PMKVY: ಸರ್ಕಾರದಿಂದ ಉಚಿತವಾಗಿ ಸಿಗಲಿದೆ ಎಣ್ಣೆ, ಉಪ್ಪು, ಸಕ್ಕರೆ

Pradhan Mantri Garib Kalyan Anna Yojana : ಅಯೋಧ್ಯೆಯಲ್ಲಿ ನಡೆದ ಭವ್ಯ ದೀಪೋತ್ಸವ 2021 ಕಾರ್ಯಕ್ರಮದ ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (Pradhan Mantri Garib Kalyan Anna Yojana) ಹೋಳಿಯವರೆಗೆ ವಿಸ್ತರಿಸುವುದಾಗಿ ಘೋಷಿಸಿದರು.

Written by - Yashaswini V | Last Updated : Nov 4, 2021, 06:58 AM IST
  • ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಮಹತ್ವದ ಘೋಷಣೆ
  • ಉಚಿತ ಪಡಿತರ ಯೋಜನೆ ಹೋಳಿವರೆಗೆ ವಿಸ್ತರಣೆ
  • ಈ ಯೋಜನೆಯಡಿ, ಬೇಳೆಕಾಳುಗಳು, ಎಣ್ಣೆ, ಉಪ್ಪು ಮತ್ತು ಸಕ್ಕರೆಯನ್ನು ಸಹ ಪ್ರತಿ ತಿಂಗಳು ನೀಡಲಾಗುವುದು
PMKVY: ಸರ್ಕಾರದಿಂದ ಉಚಿತವಾಗಿ ಸಿಗಲಿದೆ ಎಣ್ಣೆ, ಉಪ್ಪು, ಸಕ್ಕರೆ title=
Pradhan Mantri Garib Kalyan Anna Yojana extended till Holi

Pradhan Mantri Garib Kalyan Anna Yojana : ಶ್ರೀರಾಮನ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಅದ್ಧೂರಿ ದೀಪೋತ್ಸವ  (Ayodhya Deepotsav 2021) ಕಾರ್ಯಕ್ರಮದ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ.

ಇಂದು ಪವಿತ್ರ ದೀಪೋತ್ಸವದ ಸಂದರ್ಭವಾಗಿದೆ ಮತ್ತು ರಾಮರಾಜ್ಯದ ಕನಸನ್ನು ನನಸಾಗಿಸಲು, ನಾವು (PM-GKAY) ಉಚಿತ ಪಡಿತರ ಯೋಜನೆಯನ್ನು ಹೋಳಿಯವರೆಗೆ ವಿಸ್ತರಿಸುತ್ತಿದ್ದೇವೆ. ಇದರ ಅಡಿಯಲ್ಲಿ, ನಾವು ಅಕ್ಕಿ ಮತ್ತು ಗೋಧಿಯ ಜೊತೆಗೆ ಬೇಳೆಕಾಳುಗಳು, ಉಪ್ಪು ಮತ್ತು ಖಾದ್ಯ ತೈಲವನ್ನು ಸಹ ಉಚಿತವಾಗಿ ನೀಡುತ್ತೇವೆ. ಪ್ರಧಾನಮಂತ್ರಿಯವರು ಹೋಳಿವರೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Pradhan Mantri Garib Kalyan Anna Yojana) ಅನ್ನು ಮುಂದುವರೆಸಲಿದ್ದಾರೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ಈ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸುವುದಾಗಿ ಈ ಹಿಂದೆ ಘೋಷಿಸಲಾಗಿತ್ತು, ಆದರೆ, ಕೊರೊನಾ ಪರಿಸ್ಥಿತಿ ಇನ್ನೂ ಮುಗಿದಿಲ್ಲದ ಕಾರಣ, ರಾಜ್ಯ ಸರ್ಕಾರವು ಈ ಯೋಜನೆಯನ್ನು ಹೋಳಿವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು. 

ಎಣ್ಣೆ, ಉಪ್ಪು ಮತ್ತು ಸಕ್ಕರೆ ಕೂಡ ಲಭ್ಯವಿರುತ್ತದೆ :
ಪ್ರಧಾನ ಮಂತ್ರಿ ಅನ್ನ ಯೋಜನೆಯಡಿ (Pradhan Mantri Garib Kalyan Anna Yojana) ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳ ಪಡಿತರವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್  (Yogi Adityanath) ಅಯೋಧ್ಯೆಯಲ್ಲಿ ತಿಳಿಸಿದರು. ಈ ಯೋಜನೆಯಡಿ, ಬೇಳೆಕಾಳುಗಳು, ಎಣ್ಣೆ, ಉಪ್ಪು ಮತ್ತು ಸಕ್ಕರೆಯನ್ನು ಸಹ ಪ್ರತಿ ತಿಂಗಳು ನೀಡಲಾಗುವುದು. ರಾಜ್ಯದ 15 ಕೋಟಿ ಜನರು ಪ್ರತಿ ತಿಂಗಳು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದವರು ಮಾಹಿತಿ ನೀಡಿದರು.

ಇದನ್ನೂ ಓದಿ-  Priyanka Gandhi: ಮಹಿಳೆಯರಿಗಾಗಿ ಕಾಂಗ್ರೆಸ್‌ನ ಪ್ರತ್ಯೇಕ ಪ್ರಣಾಳಿಕೆ, ಉಚಿತ ಸಿಲಿಂಡರ್ ಸೇರಿದಂತೆ ಹಲವು ದೊಡ್ಡ ಘೋಷಣೆ

ಅಯೋಧ್ಯೆಯಲ್ಲಿ ದೀಪೋತ್ಸವದ  (Ayodhya Deepotsav 2021) ಸಂದರ್ಭದಲ್ಲಿ ಮಾತನಾಡಿದ  ಸಿಎಂ ಯೋಗಿ ಆದಿತ್ಯನಾಥ್  (Yogi Adityanath), ಈ ಹಿಂದೆ ರಾಜ್ಯದ ಹಣವನ್ನು ಸ್ಮಶಾನದ ಗಡಿಗೆ ವ್ಯಯಿಸಲಾಗುತ್ತಿತ್ತು, ಇಂದು ದೇವಸ್ಥಾನಗಳ ಪುನರ್ ನಿರ್ಮಾಣ ಮತ್ತು ಸೌಂದರ್ಯೀಕರಣಕ್ಕೆ ಖರ್ಚು ಮಾಡಲಾಗುತ್ತಿದೆ. ಇದು ಚಿಂತನೆಯ ವ್ಯತ್ಯಾಸ, ಸ್ಮಶಾನವನ್ನು ಪ್ರೀತಿಸಿದವರು ಸಾರ್ವಜನಿಕ ಹಣವನ್ನು ಅಲ್ಲಿ ಹೂಡಿಕೆ ಮಾಡುತ್ತಾರೆ, ಧರ್ಮ ಮತ್ತು ಸಂಸ್ಕೃತಿಯನ್ನು ಪ್ರೀತಿಸುವವರು ಆ ಹಣವನ್ನು ಧರ್ಮ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಬಳಸುತ್ತಿದ್ದಾರೆ. ಇಲ್ಲಿ (ಅಯೋಧ್ಯೆಯಲ್ಲಿ) ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಎಂದರು.

ದೀಪೋತ್ಸವವು ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ:
ಇದೇ  ಸಂದರ್ಭದಲ್ಲಿ ದೀಪೋತ್ಸವದ ಬಗ್ಗೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, 5 ವರ್ಷಗಳ ಹಿಂದೆ ದೀಪೋತ್ಸವದ ಚರ್ಚೆ ಬಂದಾಗ ಅಯೋಧ್ಯೆಯಲ್ಲಿ ದೀಪಾವಳಿಯಂದು ದೊಡ್ಡ ಕಾರ್ಯಕ್ರಮವೇನೂ ಇರಲಿಲ್ಲ. ಇಂದು ಕೇಂದ್ರ ಸಚಿವರಿಂದ ಹಿಡಿದು ಮೂರು ದೇಶಗಳ ಹೈಕಮಿಷನರ್‌ಗಳವರೆಗೆ ನೂರಾರು ಜನರು ತಮ್ಮ ಪ್ರೀತಿಯ ನಗರವಾದ ಅಯೋಧ್ಯೆಯನ್ನು ನೋಡಲು ಇಲ್ಲಿಗೆ ಬಂದಿದ್ದಾರೆ. ಇದು ಸ್ವತಃ ಒಂದು ದೊಡ್ಡ ಆಚರಣೆಯಾಗಿದೆ. ಲಕ್ನೋ, ಆಗ್ರಾ, ಕಾಶಿ, ಪ್ರಯಾಗದಲ್ಲಿಯೂ ಈ ಕಾರ್ಯಕ್ರಮವನ್ನು ಎಲ್ಲೆಡೆ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ- Edible Oil Price: ಖಾದ್ಯ ತೈಲಗಳ ಸಗಟು ಬೆಲೆ ಲೀಟರ್‌ಗೆ 5 ರೂಪಾಯಿ ಇಳಿಕೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಆಹಾರ ಭದ್ರತೆ ಕಲ್ಯಾಣ ಯೋಜನೆಯಾಗಿದ್ದು, ಕೋವಿಡ್-19 ರ ಆರ್ಥಿಕ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡಲು ಮತ್ತು ಸಹಾಯ ಮಾಡಲು ಪ್ರಧಾನ ಮಂತ್ರಿಯವರು ಯೋಜಿಸಿದ್ದಾರೆ.

PMGKAY ಅಡಿಯಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಳಪಡುವ ಎಲ್ಲಾ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಹೆಚ್ಚುವರಿ ಆಹಾರ ಧಾನ್ಯವನ್ನು ನೀಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News