Mandya: ಸಕ್ಕರೆನಾಡಿನಲ್ಲಿ ಮತ್ತೆ ಶುರುವಾಯ್ತು ‘ನಂಗಾನಾಚ್’ ಆರ್ಕೇಸ್ಟ್ರಾ ಡ್ಯಾನ್ಸ್ ಶೋ!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(Indian national Women's day) ದಿನವೇ ಪಡ್ಡೆ ಹುಡಿಗಿಯರನ್ನು‌ ಕರೆಸಿ ಮಧ್ಯರಾತ್ರಿವರೆಗೂ ಮಾದಕ‌ ನೃತ್ಯ ಮಾಡಿಸಲಾಗಿದೆ. 

Written by - Zee Kannada News Desk | Last Updated : Mar 9, 2022, 01:31 PM IST
  • ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ ನಂಗಾನಾಚ್..!
  • ಗ್ರಾಮದೇವತೆ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಆರ್ಕೇಸ್ಟ್ರಾ ಆಯೋಜನೆ
  • ಮಧ್ಯರಾತ್ರಿ ಅರೆಬರೆ ಬಟ್ಟೆ ತೊಟ್ಟು ಮಾದಕ ನೃತ್ಯ ಮಾಡಿದ ಯುವತಿಯರು
Mandya: ಸಕ್ಕರೆನಾಡಿನಲ್ಲಿ ಮತ್ತೆ ಶುರುವಾಯ್ತು ‘ನಂಗಾನಾಚ್’ ಆರ್ಕೇಸ್ಟ್ರಾ ಡ್ಯಾನ್ಸ್ ಶೋ! title=
ಮತ್ತೆ ಸದ್ದು ಮಾಡುತ್ತಿದೆ ನಂಗಾನಾಚ್..!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮತ್ತೆ ನಂಗಾನಾಚ್(Nanganach Dance) ಸದ್ದು ಮಾಡಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಗಮಂಗಲದಲ್ಲಿ ಪಡ್ಡೆ ಹುಡುಗರ ಓಲೈಕೆಗೆ ರಾಜಕಾರಣಿಗಳು ಮುಂದಾಗಿದ್ದಾರೆ. ಗ್ರಾಮ ದೇವತೆಯ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಆರ್ಕೇಸ್ಟ್ರಾ ಆಯೋಜಿಸಿ ಯುವಕರಿಗೆ ಮೋಜು-ಮಸ್ತಿಯ ವ್ಯವಸ್ಥೆ ಮಾಡಲಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ (Nagamangala Taluk)ತೊಳಸಿ ಕೊಬ್ರಿ ಗೇಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದೇವತೆ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಆರ್ಕೇಸ್ಟ್ರಾದಲ್ಲಿ ಹುಡುಗಿಯರು ಮಧ್ಯರಾತ್ರಿ ಅರೆಬರೆ ಬಟ್ಟೆತೊಟ್ಟು ಮಾದಕ ನೃತ್ಯ ಮಾಡಿ ಗ್ರಾಮದ ಯುವಕರನ್ನು ಹುಚ್ಚೆಬ್ಬಿಸಿದ್ದಾರೆ.

ಇದನ್ನೂ ಓದಿ: Online Love: ನನ್ನ ಹೆಂಡತಿ ಬೇಕೆಂದು ಕೋರ್ಟ್ ಮೋರೆ ಹೋಗಲು ಸಿದ್ಧನಾದ ಯುವಕ!

ರಾಜಕಾರಣಿಗಳಾದ ಚಲುವರಾಯಸ್ವಾಮಿ ಮತ್ತು ಸುರೇಶ್ ಗೌಡ ಬೆಂಬಲಿಗರು ಗ್ರಾಮದಲ್ಲಿ ಪ್ರತ್ಯೇಕವಾಗಿ ಆರ್ಕೇಸ್ಟ್ರಾ(Orchestra show)ಆಯೋಜಿಸಿದ್ದರೆಂದು ತಿಳಿದುಬಂದಿದೆ. ಆರ್ಕೇಸ್ಟ್ರಾ ವೇಳೆ  ಮಾದಕ ಹುಡುಗಿಯರ ಕೈಗೆ ಸಿಲುಕಿ ಗ್ರಾಮದ ಬಾಲಕ‌ನೊಬ್ಬ ಹೈರಾಣಾಗಿದ್ದಾನೆ. ವೇದಿಕೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಶಾಲನ್ನೇ ಕಟ್ಟಿಕೊಂಡು ‘ಕೈ’ ಕಾರ್ಯಕರ್ತನೊಬ್ಬ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ.   

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(Indian national Women's day) ದಿನವೇ ಪಡ್ಡೆ ಹುಡಿಗಿಯರನ್ನು‌ ಕರೆಸಿ ಮಧ್ಯರಾತ್ರಿವರೆಗೂ ಮಾದಕ‌ ನೃತ್ಯ ಮಾಡಿಸಲಾಗಿದೆ. ಇಬ್ಬರು ರಾಜಕಾರಣಿಗಳು ವೇದಿಕೆಗೆ ಬಂದು ಹೋದ ಬಳಿಕ ಮಾದಕ ನೃತ್ಯ ಶುರುವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಹಿಳಾ ದಿನಾಚರಣೆ ದಿನವೇ ನಡೆದ ಈ ಮಾದಕ ನೃತ್ಯಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮಾದಕ ವ್ಯಸನಿಗಳೇ ಎಚ್ಚರ! ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ನಿಗ್ರಹಕ್ಕೆ ರೆಡಿಯಾಗಿದೆ ವಿನೂತನ ಪ್ಲಾನ್

ಈ ಹಿಂದೆ ಇದೇ ಕ್ಷೇತ್ರದಲ್ಲಿ ಮಾಜಿ‌ ಸಂಸದ ಶಿವರಾಮೇಗೌಡ(LR Shivarame Gowda) ನಂಗಾನಾಚ್ ಮಾಡಿಸಿ ವ್ಯಾಪಕ ಟೀಕೆ‌ಗೊಳಗಾಗಿದ್ದರು. ಇದೀಗ ಮತ್ತೆ ಇದೇ ಕ್ಷೇತ್ರದಲ್ಲಿ ನಂಗಾನಾಚ್ ಸದ್ದು ಮಾಡ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಅರೆಬರೆ ನೃತ್ಯ ಮಾಡಿಸಿದರೆ ಯುವಕರ ಪಾಡು ಏನಾಗಬೇಡ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News