Ten Babies Mom Story: ಏಕಕಾಲಕ್ಕೆ 10 ಮಕ್ಕಳ ಹಡೆದ ಮಹಾತಾಯಿಯದ್ದು ಕಟ್ಟುಕಥೆ, ತನಿಖೆಯಲ್ಲಿ ತಿಳಿದು ಬಂದ ಸತ್ಯ ಇದು

Ten Babies Mom Story - ದಕ್ಷಿಣ ಆಫ್ರಿಕಾದ ನಿವಾಸಿಯಾಗಿರುವ 37ವರ್ಷದ ಮಹಿಳೆಯೋರ್ವಳು ಕೆಲ ದಿನಗಳ ಹಿಂದೆಯಷ್ಟೇ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಹೇಳಿದ್ದಳು. ಆದರೆ, ಅವಳ ಈ ಹಕ್ಕು ಪ್ರತಿಪಾದನೆ ನಕಲಿ ಎಂದು ಸಾಬೀತಾಗಿದೆ.

Written by - Nitin Tabib | Last Updated : Jun 25, 2021, 10:47 PM IST
  • ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯ ಕಥೆ ನಿಮಗೆ ನೆನಪಿದೆಯಾ?
  • ಮಹಿಳೆಯ ವಾದ ಸುಳ್ಳು ಎಂದು ಸಾಬೀತಾಗಿದೆ.
  • ಇತ್ತೀಚಿಗೆ ಮಹಿಳೆ ಗರ್ಭಿಣಿಯಾದ ಕುರಿತು ಯಾವುದೇ ವರದಿಗಳಿಲ್ಲ ಎಂದ ವರದಿ
Ten Babies Mom Story: ಏಕಕಾಲಕ್ಕೆ 10 ಮಕ್ಕಳ ಹಡೆದ ಮಹಾತಾಯಿಯದ್ದು ಕಟ್ಟುಕಥೆ, ತನಿಖೆಯಲ್ಲಿ ತಿಳಿದು ಬಂದ ಸತ್ಯ ಇದು title=
Mom To 10 Babies (File Photo)

ನವದೆಹಲಿ: Ten Babies Mom Story - ದಕ್ಷಿಣ ಆಫ್ರಿಕಾದ (South Africa) ನಿವಾಸಿಯಾಗಿರುವ 37ವರ್ಷದ ಮಹಿಳೆಯೋರ್ವಳು ಕೆಲ ದಿನಗಳ ಹಿಂದೆಯಷ್ಟೇ ಏಕಕಾಲಕ್ಕೆ 10 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಹೇಳಿದ್ದಳು (Ten Babies Mom). ಆದರೆ, ಅವಳ ಈ ಹಕ್ಕು ಪ್ರತಿಪಾದನೆ ನಕಲಿ ಎಂದು ಸಾಬೀತಾಗಿದೆ. ವಾಸ್ತವದಲ್ಲಿ 37 ವರ್ಷದ ಗೋಸಿಯಾಮೆ ಸಿತೋರ್ ಮಹಿಳೆ ತಾನು ಏಕಕಾಲಕ್ಕೆ 7 ಗಂಡು ಮಕ್ಕಳು ಹಾಗೂ  ಮೂವರು ಹೆಣ್ಣುಮಕ್ಕಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಳು.

ತನಿಖೆಯ ಬಳಿಕ ಮಹಿಳೆಯ ಹೇಳಿಕೆ ಸುಳ್ಳು ಸಾಬೀತಾಗಿದೆ
ಪ್ರಿಟೋರಿಯಾ ನ್ಯೂಸ್ ವತಿಯಿಂದ ಬಿತ್ತರಿಸಲಾಗಿದ್ದ ಈ ವರದಿಯಲ್ಲಿ ಗೊಸಿಯಾಮ ಥಮಾರಾ ಸಿತೋಲ್  ಳನ್ನು (Gosiame Thamara Sithole) ತೋರಿಸಲಾಗಿದ್ದು, ಈ ಮಹಿಳೆ ಏಕಕಾಲಕ್ಕೆ ಏಳು ಗಂಡು ಮಕ್ಕು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿತ್ತು. ಇದಾದ ಬಳಿಕ ಒಂದೇ ಹೆರಿಗೆಯಲ್ಲಿ ಅತಿ ಹೆಚ್ಚು ಮಕ್ಕಳನ್ನು ಹಡೆದ ಮಹಿಳೆಯರ ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ (Gunnies Book Of World Record) ಪಟ್ಟಿಯಲ್ಲಿ  ಸಿತೋರ್ ಹೆಸರನ್ನು ಸೇರಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ, ತನಿಖೆಯ ಬಳಿಕ ಅವಳ ಹಕ್ಕು ನಕಲಿ ಎಂದು ಸಾಬೀತಾಗಿದೆ.

ಇದನ್ನೂ ಓದಿ- 

ಮೆಡಿಕಲ್ ಸ್ಕ್ಯಾನ್ ನಲ್ಲಿ 8 ಮಕ್ಕಳಿರುವುದಾಗಿ ಹೇಳಿದ್ದ ವೈದ್ಯರು
ಅಷ್ಟೇ ಅಲ್ಲ ಮಹಿಳೆ ತನ್ನ ಹೆಸರನ್ನು ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ದಾಖಲಿಸಲು ಮನವಿ ಕೂಡ ಮಾಡಿದ್ದಳು. ಈ ಕುರಿತು ಪ್ರಕಟಗೊಂಡ ವರದಿಗಳಲ್ಲಿ ಸಿತೋಲ್ ಪತಿಯಾಗಿರುವ ತೆಬೋಹೋ ಸ್ತೋತೆಸ್ಸಿ, ವೈದ್ಯರು ಮೆಡಿಕಲ್ ಸ್ಕ್ಯಾನ್ ನಡೆಸಿದ ಬಳಿಕ ಅವರ ಮಡದಿಯ ಹೊಟ್ಟೆಯಲ್ಲಿ 8 ಮಕ್ಕಳಿರುವ ಕುರಿತು ಹೇಳಿದ್ದರು ಮತ್ತು ಈ ಸಂಖ್ಯೆ ಸಿತೋಲ್ ಸಂಖ್ಯೆಗಿಂದ ಎರಡು ಕಡಿಮೆಯಾಗಿದೆ.

ಇದನ್ನೂ ಓದಿ-

ಅಷ್ಟೊಂದು ಮಕ್ಕಳು ಹುಟ್ಟಿಲ್ಲ ಎಂದ ಆಸ್ಪತ್ರೆ 
ನಮ್ಮ ಅಂಗಸಂಸ್ಥೆ WION ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಜೋಹಾನ್ಸ್ಬರ್ಗ್ ನ (Johannesburg) ಗ್ವಾಟೆಂಗ್ ಪ್ರಾಂತ್ಯದಿಂದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಚಿಕಿತ್ಸಾ ವರದಿ ಬೆಳಕಿಗೆ ಬಂದಿಲ್ಲ ಎನ್ನಲಾಗಿದೆ. ಇದಲ್ಲದೆ, ಕೆಲ ಆರಂಭಿಕ ಟೆಸ್ಟ್ ಗಳು ಸಿತೋಲ್ ಇತ್ತೀಚೆಗೆ ಗರ್ಭವತಿ ಕೂಡ ಆಗಿಲ್ಲ ಎನ್ನಲಾಗಿದೆ. ಇದಾದ ಬಳಿಕ ಮಹಿಳೆಯ ಹಕ್ಕು ಮಂಡನೆ ನಕಲಿ ಎಂದು ಸಾಬೀತಾಗಿದೆ. ವರದಿಗಳ ಪ್ರಕಾರ ಏಕಕಾಲಕ್ಕೆ ಮಹಿಳೆಯೋರ್ವಳು 10 ಮಕ್ಕಳನ್ನು ಜನ್ಮ ನೀಡಿದ್ದಾಳೆ ಎಂಬ ವರದಿಯ ಮೇಲೆ ಶಂಕೆ ವ್ಯಕ್ತವಾಗಿದೆ. ಏಕೆಂದರೆ, ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಯಾವುದೇ ಆಸ್ಪತ್ರೆಯ ಹೆಸರನ್ನು ಉಲ್ಲೇಖಿಸಿಲ್ಲ.  ಈ ಕುರಿತು ಎಲ್ಲಾ ಆಸ್ಪತ್ರೆಗಳಲ್ಲಿ ವಿಚಾರಣೆ ನಡೆಸಲಾಗಿ, ಎಲ್ಲಾ ಆಸ್ಪತ್ರೆಗಳು ಈ ರೀತಿಯ ಯಾವುದೇ ಪ್ರಕರಣದ ಕುರಿತು ನಿರಾಕರಿಸಿವೆ.

ಇದನ್ನೂ ಓದಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News