ನವದೆಹಲಿ : ಈ ಬಾರಿಯೂ ಕೂಡಾ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳಲಿದ್ದಾರೆ. ರಜೌರಿಯ ನೌಶೇರಾದಲ್ಲಿರುವ ಎಲ್‌ಒಸಿಯ ಫಾರ್ವರ್ಡ್ ಪೋಸ್ಟ್‌ಗಳಲ್ಲಿ ಪ್ರಧಾನಿ ಮೋದಿ ಸೈನಿಕರ ನಡುವೆ ದೀಪಾವಳಿ (Diwali Celebration) ಆಚರಿಸಲಿದ್ದಾರೆ. 2019ರಲ್ಲಿಯೂ ಪ್ರಧಾನಿಯವರು ರಾಜೌರಿಯ ಮುಂಭಾಗದ ಪ್ರದೇಶದಲ್ಲಿ ದೀಪಾವಳಿಯನ್ನು ಆಚರಿಸುವ ಮೂಲಕ ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದರು. ರಜೌರಿ-ಪೂಂಚ್ ಗಡಿ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಮೂರು ವಾರಗಳ ಸುದೀರ್ಘ ಕಾರ್ಯಾಚರಣೆಯ ಮಧ್ಯೆ, ಪ್ರಧಾನಿ ಭೇಟಿಯ ಕಾರಣ ಭದ್ರತಾ ಏಜೆನ್ಸಿಗಳನ್ನು ಹೈ ಅಲರ್ಟ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಸೇನಾ ಸನ್ನದ್ಧತೆಯ ಬಗ್ಗೆಯೂ ಪ್ರಧಾನಿ  ಪರಿಶೀಲನೆ : 
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಳಗ್ಗೆ 11 ಗಂಟೆಗೆ ನೌಶೇರಾ ತಲುಪಲಿದ್ದಾರೆ. ಮೊದಲು ಜಮ್ಮು ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ನೌಶೇರಾಗೆ ತೆರಳಲಿದ್ದಾರೆ. ಯೋಧರೊಂದಿಗೆ ದೀಪಾವಳಿ (Diwali with jawans) ಆಚರಿಸಿದ ಬಳಿಕ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಸೇನಾ ಸಿದ್ಧತೆಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. 


ಇದನ್ನೂ ಓದಿ : PMKVY: ಸರ್ಕಾರದಿಂದ ಉಚಿತವಾಗಿ ಸಿಗಲಿದೆ ಎಣ್ಣೆ, ಉಪ್ಪು, ಸಕ್ಕರೆ 


ಈಗಾಗಲೇ ಸೈನಿಕರೊಂದಿಗೆ ದೀಪಾವಳಿ ಆಚರಣೆ :
ಪ್ರಧಾನಿಯಾದ ನಂತರ, ಪ್ರಧಾನಿ ಮೋದಿ (PM Modi) ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ (Ladakh) ಗಡಿಯಲ್ಲಿ ನಾಲ್ಕನೇ ಬಾರಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಇದಕ್ಕೂ ಮುನ್ನ ಅವರು 2014ರಲ್ಲಿ ಸಿಯಾಚಿನ್ ಗೆ ತೆರಳಿದ್ದರು. ಇಲ್ಲಿ ದೀಪಾವಳಿ ಆಚರಿಸಿ ಶ್ರೀನಗರಕ್ಕೂ ಹೋಗಿದ್ದರು. 2017 ರಲ್ಲಿ ಅವರು ಕಾಶ್ಮೀರದ ಬಂಡಿಪೋರಾದಲ್ಲಿ ಸೇನೆ ಮತ್ತು ಬಿಎಸ್‌ಎಫ್ (BSF) ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. 2019 ರಲ್ಲಿ, ಅವರು ರಾಜೋರಿಯ ಪದಾತಿ ದಳಕ್ಕೆ ತೆರಳಿ  ಸೈನಿಕರೊಂದಿಗೆ ದೀಪಾವಳಿಯನ್ನು ಸಂಭ್ರಮಿಸಿದ್ದರು.  ಅದೇ ರೀತಿ, 2020 ರಲ್ಲಿ, ಪ್ರಧಾನಿ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಲಾಂಗಾವಾಲಾ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. 


ಪ್ರವಾಸದ ಬಗ್ಗೆ ಭದ್ರತಾ ಪಡೆಗಳು ಎಚ್ಚರಿಕೆ :
ರಾಜೋರಿ ಮತ್ತು ಪೂಂಚ್ ಜಿಲ್ಲೆಗಳ ಗಡಿ ಭಾಗದಲ್ಲಿರುವ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರ (Terrorist) ವಿರುದ್ಧ ಮೂರು ವಾರಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಏತನ್ಮಧ್ಯೆ, ಪ್ರಧಾನಿ ಭೇಟಿಯ ಬಗ್ಗೆ ಭದ್ರತಾ ಪಡೆಗಳು ಅಲರ್ಟ್ (Alert) ಆಗಿವೆ. ಅಕ್ಟೋಬರ್ 11 ರಂದು, ಚಾಮ್ರೆಡ್ ಅರಣ್ಯದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೆಸಿಒ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು. ಇದರ ನಂತರ, ಮೆಂಧರ್‌ನ ಭಟದುಡಿಯನ್‌ನಲ್ಲಿ ಎರಡನೇ ದಾಳಿ ನಡೆಯಿತು, ಇದರಲ್ಲಿ JCO ಜೊತೆಗೆ ನಾಲ್ವರು ಸೈನಿಕರು ಹುತಾತ್ಮರಾದರು. ಇದುವರೆಗೆ ದಾಳಿ ನಡೆಸಿದ ಯಾವುದೇ ಉಗ್ರರು ಪತ್ತೆಯಾಗಿಲ್ಲ. 


ಇದನ್ನೂ ಓದಿ :  Covaxin : ದೀಪಾವಳಿಯಂದು ಗುಡ್ ನ್ಯೂಸ್ : ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಆದೇಶ ನೀಡಿದ WHO 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ