ಬೆಂಗಳೂರು : ನಾವು ಪ್ರಾಣಿ, ಪಕ್ಷಿಗಳಿಗೆ ಕೊಂಚ ಪ್ರೀತಿ ತೋರಿಸಿದರೂ ಅವುಗಳು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತವೆ. ಮಾತ್ರವಲ್ಲ ನಮ್ಮ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸಿ ಬಿಡುತ್ತವೆ (Animal video). ಆದರೆ ಅವುಗಳಿಗೆ ತೊಂದರೆ ಕೊಟ್ಟರೆ ಅಥವಾ ತೊಂದರೆ ಕೊಡಲು ಹೋದರೆ ಅವುಗಳು ಕೂಡಾ  ಸರಿಯಾಗಿಯೇ ಬುದ್ದಿ ಕಲಿಸುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇದರ ಒಂದು  ಝಲಕ್ ನೋಡಬಹುದು. 


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿ ಪಕ್ಷಿಗಳ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ. ಇದೀಗ ಮತ್ತೆ ಅಂಥದ್ದೇ ವಿಡಿಯೋವೊಂದು ಹೊರಬಿದ್ದಿದೆ (Animal Video). ಅದರಲ್ಲಿ ನವಿಲು ಹೇಗೆ ತನ್ನ ಮೊಟ್ಟೆಯನ್ನು ಕಾವಲು ಕಾಯುತ್ತದೆ ಎನ್ನುವುದನ್ನು ಕಾಣಬಹುದು. 


ಇದನ್ನೂ ಓದಿ : Mandya: ಸಕ್ಕರೆನಾಡಿನಲ್ಲಿ ಮತ್ತೆ ಶುರುವಾಯ್ತು ‘ನಂಗಾನಾಚ್’ ಆರ್ಕೇಸ್ಟ್ರಾ ಡ್ಯಾನ್ಸ್ ಶೋ!


ಗಂಡು ನವಿಲು ಮತ್ತು ಹೆಣ್ಣು ನವಿಲನ್ನು ಈ ವಿಡಿಯೋದಲ್ಲಿ ಕಾಣಬಹುದು (Peocock video). ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ನವಿಲಿನ ಮೊಟ್ಟೆಗಳನ್ನು ಎತ್ತಲು ಪ್ರಾರಂಭಿಸುತ್ತಾನೆ. ವ್ಯಕ್ತಿಯು ಮೊಟ್ಟೆಗಳನ್ನು ತೆಗೆದುಕೊಂಡ ತಕ್ಷಣ, ಅಲ್ಲಿಗೆ ನವಿಲು ಹಾರಿ ಬರುತ್ತದೆ. ಮಾತ್ರವಲ್ಲ, ಆತನ ಮೇಲೆ ದಾಳಿ ಮಾಡುತ್ತದೆ. ನವಿಲು ಈ ರೀತಿ ಹಠಾತ್ ದಾಳಿ ಮಾಡಿ ಬಿಡಬಹುದು ಎಂಬ ಕಲ್ಪನೆ ಕೂಡಾ ಆ ವ್ಯಕ್ತಿಗೆ ಇದ್ದಂತೆ ಕಾಣುವುದಿಲ್ಲ.  ಇದೀಗ ಈ ವಿಡಿಯೋ ವೈರಲ್ ಆಗಿದೆ (Viral video). 


 

 

 

 



 

 

 

 

 

 

 

 

 

 

 

A post shared by natural video (@naturepixm)


 


ಈ ವೀಡಿಯೊವನ್ನು ನೇಚರ್‌ಪಿಕ್ಸ್‌ಎಂ ಹೆಸರಿನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನವಿಲಿನ ಈ ವೀಡಿಯೋವನ್ನು ಸಾಕಷ್ಟು ಮಂದಿ ಲೈಕ್ ಮಾಡುತ್ತಿದ್ದಾರೆ ಮತ್ತು ಈ ವಿಡಿಯೋ (Video) ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.  


ಇದನ್ನೂ ಓದಿ : Ricky Ponting Video: ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ರಿಕಿ ಪಾಂಟಿಂಗ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.