ನವದೆಹಲಿ: ದೇಶದಲ್ಲಿ ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಹ ನಿಗದಿತ ಮಿತಿಯಲ್ಲಿ ಲಭ್ಯವಾಗಲಿದೆ. ಕೊರೊನಾವೈರಸ್ (Coronavirus) ಕಾರಣದಿಂದಾಗಿ ತೈಲ ಟ್ಯಾಂಕರ್‌ಗಳು ಮಿಜೋರಾಂ (Mizoram) ತಲುಪಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ಪೆಟ್ರೋಲ್-ಡೀಸೆಲ್ಗೆ ಕೊರತೆ ಉಂಟಾಗಿದೆ. ಈ ಕಾರಣದಿಂದಾಗಿ ಈಗ ಸ್ಥಳೀಯ ಜನರಿಗೆ ನಿಗದಿತ ಮಿತಿಯೊಳಗೆ ಇಂಧನವನ್ನು ನೀಡಬೇಕೆಂದು ಮಿಜೋರಾಂ ರಾಜ್ಯ ಸರ್ಕಾರ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈಗ ಪಡಿತರದಂತೆ ನಿಗದಿತ ಮಿತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್:
ಮಿಜೋರಾಂ ಸರ್ಕಾರ ವಾಹನಗಳ ಪ್ರಕಾರ ಪೆಟ್ರೋಲ್ (Petrol) ಮತ್ತು ಡೀಸೆಲ್ ಪ್ರಮಾಣವನ್ನು ನಿಗದಿಪಡಿಸಿದೆ. ಈಗ ರಾಜ್ಯವು ಸ್ಕೂಟರ್‌ಗಳಿಗೆ ಕೇವಲ 3 ಲೀಟರ್, ಬೈಕ್‌ಗಳಿಗೆ 5 ಲೀಟರ್ ಮತ್ತು ಕಾರುಗಳಿಗೆ 10 ಲೀಟರ್ ತೈಲ ಮಿತಿಯನ್ನು ನಿಗದಿಪಡಿಸಿದೆ.


ನಮ್ಮ ಪಾಲುದಾರ ವೆಬ್ಸೈಟ್ ಝೀಬಿಜ್.ಕಾಮ್ ಪ್ರಕಾರ, ಮ್ಯಾಕ್ಸಿಕ್ಯಾಬ್, ಪಿಕ್-ಅಪ್ ಟ್ರಕ್ ಮತ್ತು ಮಿನಿ ಟ್ರಕ್ನಲ್ಲಿ ಕೇವಲ 20 ಲೀಟರ್ ಡೀಸೆಲ್ ಅನ್ನು ಲೋಡ್ ಮಾಡಬಹುದು. ಸಿಟಿ ಬಸ್ ಮತ್ತು ಇತರ ಟ್ರಕ್‌ಗಳ ಮಿತಿಯನ್ನು 100 ಲೀಟರ್ ಎಂದು ನಿಗದಿಪಡಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಾಹನಗಳಲ್ಲಿ ಮಾತ್ರ ಲೋಡ್ ಮಾಡಬಹುದು. ಗ್ಯಾಲನ್ ಅಥವಾ ಇನ್ನಾವುದೇ ವಸ್ತುಗಳಲ್ಲಿ ತೈಲ ತುಂಬುವುದನ್ನು ಸಂಪೂರ್ಣ ನಿಷೇಧಿಸಲಾಗುವುದು.


ಮಿಜೋರಾಂ:
ಮಾಹಿತಿಯ ಪ್ರಕಾರ ಕರೋನಾವೈರಸ್‌ನಿಂದಾಗಿ ಮಿಜೋರಾಂ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಈ ಹಿನ್ನಲೆಯಲ್ಲಿ ತೈಲ ಟ್ಯಾಂಕರ್‌ಗಳು ಇಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಿದ್ದು ಅದನ್ನು ನೀಗಿಸಲು ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ.