PK Sinha: ಪ್ರಧಾನಿ ಮೋದಿ `ಪ್ರಧಾನ ಸಲಹೆಗಾರ ಪಿಕೆ ಸಿನ್ಹಾ` ರಾಜೀನಾಮೆ!
`ವೈಯಕ್ತಿಕ ಕಾರಣಗಳನ್ನು` ನೀಡಿ ರಾಜೀನಾಮೆ ನೀಡಿದ ಪಿ ಕೆ ಸಿನ್ಹಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಸಲಹೆಗಾರ ಪಿ ಕೆ ಸಿನ್ಹಾ ಅವರು 'ವೈಯಕ್ತಿಕ ಕಾರಣಗಳನ್ನು' ನೀಡಿ ತಮ್ಮ ರಾಜೀನಾಮೆ ನೀಡಿದ್ದಾರೆ. ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದ ಸಿನ್ಹಾ ಅವರು ಪ್ರಧಾನಿ ಕಾರ್ಯಾಲಯದಲ್ಲಿ ಕಳೆದ 18 ತಿಂಗಳುಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಸಿನ್ಹಾ ಅವರ ರಾಜೀನಾಮೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲವಾದರೂ ಪ್ರಧಾನಿಯ ಅತ್ಯಂತ ನಂಬಿಕಸ್ಥ ಅಧಿಕಾರಿಯೊಬ್ಬರ ನಿರ್ಗಮನ ಹಲವರ ಹುಬ್ಬೇರುವಂತೆ ಮಾಡಿದೆ. ಸಿನ್ಹಾ ಅವರನ್ನು ಪ್ರಧಾನಿ ಕಾರ್ಯಾಲಯದಲ್ಲಿ ಸೇವೆಗೆ ಸೇರ್ಪಡೆಗೊಳಿಸುವ ಉದ್ದೇಶದಿಂದಲೇ 2019ರಲ್ಲಿ ಪ್ರಧಾನಿಯ ಮುಖ್ಯ ಸಲಹೆಗಾರ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ(PM Narendra Modi)ಯ ಅವಧಿಯ ತನಕ ಅವರು ಕೂಡ ಮುಖ್ಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆಂದು ಅವರ ನೇಮಕಾತಿ ಆದೇಶದಲ್ಲಿ ತಿಳಿಸಲಾಗಿತ್ತು.
SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಖಾತೆದಾರರಿಗೆ ಸಿಗುತ್ತೆ '₹ 2 ಲಕ್ಷ ವಿಮೆ ಸೌಲಭ್ಯ'!
ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಅವರು ಮೂರು ಸೇವಾ ವಿಸ್ತರಣೆ ಪಡೆದು ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶ ಕೇಡರ್‍ನವರಾಗಿರುವ ಸಿನ್ಹಾ(PK Sinha) ಅವರು 1977 ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದಾರೆ.
'ನೈಟ್ ಟೈಮ್ ATMನಿಂದ ಹಣ ಡ್ರಾ' ಮಾಡುವವರೇ ನಿಮಗೆ ತಿಳಿದಿರಲಿ ಈ ನಿಯಮ!
ಪ್ರಧಾನಿ ಮೋದಿಯ ಮೊದಲ ಅವಧಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ(Cabinet Security)ಯಾಗಿದ್ದ ಸಿನ್ಹಾ ಅವರು 2019ರಲ್ಲಿ ನಿವೃತ್ತರಾಗಿದ್ದರೂ ಮೋದಿ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ವಿಶೇಷ ಕರ್ತವ್ಯದ ಅಧಿಕಾರಿ ಎಂದು ಪ್ರಧಾನಿ ಕಾರ್ಯಾಲಯದಲ್ಲಿ ಅವರನ್ನು ನೇಮಕಗೊಳಿಸಲಾಗಿತ್ತು. ಮುಂದೆ ಇನ್ನೊಬ್ಬ ಹಿರಿಯ ಅಧಿಕಾರಿ ನೃಪೇಂದ್ರ ಮಿಶ್ರಾ ಅವರ ನಿರ್ಗಮನದ ನಂತರ ಸಿನ್ಹಾ ಅವರನ್ನು ಮೋದಿಯ ಮುಖ್ಯ ಸಲಹೆಗಾರರನ್ನಾಗಿ ನೇಮಕಗೊಳಿಸಲಾಗಿತ್ತು.
Coronavirus: ದೇಶದಲ್ಲಿ ಒಂದೇ ದಿನ 24,000ಕ್ಕೂ ಹೆಚ್ಚು ಪ್ರಕರಣ ದಾಖಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.