PM Kisan ಯೋಜನೆಯಲ್ಲಿ ಧನವೃಷ್ಟಿ! 6000 ವಾರ್ಷಿಕ ಕಂತಿನ ಜೊತೆಗೆ ಸಿಗಲಿದೆ 5000 ರೂ.ಗಳ ಮಾಸಿಕ ಪಿಂಚಣಿ

PM Kisan Maan Dhan Pension Scheme - ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ (PM Kisan Samman Nidhi), 60 ವರ್ಷಗಳ ನಂತರ ಪಿಂಚಣಿ ಸೌಲಭ್ಯವಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ, ರೈತನಿಗೆ ಮಾಸಿಕ ಪಿಂಚಣಿ (Farmer Pension) 5000 ರೂ. ಸಿಗುತ್ತದೆ. ಬನ್ನಿ ಹಾಗಾದರೆ ಈ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳೋಣ.

Written by - Nitin Tabib | Last Updated : Sep 27, 2021, 01:04 PM IST
  • PM ಕಿಸಾನ್ ಸಮ್ಮಾನ್ ನಿಧಿ ಅಡಿ ಸಿಗುತ್ತಿವೆ ಹಲವು ಲಾಭಗಳು.
  • ವಾರ್ಷಿಕ 6000 ಕಂತಿನ ಜೊತೆಗೆ ಮಾಸಿಕ 3000 ಪಿಂಚಣಿ ಗ್ಯಾರಂಟಿ.
  • PM ಕಿಸಾನ್ ಲಾಭಾರ್ಥಿಗಳಿಗೆ ಇದರಿಂದ ಹೇಗೆ ಲಾಭ ಸಿಗಲಿದೆ.
PM Kisan ಯೋಜನೆಯಲ್ಲಿ ಧನವೃಷ್ಟಿ! 6000 ವಾರ್ಷಿಕ ಕಂತಿನ ಜೊತೆಗೆ ಸಿಗಲಿದೆ 5000 ರೂ.ಗಳ ಮಾಸಿಕ ಪಿಂಚಣಿ title=
PM Kisan Maan Dhan Pension Scheme (File Photo)

PM Kisan Maan Dhan Pension Scheme - ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಕೇಂದ್ರ ಸರ್ಕಾರದ (Central Government) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಮೂರು ಕಂತಿನ ರೂ 2,000 ಅಂದರೆ ವಾರ್ಷಿಕ 6000 ರೂಗಳನ್ನು ನೇರವಾಗಿ ರೈತರ ಖಾತೆಗೆ ಹಣ ವರ್ಗಾಗಿಸಲಾಗುತ್ತದೆ. ಈ ಯೋಜನೆಯಡಿ, ರೈತರಿಗೆ ಪಿಂಚಣಿ ಸೌಲಭ್ಯ ಅಂದರೆ ಪಿಎಂ ಕಿಸಾನ್ ಮಾನ್ ಧನ್  ಪಿಂಚಣಿ ಯೋಜನೆಯ ರೂಪದಲ್ಲಿ ಸಿಗಲಿದೆ.

ನೀವೂ ಕೂಡ ಒಂದು ವೇಳೆ ಪಿಎಂ ಕಿಸಾನ್ (PM Kisan Yojana) ನಲ್ಲಿ ಖಾತೆ ಹೊಂದಿದ್ದರೆ, ಇದರ ಲಾಭ ಪಡೆಯಲು ನಿಮಗೆ ಯಾವುದೇ ಡಾಕ್ಯುಮೆಂಟ್ ಅಗತ್ಯವಿಲ್ಲ. ನಿಮ್ಮ ನೇರ ನೋಂದಣಿಯನ್ನು PM ಕಿಸಾನ್ ಮಾನ್ ಧನ್ ಯೋಜನೆಯಲ್ಲಿಯೂ ಮಾಡಲಾಗುತ್ತದೆ. ಈ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ಏನಿದು ಪಿಎಂ ಕಿಸಾನ್ ಮಾನ್ ಧನ್ (PM Kisan Maan Dhan) ಯೋಜನೆ?
ಪಿಎಂ ಕಿಸಾನ್ ಮಾನ್ ಧನ್ ಯೋಜನೆಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 60 ವರ್ಷದ ನಂತರ ಪಿಂಚಣಿ ಸೌಲಭ್ಯವಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ, ರೈತನಿಗೆ ಮಾಸಿಕ ಪಿಂಚಣಿ 5000 ರೂ. ಸಿಗುತ್ತದೆ.

ಸಿಗಲಿದೆ ಗ್ಯಾರಂಟಿ ಪೆನ್ಷನ್
ಈ ಯೋಜನೆಯಲ್ಲಿ, ನೋಂದಾಯಿತ ರೈತನು ವಯಸ್ಸಿಗೆ ಅನುಗುಣವಾಗಿ ಮಾಸಿಕ ಹೂಡಿಕೆಯ ಮೇಲೆ 60 ವರ್ಷದ ನಂತರ ಕನಿಷ್ಟ ಮಾಸಿಕ ರೂ. 3000 ಅಥವಾ ರೂ. 36,000 ವಾರ್ಷಿಕ ಪಿಂಚಣಿ ಪಡೆಯಬಹುದು. ಇದಕ್ಕಾಗಿ, ಮಾಸಿಕ ಹೂಡಿಕೆಯನ್ನು ರೂ 55 ರಿಂದ ರೂ 200 ರವರೆಗೆ ಮಾಡಬಹುದು. ಪಿಎಂ ಕಿಸಾನ್ ಮಾನ್ ಧನ್ ನಲ್ಲಿ ಕುಟುಂಬ ಪಿಂಚಣಿ ಸೌಲಭ್ಯವಿದೆ. ಖಾತೆದಾರನ ಮರಣದ ನಂತರ, ಅವನ ಸಂಗಾತಿಯು ಶೇ.50 ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿಯಲ್ಲಿ (Family Pension) ಸಂಗಾತಿಯನ್ನು ಮಾತ್ರ ಸೇರಿಸಲಾಗಿದೆ.

ಇದನ್ನೂ ಓದಿ-Changes From 1st October: ಅಕ್ಟೋಬರ್ 1ರಿಂದ ಬದಲಾಗಲಿವೆ ಹಲವು ನಿಯಮ, ನಿಮ್ಮ ಮೇಲೆ ನೇರ ಪರಿಣಾಮ

PM Kisan ಲಾಭಾರ್ಥಿಗೆ ಈ ಲಾಭ ಹೇಗೆ ಸಿಗಲಿದೆ?
ಪಿಎಂ ಕಿಸಾನ್ ಯೋಜನೆಯಡಿ, ಸರ್ಕಾರವು ಪ್ರತಿ ವರ್ಷ ಅರ್ಹ ರೈತರಿಗೆ ರೂ. 2000 ರಂತೆ ಒಟ್ಟು ಮೂರು ಕಂತುಗಳಲ್ಲಿ 6000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಮಾನ್ ಧನ್  ಪಿಂಚಣಿ ಯೋಜನೆಯಲ್ಲಿ ಅದರ ಖಾತೆದಾರರು ಭಾಗವಹಿಸಿದರೆ, ಅವರ ನೋಂದಣಿಯನ್ನು ಸುಲಭವಾಗಿ ಮಾಡಲಾಗುತ್ತದೆ. ಅಲ್ಲದೆ, ರೈತರು ಈ ಆಯ್ಕೆಯನ್ನು ಆರಿಸಿದರೆ, ಪ್ರತಿ ತಿಂಗಳು ಪಿಂಚಣಿ ಯೋಜನೆಯಲ್ಲಿ ಕಡಿತಗೊಳಿಸಿದ ಕೊಡುಗೆಯನ್ನು ಈ 3 ಕಂತುಗಳಲ್ಲಿ ಪಡೆದ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ಅಂದರೆ, ಇದಕ್ಕಾಗಿ ಪಿಎಂ ಕಿಸಾನ್ ಖಾತೆದಾರರು ಪಾಕೆಟ್ ನಿಂದ ಹಣ ಹೂಡಿಕೆ ಮಾಡಬೇಕಾಗಿಲ್ಲ.

ಇದನ್ನೂ ಓದಿ-Big Alert! Google Chrome ಬಳಕೆದಾರರೆ ಎಚ್ಚರ! ತಕ್ಷಣ ಈ ಕೆಲಸ ಮಾಡಿ ಇಲ್ದಿದ್ರೆ ಪಶ್ಚಾತಾಪ ನಿಮ್ಮದು

ಎಷ್ಟು ಹಣ ಹೂಡಿಕೆ ಮಾಡಬೇಕು?
ಪಿಎಂ ಕಿಸಾನ್  ಮಾನ್ ಧನ್ ಪಿಂಚಣಿ ಯೋಜನೆಯಲ್ಲಿ, ನೀವು ಪ್ರತಿ ತಿಂಗಳು ಕನಿಷ್ಠ ರೂ 55 ಮತ್ತು ಗರಿಷ್ಠ ರೂ 200 ಹೂಡಿಕೆ ಮಾಡಬೇಕು. ಈ ಸಂದರ್ಭದಲ್ಲಿ, ಒಂದು ವರ್ಷದಲ್ಲಿ, ನೀವು ಗರಿಷ್ಠ 2400 ರೂಪಾಯಿ ಮತ್ತು ಕನಿಷ್ಠ 660 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 2400 ರೂ.ಗಳ ಗರಿಷ್ಠ ಕೊಡುಗೆಯನ್ನು 6 ಸಾವಿರದಿಂದ ಕಡಿತಗೊಳಿಸಿದರೂ ಸಹ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ 3600 ರೂ.ಗಳು ನಿಮ್ಮ ಖಾತೆಯಲ್ಲಿಯೇ ಉಳಿಯುತ್ತವೆ. ತದನಂತರ 60 ನೇ ವಯಸ್ಸಿನಲ್ಲಿ, ನೀವು ಪ್ರತಿ ತಿಂಗಳು ಕನಿಷ್ಠ 3 ಸಾವಿರ ಪಿಂಚಣಿಯ ಲಾಭ ಪಡೆಯಲು ಪ್ರಾರಂಭಿಸುತ್ತೀರಿ. ಇದರೊಂದಿಗೆ 2000 ರಂತೆ 3 ಕಂತುಗಳು ಸಹ ವಾರ್ಷಿಕವಾಗಿ ಬರುತ್ತಲೇ ಇರುತ್ತವೆ.

ಇದನ್ನೂ ಓದಿ-Infosys ಬಳಿಕ ಇದೀಗ Amazon ಅನ್ನು East India Company 2.0' ಎಂದ RSS ಪತ್ರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News