Corona Vaccine ಅಡ್ಡಪರಿಣಾಮಗಳು ಕಂಡುಬಂದರೆ ಸಿಗಲಿದೆ ಪರಿಹಾರ: AIIMS ನಿರ್ದೇಶಕ
Coronavirus Vaccine: DCGI ವತಿಯಿಂದ ಭಾರತ್ ಬಯೋಟಿಕ್ ವ್ಯಾಕ್ಸಿನ್ ಗೆ ಅನುಮೋದನೆ ಸಿಕ್ಕ ಬಳಿಕ ಕಾಂಗ್ರೆಸ್ ಮುಖಂಡ ಶಶಿ ತರೂರ್ ವ್ಯಾಕ್ಸಿನ್ ಅನುಮೋದನೆಯನ್ನು ಪ್ರಶ್ನಿಸಿದ್ದರು. ಈ ಕುರಿತು AIIMS ನಿರ್ದೇಶಕರು ಹೇಳಿಕೆಯೊಂದನ್ನು ನೀಡಿದ್ದಾರೆ.
ನವದೆಹಲಿ: Coronavirus Vaccine - ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆ ಕೋವಿಶೀಲ್ಡ್ (Covishield)ಮತ್ತು ಭಾರತ್ ಬಯೋಟೆಕ್‌ನ ಲಸಿಕೆ ಕೋವಾಕ್ಸಿನ್ (Covaxin) ತುರ್ತು ಬಳಕೆಗೆ ನೀಡಿರುವ ಅಂತಿಮ ಅನುಮೋದನೆಯ ಕುರಿತು ಉದ್ಭವಿಸಿದ ಪ್ರಶ್ನೆಗಳಿಗೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ (AIIMS Director Randeep Guleria) ಒಂದು ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಗುಲೇರಿಯಾ ಕೊವಾಕ್ಸಿನ್ ಲಸಿಕೆ ನೀಡಲಾಗುವ ವ್ಯಕ್ತಿಯಲ್ಲಿ ಒಂದು ವೇಳೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಂಡುಬಂದರೆ ಆ ವ್ಯಕ್ತಿಗೆ ಪರಿಹಾರ ನೀಡಲಾಗುವುದು ಎಂದು ಗುಲೇರಿಯಾ ತಿಳಿಸಿದ್ದಾರೆ. ಕ್ಲಿನಿಕಲ್ ಪ್ರಯೋಗದ ಸಮಯದಲ್ಲಿಯೂ ಇದನ್ನು ಅನುಸರಿಸಲಾಗಿದೆ. ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡ ಲಸಿಕೆಗಳ ತುರ್ತು ಅನುಮೋದನೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್, "ಭಾರತ ಬಯೋಟೆಕ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ಇನ್ನೂ ನಡೆಸಲಾಗಿಲ್ಲ. ಹೀಗಾಗಿ ಕೋವಾಕ್ಸಿನ್‌ನ ಅಕಾಲಿಕ ಅನುಮೋದನೆ ಅಪಾಯಕಾರಿ. ಡಾ.ಹರ್ಷ್ ವರ್ಧನ್ ಈ ಕುರಿತು ಸ್ಪಷ್ಟನೆ ನೀಡಬೇಕು" ಎಂದು ಅವರು ಆಗ್ರಹಿಸಿದ್ದರು. ಜೊತೆಗೆ ಕೊರೊನಾ ವ್ಯಾಕ್ಸಿನ್ ಟ್ರಯಲ್ ಪೂರ್ಣಗೊಳ್ಳುವವರೆಗೆ ಇದರ ಬಳಕೆಯಿಂದ ದೂರ ಉಳಿಯಬೇಕು ಹಾಗೂ ಈ ಅವಧಿಯಲ್ಲಿ ಭಾರತ ಅಸ್ಟ್ರಾಜೇನಿಕಾ ವ್ಯಾಕ್ಸಿನ್ ನ ಬಳಕೆ ಮಾಡಬೇಕು ಎಂದು ತರೂರ್ ಹೇಳಿದ್ದರು.
ಒಂದು ವೇಳೆ ಬ್ರಿಟನ್ ನ ರೂಪಾಂತರ ವೈರಸ್ ನ ಗಂಭೀರ ಪರಿಣಾಮಗಳು ಕಂಡು ಬಂದರೆ ಕೊವ್ಯಾಕ್ಸಿನ್ ಅನ್ನು ಕೇವಲ ಬ್ಯಾಕಪ್ ರೀತಿಯಲ್ಲಿ ಬಳಸಲಾಗುವುದು ಎಂದು ಏಮ್ಸ್ ಮುಖ್ಯಸ್ಥರು ಹೇಳಿದ್ದಾರೆ. ಒಂದು ವೇಳೆ ವ್ಯಾಕ್ಸಿನ್ ಬಳಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಂಡು ಬಂದಲ್ಲಿ, ಇದಕ್ಕಾಗಿ ಪರಿಹಾರ ಒದಗಿಸುವ ವ್ಯವಸ್ಥೆ ಇದೆ. ಯಾವುದೇ ಒಂದು ವ್ಯಾಕ್ಸಿನ್ ಕುರಿತು ನಾವು ಹೇಳುವಾಗ, ಸುರಕ್ಷತೆ ಪ್ರಮುಖ ಆದ್ಯತೆ ಆಗಿರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವುದು ತುಂಬಾ ಮಹತ್ವದ್ದು. ಇದೆ ಕಾರಣದಿಂದ ವ್ಯಾಕ್ಸಿನ್ ಅನ್ನು ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಮತ್ತು ಅದರ ಸುರಕ್ಷತೆಯನ್ನು ಸುನಿಶ್ಚಿತಗೊಳಿಸಲಾಗುತ್ತದೆ. ಆ ಬಳಿಕ ಮಾತ್ರವೇ ನಾವು ಮಾನವ ಪರೀಕ್ಷೆಗೆ ಮುಂದಾಗುತ್ತೇವೆ. ಈ ಎಲ್ಲ ದತ್ತಾಂಶಗಳನ್ನು ತಜ್ಞರು ಗಂಭೀರವಾಗಿ ಪರಿಶೀಲಿಸುತ್ತಾರೆ. ಆ ಬಳಿಕ ಮಾತ್ರವೇ ಅವರು ಯಾವುದೇ ಒಂದು ಲಸಿಕೆಯನ್ನು ಅನುಮೋದಿಸುತ್ತಾರೆ ಎಂದು ಗುಲೇರಿಯಾ ಹೇಳಿದ್ದಾರೆ.
ಇದನ್ನು ಓದಿ- COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ಈ ದಿನ ನಮ್ಮ ದೇಶದ ಪಾಲಿಗೆ ಒಂದು ಸಂತಸದ ದಿನವಾಗಿದೆ ಹಾಗೂ ಇದು ಹೊಸ ವರ್ಷವನ್ನು ಆರಂಭಿಸುವ ಒಂದು ಉತ್ತಮ ವಿಧಾನವಾಗಿದೆ. ಎರಡೂ ಲಸಿಕೆಗಳು ಭಾರತದಲ್ಲಿ ಉತ್ಪಾದನೆಗೊಂಡಿವೆ. ಈ ಎರಡು ವ್ಯಾಕ್ಸಿನ್ ಗಳು ಪರಿಣಾಮಕಾರಿಯಾಗಿದ್ದು, ಅವುಗಳ ನಿಗಾವಹಿಸುವಿಕೆ ಕೂಡ ತುಂಬಾ ಸುಲಭವಾಗಿದೆ. ಆದಷ್ಟು ಬೇಗ ನಾವು ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಆವಶ್ಯಕತೆ ಇದೆ.
ತುರ್ತು ಪರಿಸ್ಥಿತಿಯಲ್ಲಿ ಒಂದು ವೇಳೆ ಆಕಸ್ಮಿಕವಾಗಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬಂದರೆ, ಲಸಿಕಾಕರಣ ಕಾರ್ಯಕ್ರಮ ನಡೆಸುವ ಆವಶ್ಯಕತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ್ ಬಯೋಟಿಕ್ ಲಸಿಕೆಯನ್ನು ಬಳಸಲಾಗುವುದು. ಇದನ್ನು ಒಂದು ಬ್ಯಾಕಪ್ ಲಸಿಕೆಯಾಗಿ ಕೂಡ ಬಳಕೆ ಮಾಡಬಹುದು. ಏಕೆಂದರೆ ಸಿರಮ್ ಇನ್ಸ್ಟಿಟ್ಯೂಟ್ ವ್ಯಾಕ್ಸಿನ್ ನ ಪ್ರಭಾವಶಾಲಿಯಾಗಿರುವುದು ಇನ್ನು ಸುನಿಶ್ಚಿತಗೊಂಡಿಲ್ಲ ಎಂದು ಗುಲೇರಿಯಾ ಹೇಳಿದ್ದಾರೆ.
ಇದನ್ನು ಓದಿ-BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO
ಆರಂಭದಲ್ಲಿ ಜನರಿಗೆ ಸಿರಮ್ ಲಸಿಕೆ ನೀಡಲಾಗುವುದು ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಸಿರಮ್ ಬಳಿ ಈಗಾಗಲೇ 50 ಮಿಲಿಯನ್ ಡೋಸ್ ಗಳಿವೆ ಮತ್ತು ಮೊದಲ ಹಂತದಲ್ಲಿ ಅವರು ಈ ಲಸಿಕೆ ಒದಗಿಸಲಿದ್ದಾರೆ. ಈ ಹಂತದಲ್ಲಿ ಒಟ್ಟು 3 ಕೋಟಿ ಜನರಿಗೆ ಲಸಿಕೆ ವಿತರಣೆ ನಡೆಯಲಿದೆ. ಹಂತ ಹಂತವಾಗಿ ನಾವೂ ಸಂಪೂರ್ಣ ಪ್ರಕ್ರಿಯೆಗೆ ಸಿದ್ಧರಾಗುವೆವು ಹಾಗೂ ಅಲ್ಲಿಯವರೆಗೆ ಭಾರತ್ ಬಯೋಟೆಕ್ ದತಾಂಶಗಳು ಕೂಡ ಹೊರಬರಲಿವೆ ಎಂದು ಗುಲೇರಿಯಾ ಹೇಳಿದ್ದಾರೆ.
ಸ್ಪಷ್ಟನೆ ನೀಡಿದ DCGI
ಭಾರತ್ ಬಯೋಟೆಕ್ ಲಸಿಕೆಗೆ ನೀಡಲಾಗಿರುವ ಅನುಮೋದನೆಯ ಕುರಿತು ಉದ್ಭವಿಸಿರುವ ಪ್ರಶ್ನೆಗಳಿಗೆ DCGI ಕೂಡ ಸ್ಪಷ್ಟನೆ ನೀಡಿದೆ. ಎಲ್ಲಿಯವರೆಗೆ ಈ ವ್ಯಾಕ್ಸಿನ್ ಬಳಕೆ ಮಾಡಿಕೊಳ್ಳಲು ಸಿದ್ಧವಿರುವ ಲಾಭಾರ್ಥಿ ವ್ಯಾಕ್ಸಿನ್ ನ ಮಾಹಿತಿ ಇರುವ ಕುರಿತು ಒಪ್ಪಿಗೆ ಪತ್ರದ ಮೇಲೆ ಸಹಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಇದನ್ನು ಆತನ ಮೇಲೆ ಬಳಸಲಾಗುವುದಿಲ್ಲ ಎಂದು ಹೇಳಿದೆ.
ಇದನ್ನು ಓದಿ- Covid-19 ವಿರುದ್ಧದ ಹೋರಾಟದಲ್ಲಿ Bharat Biotech ನ Covaxin ಗೆ ಸಿಕ್ತು ಅನುಮತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.