9 ರಿಂದ 12ನೇ ತರಗತಿಗಳ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಚಾಲನೆಗೆ ಯೋಜನೆ : ಸಿಬಿಎಸ್ಇ
CBSE : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 9 ರಿಂದ 12ನೇ ತರಗತಿಗಳಿಗೆ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆಗಳಿಗೆ ಚಾಲನೆ ನೀಡಲು ಯೋಚಿಸುತ್ತಿದೆ ಎಂದು ಸಿಬಿಎಸ್ಇ ಅಧಿಕಾರಿಗಳು ತಿಳಿಸಿದ್ದಾರೆ.
Open Book Examination :ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಈ ವರ್ಷದ ಕೊನೆಯಲ್ಲಿ ಒಂಬತ್ತರಿಂದ ಹನ್ನೆರಡನೇ ತರಗತಿ ಗಳಿಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಗಳಿಗೆ ಚಾಲನೆ ನೀಡಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಸಿಬಿಎಸ್ಇದ ಶಾಲೆಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ಯೋಚಿಸಿದ್ದು, ಈ ತೆರೆದ ಪುಸ್ತಕ ಪರೀಕ್ಷೆಯ ಉದ್ದೇಶ ಮಕ್ಕಳು ಇದನ್ನ ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಮತ್ತು ಈ ಸಂಬಂಧಿಸಿದ ಕುರಿತು ಅವರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದಾಗಿದೆ.
ಇದನ್ನು ಓದಿ :ʼಘಟ ಸರ್ಪʼವನ್ನು ಕೈಯಲ್ಲಿ ಹಿಡಿದು ನಿಭರ್ಯವಾಗಿ ಉಪನ್ಯಾಸ ಮಾಡಿದ ಯುವಕ..!
2023 ಡಿಸೆಂಬರ್ ನಲ್ಲಿ ಆಡಳಿತ ಮಂಡಳಿಯ ಕೊನೆಯ ಸಭೆಯಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಲಾಗಿತ್ತು ಮತ್ತು ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಇದನ್ನು ಓದಿ :ಒಂದೇ ಓವರ್’ನಲ್ಲಿ 6 ಸಿಕ್ಸರ್! ಯುವರಾಜ್ ಸಿಂಗ್ ಕ್ಲಬ್ ಸೇರಿದ ಮತ್ತೊಬ್ಬ ಭಾರತೀಯ ಬ್ಯಾಟ್ಸ್’ಮನ್
ಈ ತರಹದ ಪರೀಕ್ಷೆಯಿಂದ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶವಿತ್ತು ಮತ್ತು ಇದು ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದೆ.
ಈ ಯೋಜನೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಮಾಡಲಾದ ಶಿಫಾರಸ್ಸು ಗಳಿಗೆ ಅನುಗುಣವಾಗಿ ಮತ್ತು ಪರೀಕ್ಷೆ ಪೂರ್ಣಗೊಳಿಸುವ ಸಮಯ ರಚನಾತ್ಮಕ ಮತ್ತು ಕ್ರೂಡಿಕೃತ ಮೌಲ್ಯಮಾಪನದ ಸಮರ್ಪಕತೆ ಸಂಬಂಧಿಸಿದವರ ದೃಷ್ಟಿಕೋನ ಒಳಗೊಂಡಂತೆ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡಲು ಈ ರೀತಿಯ ಪರೀಕ್ಷೆಗಳನ್ನು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ನಡೆಸುವ ಯೋಜನೆಯನ್ನು ಈ ಮಂಡಳಿ ಹೊಂದಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.