ನವದೆಹಲಿ: ದೇಶದಲ್ಲಿ ಇಂದು (ಮಂಗಳವಾರ) 24,492 ಕೋವಿಡ್ -19 (Covid -19) ಪ್ರಕರಣಗಳು ಮತ್ತು 131 ಸಾವುಗಳು ದಾಖಲಾಗಿವೆ. ಪ್ರಕರಣಗಳ ಸಂಖ್ಯೆ ಹಿಂದಿನ ದಿನಕ್ಕಿಂತ 1,800 ಕಡಿಮೆ, ಆದರೆ ಸಾವಿನ ಸಂಖ್ಯೆ 13 ಹೆಚ್ಚಾಗಿದೆ.
ಕರೋನಾ ಸೋಂಕು ಮತ್ತೆ ಹೆಚ್ಚುತ್ತಿದೆ:
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಸೋಮವಾರ ದೇಶದಲ್ಲಿ 26,291 ಕೋವಿಡ್ -19 (Covid -19) ಪ್ರಕರಣಗಳು ವರದಿಯಾಗಿವೆ, ಇದು ಕಳೆದ 85 ದಿನಗಳಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣ. ಇದರೊಂದಿಗೆ ಈಗ ದೇಶದ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 1,14,09,831 ಕ್ಕೆ ಮತ್ತು ಸಾವಿನ ಸಂಖ್ಯೆ 1,58,856 ಕ್ಕೆ ಏರಿದೆ. ಅದೇ ಸಮಯದಲ್ಲಿ, ಸೋಂಕಿನ ಮಟ್ಟವು 1.55% ರಿಂದ 1.96% ಕ್ಕೆ ಏರಿದೆ.
ಇದನ್ನೂ ಓದಿ - ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ RT-PCR test ಕಡ್ಡಾಯ
ಇಲ್ಲಿಯವರೆಗೆ ನಡೆಸಲಾದ ಕರೋನಾ ಟೆಸ್ಟ್:
ಇದಲ್ಲದೆ, ಒಂದೇ ದಿನದಲ್ಲಿ ಕರೋನದ ಸಕ್ರಿಯ ಪ್ರಕರಣಗಳ ಸಂಖ್ಯೆ 4,000 ರಿಂದ 2,23,432 ಕ್ಕೆ ಏರಿದೆ. ಇದೇ ವೇಳೆ 20,191 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಒಟ್ಟು ಜನರ ಸಂಖ್ಯೆ 1,10,27,543 ಕ್ಕೆ ಏರಿದೆ. ಇನ್ನು ದೇಶದಲ್ಲಿ ಈವರೆಗೆ ಒಟ್ಟು 22,82,80,763 ಜನರಿಗೆ ಕರೋನಾ ಟೆಸ್ಟ್ ಮಾಡಲಾಗಿದೆ.
ಇದುವರೆಗೆ ಮಹಾರಾಷ್ಟ್ರ (Maharashtra) ಮತ್ತು ಪಂಜಾಬ್ನಲ್ಲಿ ಕಂಡು ಬರುತ್ತಿದ್ದ ವೇಗದಲ್ಲಿ ಇದೀಗ ಕೋವಿಡ್ -19 ಪ್ರಕರಣಗಳ ಸಂಖ್ಯೆಯು ದೆಹಲಿ, ಹರಿಯಾಣ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಕಂಡುಬರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿ ಇರುವಾಗಲೇ ಎಲ್ಲೆಡೆ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಇದನ್ನೂ ಓದಿ - Corona Vaccination ನಂತರ ರಕ್ತ ಹೆಪ್ಪುಗಟ್ಟುವಿಕೆ ದೂರು, ಈ ಲಸಿಕೆ ನಿಷೇಧ
ಕರೋನಾ ಲಸಿಕೆ:
ಜನವರಿ 16 ರಿಂದ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ, ಈವರೆಗೆ 3,29,47,432 ಕರೋನಾ ಲಸಿಕೆ ಪ್ರಮಾಣವನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.