ನವದೆಹಲಿ: Sharad Pawar On Param Bir Singh Letter Controversy - NCP ಅಧ್ಯಕ್ಷ ಶರದ್ ಪವಾರ್ (Sharad Pawar) ಅವರು ವಿವಾದದಲ್ಲಿ ಸಿಲುಕಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಮೇಲೆ ಮಾಡಲಾಗಿರುವ ಆರೋಪಗಳು ಗಂಭೀರವಾಗಿವೆ ಆದರೆ, ಅವುಗಳಿಗೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದಿದ್ದಾರೆ. ಯಾವ ಪತ್ರದ ಕುರಿತು ಉಲ್ಲೆಖಿಸಲಾಗುತ್ತಿದೆಯೋ, ಅದರ ಮೇಲೆ ಯಾರ ಸಹಿ ಕೂಡ ಇಲ್ಲ. ಅಷ್ಟೇ ಅಲ್ಲ ಸುಲಿಗೆಯಿಂದ ವಸೂಲಿ ಮಾಡಲಾಗಿರುವ ಹಣ ಗೃಹ ಸಚಿವರು ಅಥವಾ ಅವರ ಯಾವುದೇ ಸಿಬ್ಬಂದಿಗೆ ನೀಡಲಾದ ಕುರಿತು ಯಾವುದೇ ಸ್ಪಷ್ಟನೆ ಇಲ್ಲ ಎಂದಿದ್ದಾರೆ. ಸಚಿನ್ ವಾಝೆ  ಅವರನ್ನು ಮತ್ತೆ ನೌಕರಿಗೆ ಸೇರಿಸಿಕೊಳ್ಳುವ ನಿರ್ಣಯ ಪರಮಬೀರ್ (Param Bir Singh) ಅವರದ್ದಾಗಿತ್ತು ಮತ್ತು ಅದರಲ್ಲಿ ಮುಖ್ಯಮಂತ್ರಿಗಳ (Uddhav Thackeray) ಯಾವುದೇ ಪಾತ್ರ ಇಲ್ಲ ಎಂದು ಪವಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದಲ್ಲಿ ಬಿರುಕು ತಂದ ಮಾಜಿ ಪೋಲಿಸ್ ಅಧಿಕಾರಿ ಪತ್ರ..!


ಜೂಲಿಯೋ ರಿಬೇರೋ ಅವರು ಪ್ರಕರಣದ ತನಿಖೆ ನಡೆಸಬೇಕು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಶರದ್ ಪವಾರ್, ಗೃಹ ಸಚಿವ ಅನಿಲ್ ದೇಶ್ಮುಖ ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಿದೆ. ಈ ಪ್ರಕರಣದ ಕುರಿತು ತಾವು ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray)ಅವರ ಜೊತೆಗೆ ಸಮಾಲೋಚನೆ ನಡೆಸಿರುವುದಾಗಿ ಹೇಳಿದ್ದಾರೆ. ನಿಸ್ಪಕ್ಷ ವ್ಯಕ್ತಿಯ ಮೂಲಕ ಈ ಪ್ರಕರಣದ ತನಿಖೆ ನಡೆಸಬೇಕು ಮತ್ತು ಇದಕ್ಕಾಗಿ ತಾವು ಮುಂಬೈ ಮಾಜಿ ಪೋಲೀಸ್ ಆಯುಕ್ತ ಜೂಲಿಯೋ ರಿಬೇರೋ ಅವರ ಹೆಸರನ್ನು ಸೂಚಿಸಿರುವುದಾಗಿ ಅವರು ಪವಾರ್ ಹೇಳಿದ್ದಾರೆ.


ಇದನ್ನೂ ಓದಿ-Param Bir Sing Letter To CM Latest News: 'ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ', ಸಂಜಯ್ ರಾವುತ್ ಅವರ ಈ ಟ್ವೀಟ್ ನ ಅರ್ಥ ಏನು?


'ಕುರ್ಚಿಯಿಂದ ಕೆಳಗಿಳಿದ ಬಳಿಕ ಯಾಕೆ ಆರೋಪ'
ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ರಾಜೀನಾಮೆ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ, ಈ ಪ್ರಕರಣ ಸರ್ಕಾರದ (Maharashtra Government) ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ. ಮುಂಬೈ ಪೋಲೀಸ್ ಆಯುಕ್ತರ ಸ್ಥಾನದಿಂದ ಪರಮಬೀರ್ ಸಿಂಗ್ ಅವರನ್ನು ತೆಗೆದುಹಾಕಿದ ಬಳಿಕ ಯಾಕೆ ಅವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿರುವ ಪವಾರ್, 16 ವರ್ಷಗಳ ಬಳಿಕ ಸಚಿನ್ ವಾಝೆ ಅವರನ್ನು ಮುಂಬೈ ಪೊಲೀಸ ತಂಡಕ್ಕೆ ಸೇರಿಸಿದ್ದೆ ಪರಮಬೀರ್ ಸಿಂಗ್. ಅಷ್ಟೇ ಅಲ್ಲ ಪರಮಬೀರ ಸಿಂಗ್ ದೆಹಲಿಗೂ ಕೂಡ ಬಂದು ಹೋಗಿದ್ದಾರೆ ಎಂಬುದನ್ನು ನಾನು ಕೇಳಿದ್ದೇನೆ ಎಂದು ಪವಾರ್ ಹೇಳಿದ್ದಾರೆ.


ಇದನ್ನೂ ಓದಿ-ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ - ಅನಿಲ್ ದೇಶ್ ಮುಖ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.