ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಪೆಟ್ರೋಲ್ ಬೆಲೆ,ಸಾಮಾನ್ಯನಿಗೆ ಹೆಚ್ಚಿದ ಹೊರೆ
ಪೆಟ್ರೋಲ್ ದರ ಏರಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆ ಮೂಲಕ ಈಗಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.
ನವದೆಹಲಿ: ಪೆಟ್ರೋಲ್ ದರ ಏರಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆ ಮೂಲಕ ಈಗ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.
ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲಿಟರ್ ಗೆ 87.77 ಡಿಸೇಲ್ ಗೆ 76.98ಕ್ಕೆ ಏರಿದೆ ಆ ಮೂಲಕ ಮಹಾನಗರಗಳಲ್ಲಿ ಮುಂಬೈ ಅತಿ ಹೆಚ್ಚಿನ ಏರಿಕೆ ಕಂಡಿದೆ.ಇನ್ನು ದೆಹಲಿಯಲ್ಲಿ ಪೆಟ್ರೋಲ್ 80.38 ರೂ ಹಾಗೂ ಡಿಸೇಲ್ 72.51 ರೂ ಆಗಿದೆ.
ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಈಗ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ ತೀವ್ರ ಏರಿಕೆಯನ್ನು ಖಂಡಿದೆ ಎನ್ನಲಾಗಿದೆ.ಇನ್ನೊಂದೆಡೆಗೆ ಹೆಚ್ಚಿನ ತೆರಿಗೆಯೂ ಕೂಡ ಪ್ರಭಾವ ಬೀರಿದೆ ಎನ್ನಲಾಗಿದೆ.ಇದರ ಪರಿಣಾಮ ಈಗ ಡಾಲರ್ ವಿರುದ್ದ ರೂಪಾಯಿ ಮೌಲ್ಯ ಕುಸಿಯಲು ಕಾರಣ ಎನ್ನಲಾಗಿದೆ.
ಒಂದೆಡೆ ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್ ಬೆಲೆಯಾದರೆ ಇನ್ನೊಂದೆಡೆಗೆ ರೂಪಾಯಿ ಮೌಲ್ಯ ಕುಸಿಯುತ್ತಿದೆ,ಈ ಕಾರಣದಿಂದಾಗಿ ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪೆಟ್ರೋಲ್ ಮತ್ತು ಡಾಲರ್ ಎರಡು ಸಹಿತ ಸದ್ಯದಲ್ಲೇ ಶತಕ ಬಾರಿಸಲಿವೆ ಎಂದು ಕೇಂದ್ರ ಸರ್ಕಾರಕ್ಕೆ ವ್ಯಂಗವಾಡಿದ್ದರು.