Pfizer corona vaccine: ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟರೆ ಮಾತ್ರ ಈ ಲಸಿಕೆ ಸುರಕ್ಷಿತ..!

ಫಿಜರ್ (Pfizer)ಲಸಿಕೆ ಆಶಾದಾಯಕವಾಗಿ ಕಂಡಿದ್ದರೂ ಸಹಿತ ಈಗ ಬಂದಿರುವ ಮಾಹಿತಿ ಪ್ರಕಾರ ನೂತನ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡಬೇಕಾಗುತ್ತದೆ.ಆಗ ಮಾತ್ರ ಇದು ಸುರಕ್ಷಿತವಾಗಬಲ್ಲದು ಎಂದು ಏಮ್ಸ್ ನಿರ್ದೇಶಕರಾದ ರಂದೀಪ್ ಗುಪ್ತಾ ತಿಳಿಸಿದ್ದಾರೆ.

Last Updated : Nov 11, 2020, 05:45 PM IST
Pfizer corona vaccine: ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟರೆ ಮಾತ್ರ ಈ ಲಸಿಕೆ ಸುರಕ್ಷಿತ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಫಿಜರ್ (Pfizer)ಲಸಿಕೆ ಆಶಾದಾಯಕವಾಗಿ ಕಂಡಿದ್ದರೂ ಸಹಿತ ಈಗ ಬಂದಿರುವ ಮಾಹಿತಿ ಪ್ರಕಾರ ನೂತನ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡಬೇಕಾಗುತ್ತದೆ.ಆಗ ಮಾತ್ರ ಇದು ಸುರಕ್ಷಿತವಾಗಬಲ್ಲದು ಎಂದು ಏಮ್ಸ್ ನಿರ್ದೇಶಕರಾದ ರಂದೀಪ್ ಗುಪ್ತಾ ತಿಳಿಸಿದ್ದಾರೆ.

ಇದನ್ನು ಓದಿ- Good News: ನವೆಂಬರ್ ನಲ್ಲಿ ಭಾರತಕ್ಕೆ ಬರಲಿದೆ Corona Vaccine! ರಷ್ಯಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ Dr.Reddy's Lab

ಆದರೆ ಇದು ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಕಷ್ಟಕರವಾಗುತ್ತದೆ.ಏಕೆಂದರೆ ಭಾರತದಂತಹ ದೇಶಗಳಲ್ಲಿ ಕೋಲ್ಡ್ ಚೈನ್ ನಿರ್ವಹಿಸುವುದು ಕಷ್ಟಕರವಾಗುತ್ತದೆ. ಆದರೆ ಮೂರನೇ ಹಂತದಲ್ಲಿರುವ ಲಸಿಕೆಯ ಸಂಶೋದನೆಗೆ ಇದು ಸಹಾಯಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Pfizer’s Covid vaccine: ಲಸಿಕೆ ವಿತರಣಾ ಕಾರ್ಯತಂತ್ರ ರಚಿಸಲು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆ

ಜರ್ಮನಿಯ ಸಂಸ್ಥೆ ಬಯೋಎನ್ಟೆಕ್ ಸಹಯೋಗದೊಂದಿಗೆ ಅಭಿವೃದ್ಧಿಯಲ್ಲಿ ಕೊರೋನವೈರಸ್ಗಾಗಿ ಅದರ ಲಸಿಕೆ ಸೋಂಕನ್ನು ತಡೆಗಟ್ಟುವಲ್ಲಿ ಶೇ 90 ಪರಿಣಾಮಕಾರಿ ಎಂದು ಫಿಜರ್ ಇತ್ತೀಚೆಗೆ ಘೋಷಿಸಿತು. ಪ್ರಪಂಚದಾದ್ಯಂತದ ದೇಶಗಳು ಅಭೂತಪೂರ್ವ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಕಾರಣ ಈ ಸುದ್ದಿ  ಆಶಾಕಿರಣವಾಗಿ ಬಂದಿತು.
 

Trending News