Panchajanya Attacks Amazon - ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (RSS) ಸಂಬಂಧಿಸಿದ ವಾರಪತ್ರಿಕೆಯಾದ ಪಾಂಚಜನ್ಯ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಪತ್ರಿಕೆ ತನ್ನ ಒಂದು ಲೇಖನದಲ್ಲಿ ಅಮೆರಿಕದ ಇ-ಕಾಮರ್ಸ್ ಕಂಪನಿ ಅಮೆಜಾನ್ ಅನ್ನು ಈಸ್ಟ್ ಇಂಡಿಯಾ ಕಂಪನಿ 2.0 ಎಂದು ಕರೆದಿದೆ. ಸರ್ಕಾರದ ಅನುಕೂಲಕರ ನೀತಿಗಳಿಗಾಗಿ ಕಂಪನಿಯು ಕೋಟ್ಯಂತರ ರೂಪಾಯಿಗಳನ್ನು ಲಂಚವಾಗಿ ಪಾವತಿಸಿದೆ ಎಂದು ನಿಯತಕಾಲಿಕೆ ಹೇಳಿದೆ. ಪಾಂಚಜನ್ಯ, ತನ್ನ ನಿಯತಕಾಲಿಕದ ಹೊಸ ಆವೃತ್ತಿಯಲ್ಲಿ ಅಮೆಜಾನ್‌ ಕುರಿತು ಲೇಖನ ಬರೆಯುತ್ತಾ, ಅದನ್ನು ತೀವ್ರವಾಗಿ ಟೀಕಿಸಿದೆ. ಈ ಹಿಂದೆ, ಇದೆ ಪತ್ರಿಕೆಯು ತನ್ನ ಒಂದು ಲೇಖನದಲ್ಲಿ ದೈತ್ಯ ಐಟಿ ಕಂಪನಿ ಇನ್ಫೋಸಿಸ್ ವಿರುದ್ಧ ಗಂಭೀರ ಆರೋಪ ಮಾಡಿತ್ತು.


COMMERCIAL BREAK
SCROLL TO CONTINUE READING

ಪಾಂಚಜನ್ಯ ತನ್ನ ಲೇಖನವನ್ನು ಈಸ್ಟ್ ಇಂಡಿಯಾ ಕಂಪನಿ 2.0 ಹೆಸರಿನಲ್ಲಿ ಬರೆದಿದೆ. 18 ನೇ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪನಿ ಏನೇನು ಮಾಡಿದೆಯೋ ಅದು ಇಂದು ಅಮೆಜಾನ್ (Amazon) ಚಟುವಟಿಕೆಗಳಲ್ಲಿ ಗೋಚರಿಸುತ್ತದೆ. ಅಮೆಜಾನ್ ತನ್ನ ಏಕಸ್ವಾಮ್ಯವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಬಯಸುತ್ತಿದೆ ಮತ್ತು ಹಾಗೆ ಮಾಡಲು ಇ-ಕಾಮರ್ಸ್ ಕಂಪನಿಯು ಭಾರತೀಯ ನಾಗರಿಕರ ಆರ್ಥಿಕ, ರಾಜಕೀಯ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಕಬಳಿಸಲು ಉಪಕ್ರಮಗಳನ್ನು ಆರಂಭಿಸಿದೆ ಎಂದು ಪತ್ರಿಕೆ ಹೇಳಿಕೊಂಡಿದೆ.


ಇದನ್ನೂ ಓದಿ-ಫ್ಲಿಪ್‌ಕಾರ್ಟ್‌ Big Billion Days ಜೊತೆಗೆ Amazon ಪೈಪೋಟಿ : ಸೆಲ್ ದಿನಾಂಕ ಬದಲಾವಣೆ, ಮತ್ತಷ್ಟು ಡಿಸ್ಕೌಂಟ್!


ವಿಡಿಯೋ ಹಾಗೂ ವೆಬ್ ಸಿರೀಸ್ ಗಳು ಭಾರತೀಯ ಸಂಸ್ಕೃತಿಗೆ ಮಾರಕವಾಗಿವೆ
ಈ ಲೇಖನದಲ್ಲಿ ಅಮೆಜಾನ್‌ನ ವೀಡಿಯೋ ಪ್ಲಾಟ್‌ಫಾರ್ಮ್ ಅನ್ನು ತೀವ್ರವಾಗಿ ಟೀಕಿಸಲಾಗಿದ್ದು, ಅದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ತನ್ನ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದೆ. ಗಮನಾರ್ಹವಾಗಿ, ಯುಎಸ್ ಇ-ಕಾಮರ್ಸ್ ದೈತ್ಯ ಭಾರತದಲ್ಲಿ ತನ್ನ ಕಾನೂನು ಪ್ರತಿನಿಧಿಗಳ ಮೂಲಕ ಪಾವತಿಸಲಾದ  ಲಂಚದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವರದಿಗಳು ಬಂದಿವೆ. ಎಂದು ಲೇಖನದಲ್ಲಿ ಹೇಳಲಾಗಿದೆ.


ಇದನ್ನೂ ಓದಿ-Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ


ಇನ್ಫೋಸಿಸ್ (Infosys) ಮೇಲೆ ಗಂಭೀರ ಆರೋಪಗಳು
ಅಮೆಜಾನ್ ಅನ್ನು ಗುರಿಯಾಗಿಸುವ ಮೊದಲು, ಈ ಪತ್ರಿಕೆಯು ಈ ತಿಂಗಳ ಆರಂಭದಲ್ಲಿ ಬೆಂಗಳೂರು ಮೂಲದ ಐಟಿ ದೈತ್ಯ ಇನ್ಫೋಸಿಸ್ ವಿರುದ್ಧ 'ಕ್ರೆಡಿಟ್ ಮತ್ತು ಟ್ರಾಮಾ' ಎಂಬ ಲೇಖನದಲ್ಲಿ ಗಂಭೀರ ಆರೋಪಗಳನ್ನು ಮಾಡಿತ್ತು. ಇನ್ಫೋಸಿಸ್ ಉದ್ದೇಶಪೂರ್ವಕವಾಗಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪತ್ರಿಕೆ ಬರೆದಿತ್ತು. ಲೇಖನವು ಕಂಪನಿಯು ನಕ್ಸಲೈಟ್‌ಗಳು, ಎಡಪಂಥೀಯರು ಮತ್ತು ತುಕ್ಡೆ-ತುಕ್ಡೆ ಗ್ಯಾಂಗ್‌ಗಳಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದೆ. ಇನ್ಫೋಸಿಸ್ ಸರ್ಕಾರಿ ಯೋಜನೆಯನ್ನು ಗೊಂದಲಗೊಳಿಸುವುದು ಇದೇ ಮೊದಲಲ್ಲ ಎಂದು ಲೇಖನ ಹೇಳಿದೆ.


ಇದನ್ನೂ ಓದಿ-ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.