : Sep 2, 2019, 07:22 PM IST
Exclusive: ಜಮ್ಮು-ಕಾಶ್ಮೀರದಲ್ಲಿ ಒಳನುಸುಳಿರುವ ಪಾಕಿಸ್ತಾನದ 7 ಉಗ್ರರಿಂದ ದಾಳಿಗೆ ಸಂಚು title=

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಏಳು ಮಂದಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಒಳನುಸುಳಿದ್ದು, ಭಾರತದಲ್ಲಿ ಮಹತ್ವದ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿದೆ ಎಂದು ಬಂಧಿತ ಭಯೋತ್ಪಾದಕರು ಬಾಯಿ ಬಿಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 7 ಲಷ್ಕರ್ ಭಯೋತ್ಪಾದಕರನ್ನು ಪಾಕಿಸ್ತಾನ ಒಳನುಸುಳಿಸಿದೆ ಎಂದು ಬಂಧಿತ ಭಯೋತ್ಪಾದಕರು ತಿಳಿಸಿದ್ದಾರೆ. 7 ಭಯೋತ್ಪಾದಕರ ಗುಂಪಿನಲ್ಲಿ 3 ಅಫಘಾನ್ ಮೂಲದ ಭಯೋತ್ಪಾದಕರು ಕೂಡ ಸೇರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ಹಿಂತೆಗೆದುಕೊಂಡ ನಂತರ, ಯಾವುದೇ ಶಾಂತಿ ಕದಡುವ ಘಟನೆಗಳು ನಡೆದಿಲ್ಲದ ಕಾರಣ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯಿಂದ ಯಾವುದೇ ಹಿಂಸಾಚಾರ ಘಟನೆಗಳು ನಡೆದಿಲ್ಲವಾದ್ದರಿಂದ ಪಾಕಿಸ್ತಾನ ಭಯೋತ್ಪಾದಕರ ಸಹಾಯದಿಂದ ಹಿಂಸಾಚಾರ ಕೃತ್ಯವನ್ನು ನಡೆಸುವ ಯೋಜನೆಯನ್ನು ರೂಪಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಭಯೋತ್ಪಾದಕ ಘಟನೆ ನಡೆಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ ಎಂಬ ಅಂಶವನ್ನು ಭದ್ರತಾ ಸಂಸ್ಥೆಗಳಿಗೆ ಸಿಕ್ಕಿಬಿದ್ದ ಇಬ್ಬರು ಲಷ್ಕರ್ ಭಯೋತ್ಪಾದಕರು ಬಹಿರಂಗಪಡಿಸಿದ್ದಾರೆ.

ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಇಬ್ಬರು ಭಯೋತ್ಪಾದಕರ ಚಿತ್ರವು ಜೀ ನ್ಯೂಸ್‌ಗೆ ಲಭ್ಯವಾಗಿದೆ. ಸಿಕ್ಕಿಬಿದ್ದ ಭಯೋತ್ಪಾದಕರು ಇಬ್ಬರೂ ಪಾಕಿಸ್ತಾನದವರು ಎನ್ನಲಾಗಿದ್ದು ಅವರನ್ನು ಖಲೀಲ್ ಅಹ್ಮದ್ ಮತ್ತು ನಜೀಮ್ ಖೋಖರ್ ಎಂದು ಗುರುತಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ಅವರಿಬ್ಬರನ್ನೂ ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದು ಭಯೋತ್ಪಾದಕರು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಸೇನೆಯ ಇಬ್ಬರು ಅಧಿಕಾರಿಗಳು, ವಿಶೇಷ ತರಬೇತಿಯ ನಂತರ ಭಾರತದ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಆಜ್ಞೆಯನ್ನು ಅವರಿಗೆ ನೀಡಲಾಗಿದೆ. ಎಲ್ಲಾ ಭಯೋತ್ಪಾದಕರಿಗೆ ಪಿಒಕೆಯ ಲಷ್ಕರ್ ಕ್ಯಾಂಪ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಚಲಾಯಿಸಲು ತರಬೇತಿ ನೀಡಲಾಯಿತು ಎಂಬ ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Trending News