ಭಯಾನಕ ವಿಡಿಯೋ: ಫೋಟೋ ತೆಗೆಯಲು ಹೋದವನ ಮೇಲೆ ಅಟ್ಯಾಕ್ ಮಾಡಿದ ಹಾವು..!

ಇತ್ತೀಚೆಗೆ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಾವು ಅಟ್ಯಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

Written by - Puttaraj K Alur | Last Updated : Feb 17, 2022, 09:54 PM IST
  • ಫೋಟೋ ತೆಗೆಯಲು ಹೋದ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದ ಹಾವು
  • ಜೀವ ಉಳಿಸಿಕೊಳ್ಳಲು ಕಿರುಚಾಡುತ್ತಾ ತಪ್ಪಿಸಿಕೊಂಡು ಓಡಿದ ವ್ಯಕ್ತಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಸ್ನೇಕ್ ಅಟ್ಯಾಕ್
ಭಯಾನಕ ವಿಡಿಯೋ: ಫೋಟೋ ತೆಗೆಯಲು ಹೋದವನ ಮೇಲೆ ಅಟ್ಯಾಕ್ ಮಾಡಿದ ಹಾವು..!  title=
ವ್ಯಕ್ತಿಯ ಮೇಲೆ ಸ್ನೇಕ್ ಅಟ್ಯಾಕ್!

ನವದೆಹಲಿ: ಇಂಟರ್ನೆಟ್(Internet) ಒಂದು ಮೋಜಿನ ಜಗತ್ತು. ನಾವು ಪ್ರತಿದಿನ ಇಲ್ಲಿ ಹಲವಾರು ವಿಭಿನ್ನ ವಿಡಿಯೋಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ ಲೋಕದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ನಮ್ಮ ಗಮನ ಸೆಳೆದರೆ, ಇನ್ನು ಕೆಲವು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.

ನೀವು ಹಾವುಗಳ ವಿಡಿಯೋಗಳನ್ನು ನೋಡೇ ಇರ್ತಿರಿ. ಕೆಲವು ಹಾವುಗಳ ವಿಡಿಯೋ(Viral Video)ಗಳು ನೋಡಲು ತುಂಬಾ ಭಯಾನಕವಾಗಿರುತ್ತವೆ. ಈ ವಿಡಿಯೋಗಳನ್ನು ಲಕ್ಷಾಂತರ ಜನರು ಇಷ್ಟಪಟ್ಟು ನೋಡುತ್ತಾರೆ. ಹೀಗಾಗಿ ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿಬಿಡುತ್ತದೆ. ಅಂತಹ ಸಾಲಿಗೆ ಸೇರುವ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ.   

ಇದನ್ನೂ ಓದಿ: Internet Star Girl: ಇಂತಹ ವಿಡಿಯೋ ಹಾಕಿ 200 ಕೋಟಿ ರೂ. ಗಳಿಸಿದ 7 ವರ್ಷದ ಬಾಲಕಿ!

ಹಾವುಗಳು ತುಂಬಾ ಅಪಾಯಕಾರಿ ಜೀವಿ. ನೀವು ಅವುಗಳಿಗೆ ತೊಂದರೆ ನೀಡದಿದ್ದರೆ ಅವು ನಿಮಗೆ ಏನೂ ಮಾಡುವುದಿಲ್ಲ. ಒಂದು ವೇಳೆ ನೀವು ಅವುಗಳ ತಂಟೆಗೆ ಹೋದರೆ ನಿಮ್ಮ ಜೀವಕ್ಕೆ ಕುತ್ತು ತರುತ್ತವೆ. ಹೀಗಾಗಿ ಹಾವುಗಳೆಂದರೆ ಪ್ರತಿಯೊಬ್ಬರೂ ಹೆದರಿ ದೂರ ಸರಿಯುತ್ತಾರೆ. ಪ್ರಪಂಚದಲ್ಲಿ 2,000ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದರೂ, ಕೆಲವು ಮಾತ್ರ ವಿಷಕಾರಿ. ಈ ಹಾವುಗಳಿಂದ ದೂರವಿರುವುದು ಉತ್ತಮ. ಆಶ್ಚರ್ಯವೆಂದರೆ ಹಾವುಗಳು ಕೂಡ ಮನುಷ್ಯರಿಗೆ ಹೆದರಿ ಓಡಿ ಹೋಗುತ್ತವೆ. ಆದರೆ ಕೆಲವೊಮ್ಮೆ ಅವು ತಮ್ಮ ಪ್ರಾಣ ಉಳಿಸಿಕೊಳ್ಳಲು ಮನುಷ್ಯರ ಮೇಲೆ ಅಟ್ಯಾಕ್(Snake Attack) ಮಾಡುತ್ತವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಾವು ಅಟ್ಯಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಭಾರೀ ಗಾತ್ರದ ಹಾವಿನ ವಿಡಿಯೋ ತೆಗೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆ ಏಕಾಏಕಿ ಹಾವು ದಾಳಿ ಮಾಡಿದೆ. ಹಾವಿನಿಂದ ತಪ್ಪಿಕೊಳ್ಳಲು ವ್ಯಕ್ತಿ ಕಿರುಚಾಡುತ್ತಾ ಅಲ್ಲಿಂದ ಓಡಲಾರಂಭಿಸಿದ್ದಾನೆ. ಆದರೆ ಹಾವು ಮಾತ್ರ ಆತನನ್ನು ಬಿಟ್ಟಿಲ್ಲ. ಕಡಿದಾದ ಜಾಗದದಿಂದ ಆತ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಹೋದರೂ ಹಾವು ಹಿಂಬಾಲಿಸಿ ಕಚ್ಚಲು ಪ್ರಯತ್ನಿಸಿದೆ.  

ಇದನ್ನೂ ಓದಿ: Shocking: ಹಾರುವ ವಿಮಾನದಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ..!

ಹಾವಿನಿಂದ ಬಚಾವಾಗಲು ವ್ಯಕ್ತಿ ಕಿರುಚಾಡುತ್ತಾ ಕಾಲ್ಕಿತ್ತಿದ್ದಾನೆ. ಕೊನೆಗೂ ಹಾವಿನಿಂದ ಪ್ರಾಣ(Snake Attack) ಉಳಿಸಿಕೊಳ್ಳುವಲ್ಲಿ ವ್ಯಕ್ತಿ ಯಶಸ್ವಿಯಾಗಿದ್ದಾನೆ. ಹಾವು ವ್ಯಕ್ತಿಯನ್ನು ಹಿಂಬಾಲಿಸಿ ಕಚ್ಚಲು ಹೋಗಿರುವ ದೃಶ್ಯವು ತುಂಬಾ ಭಯಾನಕವಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನೆಟಿಜನ್ಸ್ ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News