ನವದೆಹಲಿ: PM Modi Dedicated 35 New Crop Verities - ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ದೇಶದ ಕೃಷಿ ಜಗತ್ತಿಗೆ (Agriculture World) ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ, ಪಿಎಂ ಮೋದಿ 35 ಬಗೆಯ ಹೊಸ ಬೆಳೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ. ಪಿಎಂ ಮೋದಿ ತಮ್ಮ ಭಾಷಣದಲ್ಲಿ ಬೆಳೆಯನ್ನು ಎಷ್ಟು ಆಳವಾಗಿ ಬೆಳೆಸಿದರೆ, ಆ ಬೆಳೆಯ ಇಳುವರಿ ಉತ್ತಮವಾಗಿರುತ್ತದೆ ಎಂಬುದರ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಟಾಲರೆನ್ಸ್ ರಾಯ್‌ಪುರದ ಹೊಸ ಕ್ಯಾಂಪಸ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. 


PM Narendra Modi) ವಿವಿಧ ಹೊಸ ಬೆಳೆಗಳು ಹವಾಮಾನ ವೈಪರೀತ್ಯದ  ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕೃಷಿ ಸಮ್ಮಾನ್ ನಿಧಿ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಮೊತ್ತದಿಂದ ಸಣ್ಣ ರೈತರು ಸಾಕಷ್ಟು ಲಾಭ ಪಡೆದಿದ್ದಾರೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Best Quit-Smoking Tips: ಧೂಮಪಾನ ಚಟದಿಂದ ಹೊರಬರಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ


ಈ ಹೊಸ ಬೆಳೆಗಳ ವೈಶಿಷ್ಟ್ಯ ಏನು?
ಪ್ರಧಾನ ಮಂತ್ರಿ ದೇಶಕ್ಕೆ ಹಲವು ಬೆಳೆಗಳ ಉಡುಗೊರೆಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬರಗಾಲದ ಹೊಡೆತವನ್ನು ಸುಲಭವಾಗಿ ಹೊತ್ತುಕೊಳ್ಳುವ ತೊಗರಿ ಬೆಳೆ ಕೂಡ ಈ ಪಟ್ಟಿಯಲ್ಲಿ ಇರಲಿದೆ. ಇದಲ್ಲದೇ, ರೋಗ ನಿರೋಧಕತೆಯಿರುವ ಅಕ್ಕಿಯನ್ನು ಸಹ ತಯಾರಿಸಲಾಗಿದೆ. ಇದಲ್ಲದೇ, ರಾಗಿ, ಮೆಕ್ಕೆಜೋಳ, ಹುರುಳಿ ಮುಂತಾದ ವಿವಿಧ ಬಗೆಯ ಬೆಳೆಗಳು ಕೂಡ ದೇಶಕ್ಕೆ ಲಭ್ಯವಾಗಲಿವೆ.


ಇದನ್ನೂ ಓದಿ-LPG Cylinder Subsidy Latest News: ಅಡುಗೆ ಅನಿಲ ಸಿಲಿಂಡರ್ ಮೇಲೆ ಮತ್ತೆ ಸಿಗಲಿದೆಯೇ ಸಬ್ಸಿಡಿ? ಸರ್ಕಾರ ಸಿದ್ಧಪಡಿಸಿದೆ ಈ ಮಾಸ್ಟರ್ ಪ್ಲಾನ್


ಈ ವಿಶೇಷ ತಳಿಗಳ ಬೆಳೆಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICMR) ಅಭಿವೃದ್ಧಿಪಡಿಸಿದೆ. ಇವು ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆಯ ಅವಳಿ ಸವಾಲುಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿವೆ. ಈ ಪ್ಯಾನ್-ಇಂಡಿಯಾ ಕಾರ್ಯಕ್ರಮವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICMR), ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು  (Agriculture Universities)ಮತ್ತು ಕೃಷಿ ವಿಜ್ಞಾನ ಕೇಂದ್ರಗಳು (Krushi Vigyan Kendra) ಜಂಟಿಯಾಗಿ ಆಯೋಜಿಸಿವೆ.


ಇದನ್ನೂ ಓದಿ-ವಿದೇಶಕ್ಕೆ ಹೋಗಬಯಸುವ ಭಾರತೀಯರಿಗೆ ಶಾಕ್! WHOನಿಂದ ಕೊವ್ಯಾಕ್ಸಿನ್ ಮಾನ್ಯತೆಗೆ ವಿಳಂಬ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.