PM Kisan ಯೋಜನೆಯ 8ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ಈ ನಂಬರ್ ಗೆ ಕರೆ ಮಾಡಿ
ಈ ಯೋಜನೆಯಡಿ ರೈತರಿಗೆ ಒಂದು ವರ್ಷದಲ್ಲಿ 3 ಕಂತುಗಳಲ್ಲಿ 6,000 ರೂ.
ನವದೆಹಲಿ : ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ 'ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ'ಯನ್ನ ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ರೈತರಿಗೆ ಒಂದು ವರ್ಷದಲ್ಲಿ 3 ಕಂತುಗಳಲ್ಲಿ 6,000 ರೂ. ನೀಡಲಿದೆ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳನ್ನ ರೈತರ ಖಾತೆಯಲ್ಲಿ ವರ್ಗಾಯಿಸಲಾಗುತ್ತದೆ. ಈವರೆಗೆ ರೈತರ ಖಾತೆಗೆ 8 ಕಂತುಗಳ ಹಣವನ್ನ ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ :
ಪ್ರಧಾನಿ ಮೋದಿ(PM Narendra Modi)ಯವರು ಮೇ 14,2021 8ನೇ ಕಂತು ಬಿಡುಗಡೆ ಮಾಡಿದ್ರು. ಆದ್ರೆ, ಇನ್ನೂ ಹಣವು ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಬಂದಿಲ್ಲ. ನಿಮ್ಮ ಖಾತೆಗೆ ಮೊತ್ತವನ್ನ ಜಮಾ ಮಾಡದಿದ್ದರೆ, ನೀವು ನಿರ್ದಿಷ್ಟ ಸಂಖ್ಯೆಗಳಿಗೆ ಕರೆ ಮಾಡಿ, ದೂರು ನೀಡಬಹುದು ಮತ್ತು ಕಾರಣವನ್ನ ತಿಳಿದುಕೊಳ್ಳಬಹುದು.
ಇದನ್ನೂ ಓದಿ : RBI Alert: ಬ್ಯಾಂಕ್ ಖಾತೆಯಲ್ಲಿ ವಂಚನೆ ನಡೆದಿದೆಯೇ? 10 ದಿನಗಳಲ್ಲಿ ನಿಮ್ಮ ಹಣ ಹಿಂಪಡೆಯುವುದು ಹೇಗೆಂದು ತಿಳಿಯಿರಿ
ಹೌದು, ಈವರೆಗೆ ನಿಮ್ಮ ಖಾತೆಗೆ ಹಣ(Money) ಬಂದಿಲ್ಲದಿದ್ದರೆ, ನೀವು ಅದರ ಬಗ್ಗೆ ದೂರು ನೀಡಬಹುದು. ಪಿಎಂ ಕಿಸಾನ್ ಸಮ್ಮನ್ ಸಹಾಯವಾಣಿ ಸಂಖ್ಯೆಯಲ್ಲಿ ನೀವು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಬಹುದು. ಇದಲ್ದೇ ಕೆಳಗಿರುವ ಸಂಖ್ಯೆ.
ಇದನ್ನೂ ಓದಿ : ಜೂನ್ 5 ರಂದು ಕೃಷಿ ಕಾನೂನು ವಿರೋಧಿಸಿ ರೈತರಿಂದ 'ಸಂಪೂರ್ಣ ಕ್ರಾಂತಿ ದಿವಸ್' ಆಚರಣೆ
ದೂರು ನೀಡಲು ಪ್ರಮುಖ ಸಂಖ್ಯೆಗಳು ಕೆಳಗಿನಂತಿವೆ!
- PM ಕಿಸಾನ್ ಟೋಲ್ ಉಚಿತ(PM Kisan Toll Free Number) ಸಂಖ್ಯೆ: 18001155266
- PM ಕಿಸಾನ್ ಸಹಾಯವಾಣಿ(Helpline NUmber) ಸಂಖ್ಯೆ: 155261
ಇದನ್ನೂ ಓದಿ : TET Validity Extended : TET ಅರ್ಹತಾ ಪ್ರಮಾಣಪತ್ರದ ವ್ಯಾಲಿಡಿಟಿಯನ್ನ 'ಲೈಫ್ ಟೈಮ್' ವರೆಗೆ ವಿಸ್ತರಿಸಿದೆ ಸರ್ಕಾರ!
- ಪಿಎಂ ಕಿಸಾನ್(PM Kisan) ಲ್ಯಾಂಡ್‌ಲೈನ್ ಸಂಖ್ಯೆಗಳು: 011-23381092, 23382401
- ಪಿಎಂ ಕಿಸಾನ್ ಅವರ ಹೊಸ ಸಹಾಯವಾಣಿ: 011-24300606
ಇದನ್ನೂ ಓದಿ : Baba Ramdev : ಯೋಗ ಗುರು ರಾಮದೇವಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್!
-PM ಕಿಸಾನ್ ಮತ್ತೊಂದು ಸಹಾಯವಾಣಿ ಹೊಂದಿದೆ: 0120-6025109
- ಇ-ಮೇಲ್ ID: pmkisan-ict@gov.in
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ