ನವದೆಹಲಿ : ಆಗಸ್ಟ್ 9 ರಂದು ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತಿನ ಹಣ ಬಿಡುಗಡೆ ಮಾಡಿದರು. ಸುಮಾರು 9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ 19,500 ಕೋಟಿ ರೂ. ಹೆಚ್ಚಿನ ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ.


COMMERCIAL BREAK
SCROLL TO CONTINUE READING

ನೀವು ರೈತರಾಗಿದ್ದರೆ ಮತ್ತು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಿಮ್ಮ ಹೆಸರನ್ನು ಸೇರಿಸಲು ಮತ್ತು 9 ನೇ ಕಂತಿನ(PM Kisan 9th Installment) ಲಾಭ ಪಡೆಯಲು ನೀವು ನೇರವಾಗಿ ನಿಮ್ಮ ಜಿಲ್ಲೆಯ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು.


ಇದನ್ನೂ ಓದಿ : Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?


ಇದರ ಜೊತೆಗೆ, ಸರ್ಕಾರವು PM- KISAN ವೆಬ್ ಪೋರ್ಟಲ್ ಅಂದರೆ www.pmkisan.gov.in ನಲ್ಲಿ ಒಂದು ವಿಶೇಷವಾದ ರೈತರ ಕಾರ್ನರ್(Farmers Corner) ಅನ್ನು ಪರಿಚಯಿಸಿದೆ. ಇದರ ಮೂಲಕ, ರೈತರಿಗೆ ಸೌಲಭ್ಯವನ್ನು ಪಡೆಯಲು ಮೂರು ವಿಭಿನ್ನ ಆಯ್ಕೆಗಳನ್ನು ಒದಗಿಸಲಾಗಿದೆ.


ಇದನ್ನೂ ಓದಿ : Oppo: ಶಕ್ತಿಯುತ ಬ್ಯಾಟರಿ, ಉತ್ತಮ ಕ್ಯಾಮೆರಾದೊಂದಿಗೆ ರಹಸ್ಯವಾಗಿ ಜಬರ್ದಸ್ತ್ Smartphone ಬಿಡುಗಡೆ ಮಾಡಿದ ಒಪ್ಪೋ


1. ಹೊಸ ರೈತನ ನೋಂದಣಿ: ಅರ್ಹತೆಗೆ ಸಂಬಂಧಿಸಿದಂತೆ ಕೆಲವು ವೈಯಕ್ತಿಕ ವಿವರಗಳನ್ನು ಮತ್ತು ಸ್ವಯಂ ಘೋಷಣೆಯನ್ನು ಭರ್ತಿ ಮಾಡುವ ಮೂಲಕ ರೈತರು ತಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಈ ಲಿಂಕ್ ಸಹಾಯ 2. ಮಾಡುತ್ತದೆ. ರೈತರು ಭರ್ತಿ ಮಾಡಿದ ನಮೂನೆಯನ್ನು ನೇರವಾಗಿ ರಾಜ್ಯ ನೋಡಲ್ ಅಧಿಕಾರಿ (SNO) ಗೆ ದೃಡೀಕರಣಕ್ಕಾಗಿ ಕಳುಹಿಸಲಾಗುತ್ತದೆ.
3. ರಾಜ್ಯ ನೋಡಲ್ ಅಧಿಕಾರಿ ನಂತರ ರೈತರು ಭರ್ತಿ ಮಾಡಿದ ಮಾಹಿತಿಯನ್ನು ಪರಿಶೀಲಿಸುತ್ತಾರೆ ಮತ್ತು ಅದನ್ನು PM-KISAN ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.
4. ರೈತರು ತಮ್ಮ ಆಧಾರ್ ಕಾರ್ಡ್‌ಗೆ ಅನುಗುಣವಾಗಿ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ಸೇರಿಸಲು ಮುಕ್ತರಾಗಿದ್ದಾರೆ ಮತ್ತು ನಂತರ ಅದನ್ನು ಸಿಸ್ಟಮ್‌ನಲ್ಲಿ ನವೀಕರಿಸಲಾಗುತ್ತದೆ ಮತ್ತು ದೃಡೀಕರಿಸಲಾಗುತ್ತದೆ.
5. ರೈತ ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ನಂಬರ್(Bank Account Number) ಅಥವಾ ನೋಂದಾಯಿತ ಮೊಬೈಲ್ ನಂಬರ್ ಮೂಲಕ ತಮ್ಮ ಕಂತುಗಳ ಸ್ಟೇಟಸ್ ಪರಿಶೀಲಿಸಬಹುದು.


ಇದನ್ನೂ ಓದಿ : ಭಾರತದ ಈ ರಾಜ್ಯದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ: ಕಾರಣ ಇಲ್ಲಿದೆ…


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana)ಯಡಿ, 6000 ರೂ. ನೇರ ಪಾವತಿಯನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂ. ಅನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ನೀವು ಕೃಷಿಕರಾಗಿದ್ದರೆ ನೀವು ಅಧಿಕೃತ PM ಕಿಸಾನ್ ಪೋರ್ಟಲ್‌ನಲ್ಲಿ www.pmkisan.gov.in ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಅದರ ಸ್ಟೇಟಸ್ ಪರಿಶೀಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.