ಹೊಸ ರೂಪಾಂತರಿ ಕರೋನಾದಿಂದ ಹೆಚ್ಚಿದ ಆತಂಕ , ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ
ಕರೋನಾದ ಹೊಸ ರೂಪಾಂತರ ಪ್ರಪಂಚದಾದ್ಯಂತ ಆತಂಕ ಹೆಚ್ಚಿಸಿದೆ. ಸದ್ಯಕ್ಕೆ ವಿಮಾನ ಹಾರಾಟದಿಂದ ಕ್ರೀಡಾಕೂಟಗಳವರೆಗೆ ಎಲ್ಲವನ್ನೂ ರದ್ದುಗೊಳಿಸಲಾಗುತ್ತಿದೆ. ಈ ಹೊಸ ರೂಪಾಂತರವು ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳ ,ಮೇಲೆ ಭಾರೀ ಪರಿಣಾಮ ಬೀರಿದೆ.
ನವದೆಹಲಿ : ಕರೋನಾವೈರಸ್ (Coronavirus) ಸಾಂಕ್ರಾಮಿಕ ರೋಗ ಮತ್ತು ಲಸಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಕರೋನಾದ ಹೊಸ ರೂಪಾಂತರವಾದ (Coronavirus new variant) ಓಮಿಕ್ರಾನ್‌ನಿಂದಾಗಿ ಪ್ರಪಂಚದಾದ್ಯಂತದ ಆತಂಕ ಹೆಚ್ಚಾಗಿದೆ. ಆಫ್ರಿಕಾದ 8 ದೇಶಗಳ ವಿಮಾನ ಪ್ರಯಾಣವನ್ನು ಅಮೆರಿಕ ಈಗಾಗಲೇ ನಿಷೇಧಿಸಿದೆ. ಫ್ರಾನ್ಸ್ ಸೇರಿದಂತೆ ಯುರೋಪಿಯನ್ ಒಕ್ಕೂಟದ ಎಲ್ಲಾ ದೇಶಗಳು ಕೂಡಾ ದಕ್ಷಿಣ ಆಫ್ರಿಕಾದಿಂದ ಬರುವ ವಿಮಾನಗಳನ್ನು ನಿಷೇಧಿಸಲು ಒಪ್ಪಿಕೊಂಡಿವೆ. ಇನ್ನು ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ ಕೂಡ ಮುಂದೂಡಲ್ಪಟ್ಟಿದೆ. ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿತ್ತು.
ಷೇರು ಮಾರುಕಟ್ಟೆಗಳ ಮೇಲೆ ಹೊಸ ರೂಪಾಂತರದ ಪರಿಣಾಮ :
ಕರೋನಾದ ಹೊಸ ರೂಪಾಂತರ ಪ್ರಪಂಚದಾದ್ಯಂತ ಆತಂಕ ಹೆಚ್ಚಿಸಿದೆ. ಸದ್ಯಕ್ಕೆ ವಿಮಾನ ಹಾರಾಟದಿಂದ ಕ್ರೀಡಾಕೂಟಗಳವರೆಗೆ ಎಲ್ಲವನ್ನೂ ರದ್ದುಗೊಳಿಸಲಾಗುತ್ತಿದೆ. ಈ ಹೊಸ ರೂಪಾಂತರವು ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳ ,ಮೇಲೆ ಭಾರೀ ಪರಿಣಾಮ ಬೀರಿದೆ. ಪ್ರಸ್ತುತ ಈ ಹೊಸ ರೂಪಾಂತರಡ ಬಗ್ಗೆ WHO ಸಂಶೋಧನೆ ನಡೆಸುತ್ತಿದೆ. ಸಂಶೋಧನೆಯ ನಂತರ, ಈ ಹೊಸ ರೂಪಾಂತರವು Variant Of Interest ವಿಭಾಗದಲ್ಲಿ ಮಾತ್ರ ಬರುತ್ತದೆಯೇ ಅಥವಾ ಇದು ಆತಂಕಕಾರಿ ರೂಪಾಂತರವಾಗಿದೆಯೇ ಎನ್ನುವುದು ಸ್ಪಷ್ಟವಾಗಿತ್ತದೆ.
ಇದನ್ನೂ ಓದಿ : Agriculture Law Repeal Bill 2021 : ಮೂರೂ ಕೃಷಿ ಕಾನೂನು ರದ್ದುಗೊಳಿಸುವ ವಿಧೇಯಕ ಸೋಮವಾರ ಸಂಸತ್ತಿನಲ್ಲಿ ಮಂಡನೆ
ಈ ದೇಶಗಳಿಂದ ಬರುವ ವಿಮಾನಗಳಿಗೆ ನಿಷೇಧ :
ವರದಿ ಬರುವ ಮುನ್ನವೇ ಕರೋನಾದ (COVID-19) ಈ ಹೊಸ ರೂಪಾಂತರ ಜಗತ್ತಿನ ಆತಂಕವನ್ನು ಹೆಚ್ಚಿಸಿದೆ. ಬ್ರಿಟನ್, ಇಸ್ರೇಲ್, ಸಿಂಗಾಪುರ, ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಕೂಡ ಆಫ್ರಿಕಾದ ದಕ್ಷಿಣ ಭಾಗದ ದೇಶಗಳ ವಿಮಾನಗಳನ್ನು ನಿಷೇಧಿಸಿವೆ (Flight ban). ಕರೋನಾದ ಈ ಹೊಸ ರೂಪಾಂತರವು ಪ್ರಪಂಚದ ಮೇಲೆ ತನ್ನ ನಕಾರಾತ್ಮಕ ಪ್ರಭಾವ ಬೀರಲು ಪ್ರಾರಂಭಿಸಿದೆ. ಶುಕ್ರವಾರ, ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ದೊಡ್ಡ ಕುಸಿತ ದಾಖಲಾಗಿದೆ. ಇದು ಭಾರತದ ಮಾರುಕಟ್ಟೆಯ (Indian market) ಮೇಲೂ ಕೆಟ್ಟ ಪರಿಣಾಮ ಬೀರಿದೆ. ಶುಕ್ರವಾರ, ಸೆನ್ಸೆಕ್ಸ್ ನಲ್ಲಿ 1,400 ಅಂಕಗಳ ಕುಸಿತ್ ಕಂಡು ಬಂದಿದೆ. ಎನ್ ಎಸ್ ಇ ನಿಫ್ಟಿ ಸೂಚ್ಯಂಕ ಕೂಡ 200 ಅಂಕಗಳ ಕುಸಿತ ಕಂಡಿದೆ. ವಹಿವಾಟಿನ ಅಂತ್ಯಕ್ಕೆ, ನಿಫ್ಟಿ 510 ಅಂಕಗಳನ್ನು ಕಳೆದುಕೊಂಡರೆ, ಸೆನ್ಸೆಕ್ಸ್ 1,600 ಅಂಕಗಳಿಗಿಂತ ಹೆಚ್ಚು ಕುಸಿದಿದೆ.
ಕ್ರೀಡೆಯ ಮೇಲೂ ಪರಿಣಾಮ :
ಈ ರೂಪಾಂತರದ ಭಯ ಷೇರು ಮಾರುಕಟ್ಟೆಯನ್ನು ಮಾತ್ರ ಕಾಡುತ್ತಿಲ್ಲ. ಬದಲಾಗಿ, ಹೊಸ ರೂಪಾಂತರವು ಕ್ರೀಡೆಯ ಮೇಲೂ ತನ್ನ ಪ್ರಭಾವವನ್ನು ತೋರಿಸಲಾರಂಭಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಸರಣಿಯನ್ನು ನೆದರ್ಲೆಂಡ್ಸ್ ರದ್ದುಗೊಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿರುವ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ (junior women's hockey world cup 2021) ಕೂಡ ಸದ್ಯಕ್ಕೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ : ಗ್ರಾಹಕರಿಗೆ ಸಿಹಿಸುದ್ದಿ: ತಾಜಾ ಬೆಳೆ ಆಗಮನದೊಂದಿಗೆ ಡಿಸೆಂಬರ್‌ನಿಂದ ಟೊಮೇಟೊ ಬೆಲೆ ಇಳಿಕೆ ಸಾಧ್ಯತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.