ನವದೆಹಲಿ : ಅದೃಷ್ಟ (Good Luck)ಮತ್ತು ದುರಾದೃಷ್ಟ ಅನ್ನುವುದನ್ನು ಒಪ್ಪುತ್ತಿಲ್ಲವೋ ಇಲ್ಲವೋ ಆದರೆ, ಕಡೆಗಣಿಸುವುದಕ್ಕೆ ಆಗುವುದಿಲ್ಲ. ಇದು ಹೊಸ ಕೆಲಸದ ಆರಂಭವಾಗಲಿ ಅಥವಾ ಮದುವೆಯಂತಹ ದೊಡ್ಡ ನಿರ್ಧಾರವಾಗಲಿ, ಜನರು ಸರಿಯಾದ ಸಮಯ ಅಥವಾ ಮುಹೂರ್ತವನ್ನು ನೋಡಿಯೇ ನೋಡುತ್ತಾರೆ. ಇಲ್ಲಿ ನಾವು ಜಿಂಬಾಬ್ವೆಯ (Zimbabwe) ಒಂದು ನಂಬಿಕೆಯ ಹೇಳುತ್ತೇವೆ. ಈ ನಂಬಿಕೆಯ ಪ್ರಕಾರ,   ಜನರು ನವೆಂಬರ್ ತಿಂಗಳಲ್ಲಿ ಮದುವೆಯಾಗಲು (November Marriages Linked To Misfortunes)ಹಿಂದೇಟು ಹಾಕುತ್ತಾರೆ. ಈ ನಂಬಿಕೆಯ ಪ್ರಕಾರ, ನವೆಂಬರ್ ತಿಂಗಳಲ್ಲಿ ಮದುವೆಯಾದರೆ, ವಿಚ್ಛೇದನ ಮತ್ತು ಗರ್ಭಾವಸ್ಥೆಯಲ್ಲಿ ವೈಫಲ್ಯದಂತಹ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದು ನಂಬಿಕೆ. 


COMMERCIAL BREAK
SCROLL TO CONTINUE READING

ಶೋನಾ ಸಮುದಾಯದ ಆಚರಣೆ : 
ಈ ಪದ್ಧತಿಯಲ್ಲಿ ನಂಬಿಕೆಯಿಟ್ಟಿರುವ ಶೋನಾ ಸಮುದಾಯದ ಜನರು ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾದಲ್ಲಿ (South Africa) ಮತ್ತು ವಿಶೇಷವಾಗಿ ಜಿಂಬಾಬ್ವೆಯಲ್ಲಿ (Zimbabwe) ವಾಸಿಸುತ್ತಾರೆ. ಈ ಸಮಯದಲ್ಲಿ ಇಲ್ಲಿ ಮಳೆ (Rain) ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಈ ತಿಂಗಳಲ್ಲಿ, ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಅದೇ ಸಮಯದಲ್ಲಿ, ಈ ತಿಂಗಳು ಆಚರಣೆಗಳಿಗೆ ಬಹಳ ಪವಿತ್ರವೆಂದು ನಂಬುತ್ತಾರೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಗದ್ದಲದ ಸಮಾರಂಭವನ್ನು ಆಯೋಜಿಸಲಾಗಿಲ್ಲ. 


ಇದನ್ನೂ ಓದಿ : Yamaha Festive Offers: ದ್ವಿಚಕ್ರ ವಾಹನಗಳ ಮೇಲೆ ಬಂಪರ್ ಆಫರ್ ಘೋಷಿಸಿದ ಯಮಹಾ ಮೋಟಾರ್ ಇಂಡಿಯಾ


ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಲ್ಲ : 
ಕ್ರಿಶ್ಚಿಯನ್ ಸಮುದಾಯದ ಕೆಲವು ಜನರು ಈ ಪವಿತ್ರ ಮಾಸದ ಚಟುವಟಿಕೆಗಳ ನಿಷೇಧದ ವಿರುದ್ಧವಾಗಿದ್ದರೂ, ಸಂಪ್ರದಾಯಗಳನ್ನು ಅನುಸರಿಸುವವರು ಮಾತ್ರ ಇನ್ನೂ ಇಂತಹ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ವಾಸ್ತವವಾಗಿ, taarifa.rwನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶನಿವಾರದ ಹೆರಾಲ್ಡ್ ಜೀವನಶೈಲಿಯ ಸಮೀಕ್ಷೆಯು ಬ್ಲಾಕ್ ನವೆಂಬರ್ ಸಮಸ್ಯೆಯು ಸಂಪ್ರದಾಯ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ಸಂಬಂಧಿಸಿದೆ ಎಂದು ಹೇಳಿದೆ. ಈ ಆಚರಣೆಯನ್ನು ನಬುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ. ಮದುವೆಯ ಸಮಯದಲ್ಲಿ ಮೇಕೆಗಳ ಬೇಡಿಕೆ ಹೆಚ್ಚಾಗಿರುತ್ತದೆ.  ಆದರೆ ಈ ತಿಂಗಳು ಅವುಗಳ ಸಂತಾನೋತ್ಪತ್ತಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಸಮುದಾಯದ ಕೆಲವು ಜನರು ಈ ಸಮಯದಲ್ಲಿ ಮದುವೆ (Marriage) ಸಮಾರಂಭವನ್ನು ಮಾಡಬಾರದೆಂದು ಸಲಹೆ ನೀಡುತ್ತಾರೆ. 


ಜನರ ನಂಬಿಕೆ : 
ಈ ನಂಬಿಕೆಯನ್ನು ಆಚರಿಸದೇ ಹೋದರೆ, ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ನನ್ನ ಸಹೋದರನಿಗೆ ಎಂಟು ವರ್ಷಗಳ ಹಿಂದೆ ನವೆಂಬರ್ ತಿಂಗಳಲ್ಲಿ ಮದುವೆಯಾಗಿತ್ತು (Marriage) ಆದರೆ ಇಲ್ಲಿಯವರೆಗೂ ಅವರಿಗೆ ಮಗು ಆಗಲಿಲ್ಲ ಎನ್ನುವುದು ಇಲ್ಲಿಯ ನಿವಾಸಿಯೊಬ್ಬರ ಹೇಳಿಕೆ. 


ಇದನ್ನೂ ಓದಿ : Delhi Rain : ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ : ಹಲವು ಪ್ರದೇಶಗಳು ಜಲಾವೃತ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.