ಮುಂಬೈ: ಮಹಾರಾಷ್ಟ್ರದ ಪಂಢರಪುರದಲ್ಲಿ ಬರುವ ನವೆಂಬರ್ 24 ರ ರಾತ್ರಿ 12ಗಂಟೆಯಿಂದ ನವೆಂಬರ್ 26ರ ರಾತ್ರಿ 12ರವರೆಗೆ ಕರ್ಫ್ಯೂ  (Curfew) ವಿಧಿಸಲಾಗಿದೆ. ಈ ಅವಧಿಯಲ್ಲಿ ಜನ ಸಂಚಾರದ ಮೇಲೆ ಸಂಪೂರ್ಣ ತಡೆ ವಿಧಿಸಲಾಗಿದೆ. ಬಸ್ ಸಂಚಾರದ ಮೇಲೆಯೂ ಕೂಡ ನಿಷೇಧ ವಿಧಿಸಲಾಗಿದೆ. ಪೋಲೀಸ್ ಇಲಾಖೆ ಈ ಆದೇಶ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಕರೋನಾ ಕಾಳಗ: ಈ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಮನೆಯಲ್ಲಿಯೇ ಇರುವಂತೆ ನಾಗರೀಕರಿಗೆ ಮನವಿ


ಕೊವಿಡ್ ಫೋರ್ಸ್ ನಿಯೋಜನೆ
ಈ ಅವಧಿಯಲ್ಲಿ 100 ಪೋಲೀಸ್ ಅಧಿಕಾರಿಗಳು, 1200 ಪೋಲೀಸ್ ಪೇದೆಗಳು, ಒಂದು SRPF ಯೂನಿಟ್ ಹಾಗೂ 400 ಹೋಮ್ ಗಾರ್ಡ್ ಗಳು ಸೇರಿದಂತೆ ಒಟ್ಟು 1700 ಜನರನ್ನು ನಿಯೋಜಿಸಲಾಗುತ್ತಿದೆ. ಪಂಢರಪುರದಲ್ಲಿ ವಿಠಲನ ದೇವಸ್ಥಾನವಿದ್ದು, 24 ರಿಂದ 26 ನವೆಂಬರ್ ರಂದು ಇಲ್ಲಿ ಕಾರ್ತಿಕ ಏಕಾದಶಿಯ ಶುಭ ತಿಥಿ ಇರಲಿದೆ.


ಇದನ್ನು ಓದಿ- ದೆಹಲಿಯಲ್ಲಿ ನಿಯಂತ್ರಣ ತಪ್ಪಿದ ಕರೋನಾ: ಇಂದು ಸರ್ವಪಕ್ಷ ಸಭೆ ಕರೆದ ಸಿಎಂ ಕೇಜ್ರಿವಾಲ್


ಶ್ರದ್ಧೆಯ ಮೇಲೆ ಭಾರಿ ಬಿದ್ದ ಕೊರೊನಾ 
ಕಾರ್ತಿಕ ಏಕಾದಶಿಯ ಶುಭ ದಿನದಂದು ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಇಲ್ಲಿ ದೇವರ ದರುಶನಕ್ಕಾಗಿ ಆಗಮಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಇದೇ ಕಾರಣದಿಂದ ಪೋಲೀಸ್ ಆಡಳಿತದ ವತಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.