ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ  ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2021 ಆಗಿದೆ. ದೇಶಾದ್ಯಂತ 18 ಕೋಟಿ ಪ್ಯಾನ್ ಕಾರ್ಡ್ ಹೊಂದಿರುವವರು ಅದನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲ ಎಂಬ ಡೇಟಾವನ್ನು ಸರ್ಕಾರ ಹಂಚಿಕೊಂಡಿದೆ. ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮಾಡದಿದ್ದರೆ, ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ. ನೀವು ಸಹ ಲಿಂಕ್‌ಗಾಗಿ ಕೊನೆಯ ದಿನಾಂಕಕ್ಕಾಗಿ ಕಾಯುತ್ತಿದ್ದೀರಾ? ಆದರೆ ಕೊನೆಯ ದಿನಾಂಕಕ್ಕಾಗಿ ಕಾಯುವುದು ಸರಿಯೇ? ಎಂದು ಒಮ್ಮೆ ಯೋಚಿಸಿ.


COMMERCIAL BREAK
SCROLL TO CONTINUE READING

ಡಬಲ್ ತೊಂದರೆ:
ನಿಗದಿತ ದಿನಾಂಕದೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ತೆರಿಗೆ ಇಲಾಖೆ ಈಗಾಗಲೇ ಘೋಷಿಸಿದೆ. ಆದರೆ ಈಗ ನಿಮ್ಮ ಕಷ್ಟಗಳು ದ್ವಿಗುಣಗೊಳ್ಳಬಹುದು. ಇಲಾಖೆಯ ಅಧಿಸೂಚನೆ ಹೊರಡಿಸುವ ಮೂಲಕ 2021 ಮಾರ್ಚ್ 31 ರೊಳಗೆ ಪ್ಯಾನ್-ಆಧಾರ್ ಲಿಂಕ್ (PAN Aadhaar Link) ಮಾಡುವ ಕೆಲಸ ಪೂರ್ಣಗೊಳ್ಳದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯಗೊಳ್ಳುತ್ತದೆ. ಜೊತೆಗೆ ನೀವು ಆದಾಯ ತೆರಿಗೆ ಕಾಯ್ದೆಯಡಿ 10,000 ರೂ.ಗಳ ದಂಡವನ್ನೂ ಪಾವತಿಸಬೇಕು ಎಂದು ಹೇಳಲಾಗಿದೆ.


ಪ್ಯಾನ್ ಕಾರ್ಡ್ ಅಮಾನ್ಯ: 
ತೆರಿಗೆ ಇಲಾಖೆಯ ಪ್ರಕಾರ 2021, ಮಾರ್ಚ್ 31ರ ನಂತರ ಯಾರಾದರೂ ನಿಷ್ಕ್ರಿಯ ಅಥವಾ ರದ್ದಾದ ಪ್ಯಾನ್ ಅನ್ನು ಬಳಸುತ್ತಿದ್ದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ ಅವರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಮಾರ್ಚ್ 31 ರೊಳಗೆ ತೆರಿಗೆದಾರರು ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ (PAN Card) ನಿಷ್ಕ್ರಿಯಗೊಳ್ಳುತ್ತದೆ ಎಂದು ಅಧಿಸೂಚನೆಯಲ್ಲಿ ತೆರಿಗೆ ಇಲಾಖೆ ತಿಳಿಸಿತ್ತು.


ನಿಮ್ಮ PAN-Aadhaar ಲಿಂಕ್ ಮಾಡಲು ಕೇವಲ 1 SMS ಸಾಕು!


ಪ್ಯಾನ್-ಆಧಾರ್ ಲಿಂಕ್:
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಪ್ರಸ್ತುತ ಈ ಗಡುವನ್ನು 31 ಮಾರ್ಚ್ 2021 ರವರೆಗೆ ವಿಸ್ತರಿಸಲಾಗಿದೆ. ಇದರ ನಂತರ ಗಡುವನ್ನು ಮತ್ತೆ ವಿಸ್ತರಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ. ಮೈ ಗೋವ್ ಇಂಡಿಯಾದ (My Gov India) ಟ್ವಿಟರ್ ಪುಟದ ಪ್ರಕಾರ 32.71 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವವರು ಈವರೆಗೆ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ (Aadhaar) ಲಿಂಕ್ ಮಾಡಿದ್ದಾರೆ. ಟ್ವೀಟ್ ಪ್ರಕಾರ ಜೂನ್ 29 ರವರೆಗೆ 50.95 ಕೋಟಿ ಪ್ಯಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಆದರೆ 18 ಕೋಟಿ ಪ್ಯಾನ್‌ಗಳನ್ನು ಇನ್ನೂ 12-ಅಂಕಿಯ ಆಧಾರ್‌ಗೆ ಜೋಡಿಸಲಾಗಿಲ್ಲ.


ಯಾವಾಗ ದಂಡ ವಿಧಿಸಲಾಗುತ್ತದೆ?
ತೆರಿಗೆದಾರರ ಅನುಕೂಲಕ್ಕಾಗಿ ತೆರಿಗೆ ಇಲಾಖೆಯು ಪ್ಯಾನ್ ಬದಲಿಗೆ 12-ಅಂಕಿಯ ಆಧಾರ್ ಸಂಖ್ಯೆಯನ್ನು ಬಳಸಲು ಅನುಮತಿ ನೀಡಿತ್ತು, ಆದರೆ ಹಾಗೆ ಮಾಡುವಾಗ ನೀವು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ ನೀವು ತಪ್ಪಾದ ಆಧಾರ್ ಸಂಖ್ಯೆಯನ್ನು ನೀಡಿದ್ದರೂ ಸಹ ನೀವು 10,000 ರೂ. ಭಾರಿ ದಂಡ ಪಾವತಿಸಬೇಕಾಗಬಹುದು. 


ನಿಮ್ಮ ಪ್ಯಾನ್ ಆಧಾರ್‌ಗೆ ಲಿಂಕ್ ಆಗಿದೆಯೇ/ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ


ಈ ಕಾರಣಗಳಿಗಾಗಿಯೂ ಸಹ ದಂಡವನ್ನು ವಿಧಿಸಬಹುದು:


  • ಪ್ಯಾನ್ ಕಾರ್ಡ್‌ಗೆ ಬದಲಾಗಿ ನೀವು ತಪ್ಪು ಆಧಾರ್ ಸಂಖ್ಯೆಯನ್ನು ನೀಡಿದರೆ 

  • ನಿರ್ದಿಷ್ಟ ವಹಿವಾಟಿನಲ್ಲಿ ನೀವು ಪ್ಯಾನ್ ಅಥವಾ ಆಧಾರ್ ಸಂಖ್ಯೆಯನ್ನು ನೀಡಲು ವಿಫಲವಾದರೆ.

  • ಕೇವಲ ಆಧಾರ್ ಸಂಖ್ಯೆಯನ್ನು ನೀಡಿದರೆ ಸಾಲದು, ನೀವು ಬಯೋಮೆಟ್ರಿಕ್ ಗುರುತನ್ನು ದೃಢೀಕರಿಸಬೇಕಾಗುತ್ತದೆ ಮತ್ತು ಅದು ವಿಫಲವಾದರೆ ನಿಮಗೆ ದಂಡ ವಿಧಿಸಲಾಗುತ್ತದೆ.