ನವದೆಹಲಿ : ಲೋಕಸಭೆಯ ಲಿಸ್ಟ್ ಆಫ್ ಬ್ಯುಸಿನೆಸ್ಸ್ ಪ್ರಕಾರ (List Of Business), ಸೋಮವಾರ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಕೃಷಿ ಕಾನೂನುಗಳ ರದ್ದತಿ ವಿಧೇಯಕವನ್ನು (The Agricultural Laws Repeal Bill, 2021) ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಈ ಮಸೂದೆಯನ್ನು ಸೋಮವಾರವೇ ಸದನದಲ್ಲಿ ಚರ್ಚಿಸಿ ಅಂಗೀಕರಿಸುವುದು ಸರ್ಕಾರದ ಉದ್ದೇಶವಾಗಿದೆ.
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ :
ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ಈ ವಿಧೇಯಕವನ್ನು ರಾಜ್ಯಸಭೆಯಲ್ಲಿ (Rajya Sabha) ಮಂಡಿಸಿ ಅನುಮೋದನೆ ಪಡೆಯಲಾಗುವುದು. ಉಭಯ ಸದನಗಳ ಒಪ್ಪಿಗೆ ದೊರೆತ ಬಳಿಕ ಈ ವಿಧೇಯಕವನ್ನು ರಾಷ್ಟ್ರಪತಿಗಳಿಗೆ (President) ಕಳುಹಿಸಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಲಾಗುವುದು. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಮೂರು ಕೃಷಿ ಕಾಯಿದೆಗಳನ್ನು (Farm Laws) ರದ್ದುಪಡಿಸುವ ಹಾದಿ ಸುಗಮವಾಗಲಿದೆ.
ಇದನ್ನೂ ಓದಿ : ಗ್ರಾಹಕರಿಗೆ ಸಿಹಿಸುದ್ದಿ: ತಾಜಾ ಬೆಳೆ ಆಗಮನದೊಂದಿಗೆ ಡಿಸೆಂಬರ್‌ನಿಂದ ಟೊಮೇಟೊ ಬೆಲೆ ಇಳಿಕೆ ಸಾಧ್ಯತೆ
ಪ್ರಧಾನಿ ಮೋದಿ ಭರವಸೆ :
ಈ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ (Farmers Protest) ತೀವ್ರಗೊಳಿಸಿದ್ದರು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನವೆಂಬರ್ 19 ರಂದು ಕೃಷಿಗೆ ಸಂಬಂಧಿಸಿದ ಈ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಕಾನೂನನ್ನು ಹಿಂತೆಗೆದುಕೊಳ್ಳುವ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು.
ಕೃಷಿ ಕಾನೂನುಗಳ ರದ್ದತಿ ವಿಧೇಯಕ 2021 ಕ್ಕೆ ಸಂಪುಟದ ಒಪ್ಪಿಗೆ :
ಕೃಷಿ ಕಾನೂನುಗಳ ರದ್ದತಿ ಮಸೂದೆ, 2021, ಈ ಮೂರು ಕೃಷಿ ಕಾನೂನುಗಳ ಹಿಂತೆಗೆದುಕೊಳ್ಳುವಿಕೆಗೆ ಸಂಬಂಧಿಸಿದ ಮಸೂದೆಯನ್ನು ಬುಧವಾರ ಕೇಂದ್ರ ಸಚಿವ ಸಂಪುಟ (Cabinet) ಸಭೆಯಲ್ಲಿ ಅಂಗೀಕರಿಸಲಾಯಿತು. ಈಗ ಸರ್ಕಾರವು ಚಳಿಗಾಲದ ಅಧಿವೇಶನದ ಮೊದಲ ದಿನವಾದ ನವೆಂಬರ್ 29 ರಂದು ಲೋಕಸಭೆಯಲ್ಲಿ ಕೃಷಿ ಕಾನೂನುಗಳ ಮಸೂದೆ ರದ್ದತಿಯನ್ನು ಮಂಡಿಸಲಾಗುವುದು.
ಇದನ್ನೂ ಓದಿ : Intercaste Marriage: ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ ಈ ರಾಜ್ಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.