6,6,6,6,6,6… ಒಂದೇ ಓವರ್’ನಲ್ಲಿ 6 ಸಿಕ್ಸರ್! ಯುವರಾಜ್ ಸಿಂಗ್ ಕ್ಲಬ್ ಸೇರಿದ ಮತ್ತೊಬ್ಬ ಭಾರತೀಯ ಬ್ಯಾಟ್ಸ್’ಮನ್

Vamshhi Krrishna 6 sixes in an over: ಒಂದು ಓವರ್‌’ನಲ್ಲಿ 6 ಸಿಕ್ಸರ್ ಬಾರಿಸಿ ಪವಾಡ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಂಶಿ ಕೃಷ್ಣ ಪಾತ್ರರಾಗಿದ್ದಾರೆ. ಬಿಸಿಸಿಐ ಕೂಡ ಈ ವಿಡಿಯೋವನ್ನು ಶೇರ್ ಮಾಡಿದೆ.

Written by - Bhavishya Shetty | Last Updated : Feb 21, 2024, 07:42 PM IST
    • ಒಂದೇ ಓವರ್‌’ನಲ್ಲಿ ಆರು ಸಿಕ್ಸರ್‌ ಬಾರಿಸಿದ ವಂಶಿಕೃಷ್ಟ
    • ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರ
    • ಕಡಪಾದಲ್ಲಿ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿ
6,6,6,6,6,6… ಒಂದೇ ಓವರ್’ನಲ್ಲಿ 6 ಸಿಕ್ಸರ್! ಯುವರಾಜ್ ಸಿಂಗ್ ಕ್ಲಬ್ ಸೇರಿದ ಮತ್ತೊಬ್ಬ ಭಾರತೀಯ ಬ್ಯಾಟ್ಸ್’ಮನ್ title=
Vamshi Krishna

Vamshhi Krrishna 6 sixes in an over: ಕರ್ನಲ್ ಸಿಕೆ ನಾಯುಡು ಟ್ರೋಫಿಯಲ್ಲಿ ಆಂಧ್ರ ಪರ ಆಡಿದ ಆರಂಭಿಕ ಬ್ಯಾಟ್ಸ್’ಮನ್ ವಂಶಿ ಕೃಷ್ಣ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಒಂದೇ ಓವರ್‌’ನಲ್ಲಿ ಆರು ಸಿಕ್ಸರ್‌’ಗಳನ್ನು ಬಾರಿಸುವ ಮೂಲಕ, ಈ ಬ್ಯಾಟ್ಸ್‌’ಮನ್ ಭಾರತದ ಬ್ಯಾಟ್ಸ್‌ಮನ್‌’ಗಳಾದ ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ರುತುರಾಜ್ ಗಾಯಕ್ವಾಡ್ (2022) ಅವರ ಕ್ಲಬ್‌’ಗೆ ಸೇರ್ಪಡೆಗೊಂಡಿದ್ದಾರೆ.

ಒಂದು ಓವರ್‌’ನಲ್ಲಿ 6 ಸಿಕ್ಸರ್ ಬಾರಿಸಿ ಪವಾಡ ಮಾಡಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಂಶಿ ಕೃಷ್ಣ ಪಾತ್ರರಾಗಿದ್ದಾರೆ. ಬಿಸಿಸಿಐ ಕೂಡ ಈ ವಿಡಿಯೋವನ್ನು ಶೇರ್ ಮಾಡಿದೆ.

ಇದನ್ನೂ ಓದಿ: Kannada Movie: ಸದ್ದು ಮಾಡುತ್ತಿದೆ ಆದಿತ್ಯ ಅಭಿನಯದ ‘ಕಾಂಗರೂ’ ಚಿತ್ರದ ಮೋಷನ್ ಪೋಸ್ಟರ್

ವಂಶಿ ಕೃಷ್ಣ ಒಂದೇ ಓವರ್‌’ನಲ್ಲಿ 6 ಸಿಕ್ಸರ್‌’ಗಳನ್ನು ಬಾರಿಸಿರುವ ವಿಡಿಯೋವನ್ನು ಬಿಸಿಸಿಐ ಡೊಮೆಸ್ಟಿಕ್‌’ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ ಹಂಚಿಕೊಳ್ಳಲಾಗಿದೆ.

 

 

ಆಂಧ್ರದ ವಂಶಿ ಕೃಷ್ಣ ಅವರು ಕಡಪಾದಲ್ಲಿ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿಯಲ್ಲಿ, ರೈಲ್ವೇಸ್ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಅವರ ಒಂದು ಓವರ್‌’ನಲ್ಲಿ 6 ಸಿಕ್ಸರ್‌’ಗಳನ್ನು ಬಾರಿಸುವ ಮೂಲಕ 64 ಎಸೆತಗಳಲ್ಲಿ 110 ರನ್ ಗಳಿಸಿ ಬಿರುಸಿನ ಇನಿಂಗ್ಸ್ ಅನ್ನು ಆಡಿದ್ದಾರೆ.

ಪಂದ್ಯ ಡ್ರಾ:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಧ್ರ 378 ರನ್ ಗಳಿಸಿತ್ತು. ವಂಶಿ ಕೃಷ್ಣ 64 ಎಸೆತಗಳಲ್ಲಿ 110 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ರೈಲ್ವೇಸ್ ಮೊದಲ ಇನಿಂಗ್ಸ್’ನಲ್ಲಿ 9 ವಿಕೆಟ್ ನಷ್ಟಕ್ಕೆ 865 ರನ್ ಗಳಿಸಿತ್ತು. ಆದರೆ, ಈ ಪಂದ್ಯ ಡ್ರಾ ಆಗಿಯೇ ಉಳಿಯಿತು. ಇಬ್ಬರು ರೈಲ್ವೇಸ್ ಬ್ಯಾಟ್ಸ್‌ಮನ್‌ಗಳು ದ್ವಿಶತಕ ಗಳಿಸಿದರು. ಅನ್ಶ್ ಯಾದವ್ 268 ರನ್ ಗಳಿಸಿದರೆ, ರವಿ ಸಿಂಗ್ 258 ರನ್‌’ಗಳ ಇನ್ನಿಂಗ್ಸ್ ಆಡಿದ್ದರು.

ಇದನ್ನೂ ಓದಿ: ಕೈ ಹಿಡಿಯಲಿದೆ ಗುರು ಬಲ... ಯಶಸ್ಸಿಗೆ ಮತ್ತೊಂದು ಹೆಸರಾಗುವರು ಈ 4 ರಾಶಿಯವರು, ಲಕ್ಷ ಲಕ್ಷ ಗಳಿಕೆಯ ಯೋಗ ಇವರದ್ದು!

ವಂಶಿ ಕೃಷ್ಣಗೂ ಮೊದಲು, ರವಿಶಾಸ್ತ್ರಿ ಮತ್ತು ಯುವರಾಜ್ ಸಿಂಗ್ ಒಂದು ಓವರ್‌’ನಲ್ಲಿ 6 ಸಿಕ್ಸರ್‌ ಬಾರಿಸಿದ್ದಾರೆ. 1985 ರ ರಣಜಿ ಟ್ರೋಫಿ ಪಂದ್ಯದಲ್ಲಿ, ಬಾಂಬೆ ಪರ ಆಡುವಾಗ ರವಿಶಾಸ್ತ್ರಿ ಬರೋಡಾ ವಿರುದ್ಧ ಒಂದು ಓವರ್‌’ನಲ್ಲಿ ಆರು ಸಿಕ್ಸರ್‌’ಗಳನ್ನು ಬಾರಿಸಿದ್ದರು. ಇದಾದ ನಂತರ 2007 ರ T20 ವಿಶ್ವಕಪ್‌ ಸಂದರ್ಭದಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌’ನಲ್ಲಿ 6 ಸಿಕ್ಸರ್‌’ಗಳನ್ನು ಬಾರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News