ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತ ಸಂಘಗಳ ಜಂಟಿ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಜೂನ್ 5 ರಂದು 'ಸಂಪೂರ್ಣ ಕ್ರಾಂತಿ ದಿವಸ್' ಆಚರಿಸುವುದಾಗಿ ಘೋಷಿಸಿದೆ.ಅಷ್ಟೇ ಅಲ್ಲದೆ ಬಿಜೆಪಿಯ ನಾಯಕರು ಮತ್ತು ಅದರ ಮಿತ್ರ ಪಕ್ಷಗಳ ಕಚೇರಿಗಳು ಮತ್ತು ಮನೆಗಳ ಹೊರಗೆ ಈ ಶಾಸನಗಳ ಪ್ರತಿಗಳನ್ನು ಸುಡುವುದಾಗಿ ಘೋಷಿಸಿದೆ.
ಇದನ್ನೂ ಓದಿ-ಪಾಕ್ ವ್ಯಾಕ್, ಇದು ಮೇಡ್ ಇನ್ ಪಾಕಿಸ್ತಾನ್ ಕೊವಿಡ್ ವ್ಯಾಕ್ಸಿನ್..!
"ಕಳೆದ ವರ್ಷ ಜೂನ್ 5 ರಂದು ಮೂರು ರೈತ-ವಿರೋಧಿ ಮತ್ತು ಜನ ವಿರೋಧಿ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಗಳಾಗಿ ತರಲಾಯಿತು. ಈ ಕೃಷಿ ಕಾನೂನುಗಳ ವಿರುದ್ಧ ಭಾರಿ ಪ್ರತಿಭಟನೆ(Farmers Protest) ನಡೆಯುತ್ತಿದೆ ಮತ್ತು ದೆಹಲಿಯ ಗಡಿಯಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಚಳುವಳಿ ನಡೆಯುತ್ತಿದೆ "ಎಂದು ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO
ಎಸ್‌ಕೆಎಂ ಜೂನ್ 5 ರಂದು 'ಸಂಪೂರ್ಣ ಕ್ರಾಂತಿ ದಿವಸ್' ಆಚರಿಸಲಿದ್ದು, ಕೃಷಿ ಕಾನೂನುಗಳ ಪ್ರತಿಗಳನ್ನು ಬಿಜೆಪಿ ಮತ್ತು ಮಿತ್ರ ಪಕ್ಷಗಳ ಮುಖಂಡರ ಕಚೇರಿಗಳು ಮತ್ತು ಮನೆಗಳ ಹೊರಗೆ ಸುಡಲಿದೆ ಎಂದು ತಿಳಿಸಿದೆ.ಈ ನಾಯಕರ ಅನುಪಸ್ಥಿತಿಯಲ್ಲಿ, ಆಡಳಿತ ಕಚೇರಿಗಳ ಮುಂದೆ ಕಾನೂನುಗಳ ಪ್ರತಿಗಳನ್ನು ಸುಡಲಾಗುತ್ತದೆ. ಈ ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತವಾಗಿರುತ್ತದೆ ಎಂದು ಅದು ಹೇಳಿದೆ.
ಕಳೆದ ತಿಂಗಳು, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಲು 'ಕಪ್ಪು ದಿನ' ಆಚರಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.