ನವದೆಹಲಿ: ಒಂದೆಡೆ, ಭಾರತದಲ್ಲಿ ತಯಾರಾಗುತ್ತಿರುವ ಕೊರೊನಾವೈರಸ್ ಲಸಿಕೆ ತನ್ನ ಅಂತಿಮ ಹಂತದ ಪ್ರಯೋಗದಲ್ಲಿದ್ದರೆ, ಮತ್ತೊಂದೆಡೆ, ಫೈಜರ್ ಕಂಪನಿಯು ತನ್ನ ಲಸಿಕೆಯನ್ನು ಭಾರತದಲ್ಲಿ ತರಲು ಸಿದ್ಧವಾಗಿದೆ. ಬ್ರಿಟನ್‌ನಲ್ಲಿ ಬಳಕೆಗೆ ಅನುಮೋದನೆ ದೊರೆತ ನಂತರ, ಈಗ ಕರೋನಾ ಲಸಿಕೆ ತಯಾರಕ ಫೈಜರ್ ಭಾರತದತ್ತ ಮುಖಮಾಡಿದೆ. ಕೋವಿಡ್ -19 ಲಸಿಕೆಯನ್ನು  ತುರ್ತು ಬಳಕೆಗೆ ಅನುಮತಿ ನೀಡಲು ಫೈಜರ್ ನ  ಭಾರತೀಯ ಘಟಕವು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ (DGCI)ಗೆ ಕೋರಿಕೆ ಸಲ್ಲಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಭಾರತದಲ್ಲಿ Pfizer ಕೊರೊನಾ ಲಸಿಕೆ ಸಿಗುತ್ತಾ..?


DGCI ಅನುಮತಿ ಕೋರಿದ ಫೈಜರ್ (Pfizer)
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಡಿಸೆಂಬರ್ 4, 2020ರಂದು ಫೈಜರ್ ಕಂಪನಿ ಕೊರೊನಾ ವೈರಸ್ ವ್ಯಾಕ್ಸಿನ್ ಲಸಿಕೆಗೆ ಮಂಜೂರಾತಿ ನೀಡಲು DGCI ಗೆ ಪತ್ರ ಬರೆದಿದೆ.  ತನ್ನ ಈ ಪತ್ರದಲ್ಲಿ  Pfizer-BioNTech ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ನ ಆಮದು ಹಾಗೂ ಜನತೆಯವರೆಗೆ ತಲುಪಿಸಲು ಅನುಮತಿ ನೀಡಬೇಕು ಎಂದು ಕೋರಿದೆ. ಈಗಾಗಲೇ ತಮ್ಮ ಕಂಪನಿಯ ವ್ಯಾಕ್ಸಿನ್ ಗೆ ಬ್ರಿಟನ್ ಹಾಗೂ ಬಹರೇನ್ ದೇಶಗಳಲ್ಲಿ ಬಳಕೆಗೆ ಅನುಮತಿ ದೊರೆತಿದ್ದು, ಇದೀಗ ಲಸಿಕೆಯನ್ನು ಭಾರತಕ್ಕೆ ತಲುಪಿಸಲು ಬಯಸುತ್ತಿದೆ ಎಂದಿದೆ.


ಇದನ್ನು ಓದಿ- Covid-19:ತನ್ನ ವ್ಯಾಕ್ಷಿನ್ ಶೇ.95ರಷ್ಟು ಯಶಸ್ವಿ ಎಂದ Pfizer, ಸುರಕ್ಷತೆಯ ಮಾನದಂಡಗಳ ಮೇಲೂ ಸೈ


ಕೊರೊನಾ ವೈರಸ್ ವ್ಯಾಕ್ಸಿನ್ (Coronavirus Vaccine) ನಿರ್ಮಾಪಕ ಕಂಪನಿ ಫೈಜರ್ (Pfizer) ಭಾರತದಲ್ಲಿ ಕೇವಲ ವ್ಯಾಕ್ಸಿನ್ ಮಾರಾಟ ಮಾಡಲು ಮಾತ್ರ ಬಯಸದೆ ವ್ಯಾಕಿನ್ ನ ಕ್ಲಿನಿಕಲ್ ಟ್ರಯಲ್ ಕೂಡ ನಡೆಸಲು ಬಯುಸುತ್ತಿದೆ. Pfizer-BioNTech ಕಂಪನಿ, ಔಷಧಿ ಹಾಗೂ ಅದರ ಕ್ಲಿನಿಕಲ್ ಟ್ರಯಲ್ ನಿಯಮ 2019ರ  (Drugs and Clinical Trials Rules 2019) ಅಡಿ ಭಾರತದ ನಾಗರಿಕರ ಮೇಲೆ ತನ್ನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ಕೋರಿದೆ.


ಇದನ್ನು ಓದಿ-Pfizer corona vaccine: ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟರೆ ಮಾತ್ರ ಈ ಲಸಿಕೆ ಸುರಕ್ಷಿತ..!


ಕಳೆದ ಬುಧವಾರ ಬ್ರಿಟನ್ ಫೈಜರ್ ನ ಕೊವಿಡ್-19 ಲಸಿಕೆಯ ತುರ್ತು ಬಳಕೆ ಗೆ ಅನುಮತಿ ನೀಡಿದೆ.ಬ್ರಿಟನ್ ಬಳಿಕ ಶುಕ್ರವಾರ ಬಹರೇನ್ ಕೂಡ ಫೈಜರ್-ಬಯೋಂಟೆಕ್ ಲಸಿಕೆಯ ಬಳಕೆಗೆ ಅನುಮತಿ ನೀಡಿದೆ. ಪ್ರಸ್ತುತ ಕಂಪನಿ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಹಾಗೂ ತುರ್ತು ಬಳಕೆಗಾಗಿ ಬಾರತದತ್ತ ಮುಖಮಾಡಿದೆ. ಇದಕ್ಕೂ ಮೊದಲು ಕಂಪನಿ ಅಮೆರಿಕಾದಲ್ಲಿ ತನ್ನ ವ್ಯಾಕ್ಸಿನ್ ಬಳಕೆಗೆ ಅನುಮತಿ ಕೋರಿದೆ.