Alert:ಕೊರೊನಾ ವೈರಸ್ ನ ಅತ್ಯಂತ ಅಪಾಯಕಾರಿ ರೂಪಾಂತರಿ ಪತ್ತೆ, ತುರ್ತು ಸಭೆ ಕರೆದ WHO, ಭಾರತದಲ್ಲೂ ಅಲರ್ಟ್

New Covid Variant B.1.1529: ಕೊರೊನಾ ವೈರಸ್‌ನ ಹೊಸ ರೂಪಾಂತರಿಯ ಗಾಂಭೀರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ರಾಜ್ಯಗಳಿಗೆ ಸೂಚನೆಗಳನ್ನು ಹೊರಡಿಸಿದೆ. 

Written by - Nitin Tabib | Last Updated : Nov 26, 2021, 02:39 PM IST
  • ಕೊರೊನಾ ವೈರಸ್ ನ ಹೊಸ ರೂಪಾಂತರಿಯ ಹಿನ್ನೆಲೆ.
  • ರಾಜ್ಯ ಸರ್ಕಾರಗಳಿಗೆ ಸೂಚನೆ ಹೊರಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ.
  • ಹೊಸ ಕೋವಿಡ್-19 ರೂಪಾಂತರ B. 1.1529 ಕುರಿತು ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು (NCDC) ಸರ್ಕಾರಕ್ಕೆ ಮಾಹಿತಿ ನೀಡಿದೆ.
Alert:ಕೊರೊನಾ ವೈರಸ್ ನ ಅತ್ಯಂತ ಅಪಾಯಕಾರಿ ರೂಪಾಂತರಿ ಪತ್ತೆ, ತುರ್ತು ಸಭೆ ಕರೆದ WHO, ಭಾರತದಲ್ಲೂ ಅಲರ್ಟ್ title=
New Covid Variant B.1.1529 (Representational Image)

New Covid Variant B.1.1529: ವಿಶ್ವದ ಕೆಲವು ದೇಶಗಳಲ್ಲಿ ಕೊರೊನಾವೈರಸ್‌ನ ಹೊಸ ರೂಪಾಂತರವು ಹೊರಹೊಮ್ಮಿದೆ, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಕೊರೊನಾವೈರಸ್‌ನ  (Coronavirus)  ಹೊಸ ರೂಪಾಂತರ B.1.1529 ವಿದೇಶದಲ್ಲಿ ಕಂಡುಬಂದ ನಂತರ ಸಚಿವಾಲಯವುಈ  ಎಚ್ಚರಿಕೆಯನ್ನು ನೀಡಿದೆ. ಹೊಸ ರೂಪಾನ್ತರಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದೆ. ಇದಲ್ಲದೆ, ಬೋಸ್ಟ್ವಾನಾ ಮತ್ತು ಹಾಂಗ್ ಕಾಂಗ್‌ನಲ್ಲಿಯೂ ಪ್ರಕರಣಗಳು ವರದಿಯಾಗಿವೆ. ವಿದೇಶದಿಂದ ಬರುವ ಜನರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಅವರಲ್ಲಿ ಯಾರಾದರೂ ಪ್ರಯಾಣಿಕರು ಪಾಸಿಟಿವ್ ಎಂದು ಕಂಡುಬಂದರೆ, ಅವರ ಮಾದರಿಯನ್ನು INSACOG ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಸಚಿವಾಲಯ ಹೇಳಿದೆ.

ಅತಿ ಹೆಚ್ಚು ರೂಪಾಂತರಿಗೊಂಡ ವೈರಸ್ 
ಕರೋನಾ ವೈರಸ್‌ನ ಹೊಸ ರೂಪಾಂತರಗಳ ಬಗ್ಗೆ ವಿಶ್ವಾದ್ಯಂತ ಕಳವಳ ವ್ಯಕ್ತವಾಗುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚು ರೂಪಾಂತರವನ್ನು ಹೊಂದಿರುವ ರೂಪಾಂತರ ಎಂದು ವಿವರಿಸಲಾಗಿದೆ(New Covid Variant B.1.1529). ಅದರಲ್ಲಿ ಹಲವಾರು ರೂಪಾಂತರಗಳಿವೆ, ಒಬ್ಬ ವಿಜ್ಞಾನಿ ಇದನ್ನು ಭಯಾನಕ ಎಂದು ಕರೆದರು ಮತ್ತು ಇನ್ನೊಬ್ಬ ವಿಜ್ಞಾನಿ ಅದನ್ನು ಇದುವರೆಗೆ ಕೆಟ್ಟ ರೂಪಾಂತರ ಎಂದು ಕರೆದಿದ್ದಾರೆ. ಇದರ ನಂತರ, ಈ ಹೊಸ ರೂಪಾಂತರವು ಎಷ್ಟು ಸಾಂಕ್ರಾಮಿಕವಾಗಿದೆ, ಲಸಿಕೆ ಹೊರತಾಗಿಯೂ ಅದು ಎಷ್ಟು ವೇಗವಾಗಿ ಹರಡುತ್ತದೆ ಮತ್ತು ಅದರ ಬಗ್ಗೆ ಏನು ಮಾಡಬೇಕು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಲಾಗಿದೆ.

ಇದುವರೆಗೆ ದೊರೆತ ಮಾಹಿತಿ
ಹೊಸ ರೂಪಾಂತರಿಯನ್ನು B.1.1529 ಎಂದು ಕರೆಯಲಾಗುತ್ತಿದೆ ಮತ್ತು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ  (World Health Organisation)  ಇದಕ್ಕೆ ಆಲ್ಫಾ ರೂಪಾಂತರ ಮತ್ತು ಡೆಲ್ಟಾ (Delta Varaint) ರೂಪಾಂತರದಂತಹ ಯಾವುದಾದರೊಂದು ಹೆಸರನ್ನು ನೀಡಬಹುದು ಎನ್ನಲಾಗುತ್ತಿದೆ. ಈ ಕುರಿತು WHO ತುರ್ತು ಸಭೆಯನ್ನು ಕರೆದಿದೆ. ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ಪ್ರತಿಕ್ರಿಯೆ ಮತ್ತು ನಾವೀನ್ಯತೆ ಕೇಂದ್ರದ ನಿರ್ದೇಶಕ ಪ್ರೊಫೆಸರ್ ಟುಲಿಯೊ ಡಿ ಒಲಿವೇರಾ ಅವರ ಪ್ರಕಾರ, ಹೊಸ ವೈರಸ್ ನಲ್ಲಿ ಅನೇಕ ರೂಪಾಂತರಗಳಿವೆ. ಅಷ್ಟೇ ಅಲ್ಲ ಈ ರೂಪಾಂತರಿ ವಿಜ್ನಾನಿಗಲಿಗೆಯೇ ಅಚ್ಚರಿಯನ್ನುಂಟು ಮಾಡಿದೆ. ಈ ವೈರಸ್ ನಲ್ಲಿ ಒಟ್ಟಾರೆಯಾಗಿ 50 ರೂಪಾಂತರಗಳು ಸಂಭವಿಸಿವೆ ಮತ್ತು ಹೆಚ್ಚು ಸ್ಪೈಕ್ ಪ್ರೋಟೀನ್‌ಗಳಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳು ಸಂಭವಿಸಿವೆ ಎಂದು ಹೇಳಲಾಗಿದೆ. 

ಚೀನಾದಲ್ಲಿ ದೊರೆತ ವೈರಸ್ ನ ಮೂಲ ರೂಪಾಂತರಿಗಿಂತ ಇದು ವಿಭಿನ್ನವಾಗಿದೆ
ವೈರಸ್‌ನ ಹೊಸ ರೂಪಾಂತರವು ಚೀನಾದ ವುಹಾನ್‌ನಲ್ಲಿ ಕಂಡುಬರುವ ಮೂಲ ವೈರಸ್‌ಗಿಂತ ಸಾಕಷ್ಟು ಭಿನ್ನವಾಗಿದೆ ಎಂಬುದು ಆತಂಕಕಾರಿಯಾಗಿದೆ. ಇದುವರೆಗಿನ ಮೂಲ ವೈರಸ್ ಅನ್ನು ಗಮನದಲ್ಲಿಟ್ಟುಕೊಂಡು ಲಸಿಕೆಯನ್ನು ತಯಾರಿಸಲಾಗಿದೆ. ಆದರೆ, ಈ ರೂಪಾಂತರಿಗೆ  ಲಸಿಕೆ ಎಷ್ಟು ಪರಿಣಾಮಕಾರಿ ಎಂದು ಹೇಳಲು ತಜ್ಞರಿಗೆ ಸಹ ಕಷ್ಟವಾಗುತ್ತಿದೆ. 2021 ರ ಆರಂಭದಲ್ಲಿ, ಬೀಟಾ ರೂಪಾಂತರಿ ಭಾರಿ ಆತಂಕ ಸೃಷ್ಟಿಸಿಟ್ಟು. ಏಕೆಂದರೆ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸುವಲ್ಲಿ ಪ್ರಾವಿಂತ್ಯತೆ ಹೊಂದಿತ್ತು. ಆದರೆ, ನಂತರ ಡೆಲ್ಟಾ ರೂಪಾಂತರವು ವಿಶ್ವಾದ್ಯಂತ ಹರಡಿತು ಮತ್ತು ಬಹಳಷ್ಟು ಹಾನಿಯನ್ನು ಉಂಟುಮಾಡಿತು.

ಇದನ್ನೂ ಓದಿ-ಕೊರೊನಾದಿಂದ ರೈಲುಗಳಲ್ಲಿ ಸ್ಥಗಿತಗೊಂಡಿದ್ದ ಆಹಾರ ಸೇವೆ ಆರಂಭಿಸಲು ರೈಲ್ವೆ ಇಲಾಖೆ ಸೂಚನೆ

ಹೊಸ ರೂಪಾಂತರಿ ಪ್ರಕರಣಗಳು
ತರಾತುರಿಯಲ್ಲಿ ಹೊಸ ರೂಪಾಂತರಿಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟಕರವಾಗಿದೆ. ಆದರೆ, ಆರಂಭಿಕ ವರದಿಗಳು ಈ ಬಗ್ಗೆ ಕಳವಳ ಮೂಡಿಸಿವೆ. ದಕ್ಷಿಣ ಆಫ್ರಿಕಾದ ಗೌಟೆಂಗ್‌ನಲ್ಲಿ 7, ಬೋಟ್ಸ್ವಾನಾದಲ್ಲಿ ನಾಲ್ಕು ಮತ್ತು ಹಾಂಗ್ ಕಾಂಗ್‌ನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಹಾಂಗ್ ಕಾಂಗ್ ಪ್ರಕರಣವು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದೆ. ಆದರೆ ಈ ರೂಪಾಂತರವು ಹೆಚ್ಚು ವೇಗವಾಗಿ ಹರಡುವ ಅಪಾಯಗಳು ಹೆಚ್ಚಾಗಿವೆ. ಈ ರೂಪಾಂತರಿಯ ಪ್ರಮಾಣಿತ ಪರೀಕ್ಷೆಗಳು ವಿಚಿತ್ರ ಫಲಿತಾಂಶಗಳನ್ನು ತೋರಿಸಿವೆ (ಇದಕ್ಕೆ ಎಸ್-ಜೀನ್ ಡ್ರಾಪ್‌ಔಟ್ ಎಂದು ಕರೆಯಲಾಗುತ್ತದೆ) ಮತ್ತು ಸಂಪೂರ್ಣ ಆನುವಂಶಿಕ ವಿಶ್ಲೇಷಣೆಯಿಲ್ಲದೆ ರೂಪಾಂತರವನ್ನು ಟ್ರ್ಯಾಕ್ ಮಾಡಲು ಬಳಸಬಹುದು.

ಇದನ್ನೂ ಓದಿ-WHO Alert! Europನಲ್ಲಿ Covid-19 ರೌದ್ರ ನರ್ತನ, ಕೆಲವೇ ತಿಂಗಳಲ್ಲಿ ಸಾವಿನ ಸಂಖ್ಯೆ 7 ಲಕ್ಷ ಎಂದು ಆತಂಕ ವ್ಯಕ್ತಪಡಿಸಿದ WHO

ಭಾರತ ಮತ್ತು ಯುಕೆ ಮಾರ್ಗಸೂಚಿಗಳನ್ನು ಹೊರಡಿಸಿವೆ
ಕೊರೊನಾ ವೈರಸ್‌ನ ಹೊಸ ರೂಪಾಂತರಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸ್‌ವಾನಾದಿಂದ ಬರುವ ಅಥವಾ ಹೋಗುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಭಾರತದ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಹೊಸ ಕೋವಿಡ್-19 ರೂಪಾಂತರ B. 1.1529 ರ ಅನೇಕ ಪ್ರಕರಣಗಳ (ಹೊಸ ಕೋವಿಡ್ ರೂಪಾಂತರಿಯ B.1.1529) ಕುರಿತು ಭಾರತದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು (NCDC) ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದಿದ್ದಾರೆ. ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು 'ಅಪಾಯದಲ್ಲಿರುವ' ವರ್ಗದ ಭಾಗವಾಗಿದ್ದಾರೆ ಮತ್ತು ಕಠಿಣ ತಪಾಸಣೆ ಮತ್ತು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದೇ ವೇಳೆ, ಹೊಸ ರೂಪಾಂತರಿಯ ಬಗ್ಗೆ ಎಚ್ಚರಿಕೆಗಳ ಮಧ್ಯೆ ಬ್ರಿಟನ್ ಆರು ಆಫ್ರಿಕನ್ ದೇಶಗಳಿಂದ ಬರುವ ವಿಮಾನಗಳನ್ನು ನಿಷೇಧಿಸಿದೆ.

ಇದನ್ನೂ ಓದಿ-ಕೊರೊನಾ ನಿರ್ವಹಣೆಗಾಗಿ ತುರ್ತು 23,123 ಕೋಟಿ ರೂ.ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News