PM Narendra Modi : ಕೇಂದ್ರ ಸರ್ಕಾರ ಈ 4 ಮಂತ್ರಗಳ ಮೇಲೆ ಕೆಲಸ ಮಾಡುತ್ತಿದೆ : ಪ್ರಧಾನಿ ಮೋದಿ
ಇದರ ಜೊತೆಗೆ 250 ಹಾಸಿಗೆಗಳ ಸೌಲಭ್ಯವನ್ನು ಹೊಂದಿರುವ ದಿಯೋಘರ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಅನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದರು.
ಜಾರ್ಖಂಡ್ : ಇಂದು ಜಾರ್ಖಂಡ್‌ನಲ್ಲಿ 16,000 ಕೋಟಿ ರೂ. ವೆಚ್ಚದ ಯೋಜನೆಗಳು ಮತ್ತು ದಿಯೋಘರ್‌ನಲ್ಲಿ 410 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಜೊತೆಗೆ ಕೆಲ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು.
ಇದರ ಜೊತೆಗೆ 250 ಹಾಸಿಗೆಗಳ ಸೌಲಭ್ಯವನ್ನು ಹೊಂದಿರುವ ದಿಯೋಘರ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಅನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದರು.
ಜಾರ್ಖಂಡ್‌ಗೆ 16800 ಕೋಟಿ ರೂ. ಯೋಜನೆಗಳ ಉಡುಗೊರೆ
ದಿಯೋಘರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಮತ್ತು ಏಮ್ಸ್ ಸೇರಿದಂತೆ ಒಟ್ಟು 16,800 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಬಾಬಾ ಧಾಮಕ್ಕೆ ಬಂದ ನಂತರ ಪ್ರತಿಯೊಬ್ಬರ ಮನಸ್ಸು ಸಂತೋಷವಾಗುತ್ತದೆ ಎಂದರು.
ಇದನ್ನೂ ಓದಿ : ಭಾರತೀಯ ಸೇನೆ, ನೌಕಾಪಡೆ ಸೇರಲು ಇಚ್ಚಿಸುವವರು ಗಮನಿಸಿ: ಇಲ್ಲಿದೆ 5000ಕ್ಕೂ ಹೆಚ್ಚು ಉದ್ಯೋಗಾವಕಾಶ
ಇಂದು ದಿಯೋಘರ್‌ನಿಂದ ಜಾರ್ಖಂಡ್‌ನ ಅಭಿವೃದ್ಧಿಗೆ ಉತ್ತೇಜನ ನೀಡುವ ಸವಲತ್ತು ನಮಗೆಲ್ಲರಿಗೂ ಸಿಕ್ಕಿದೆ. ಬಾಬಾ ಬೈದ್ಯನಾಥರ ಆಶೀರ್ವಾದದಿಂದ 16,000 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳು ಉದ್ಘಾಟನೆಗೊಂಡಿದ್ದು, ಇಂದು ಶಂಕುಸ್ಥಾಪನೆ ಮಾಡಲಾಗಿದೆ. ಇದು ಜಾರ್ಖಂಡ್‌ನ ಆಧುನಿಕ ಸಂಪರ್ಕ, ಶಕ್ತಿ, ಆರೋಗ್ಯ, ನಂಬಿಕೆ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನವನ್ನು ನೀಡಲಿದೆ ಎಂದರು.
ಈ ಯೋಜನೆಗಳಿಂದ ಬಿಹಾರ ಮತ್ತು ಬಂಗಾಳಕ್ಕೂ ಲಾಭ
ಈ ಮುಂದುವರೆದು ಮಾತನಾಡಿದ ಪ್ರಧಾನಿ ಮೋದಿ, 'ಈ ಯೋಜನೆಗಳು ಜಾರ್ಖಂಡ್‌ನಿಂದ ಪ್ರಾರಂಭವಾಗುತ್ತಿದ್ದರೂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಅನೇಕ ಪ್ರದೇಶಗಳಿಗೂ ಸಹ ಇವುಗಳಿಂದ ಪ್ರಯೋಜನ ಪಡೆಯಲಿವೆ. ಅಂದರೆ, ಈ ಯೋಜನೆಗಳು ಪೂರ್ವ ಭಾರತದ ಅಭಿವೃದ್ಧಿಯನ್ನೂ ವೇಗಗೊಳಿಸುತ್ತವೆ. ರಾಜ್ಯಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ, ದೇಶ ಕಳೆದ 8 ವರ್ಷಗಳಿಂದ ಈ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದೆ. 'ಕಳೆದ 8 ವರ್ಷಗಳಲ್ಲಿ, ಅದೇ ಚಿಂತನೆ, ಈ ಭಾವನೆ ಜಾರ್ಖಂಡ್ ಅನ್ನು ಹೆದ್ದಾರಿ, ರೈಲ್ವೆ, ವಾಯುಮಾರ್ಗ, ಜಲಮಾರ್ಗದ ಮೂಲಕ ಎಲ್ಲ ರೀತಿಯಲ್ಲಿ ಸಂಪರ್ಕಿಸುವ ಪ್ರಯತ್ನದಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ ಎಂದರು.
'ದಿಯೋಘರ್ ವಿಮಾನ ನಿಲ್ದಾಣದಿಂದ ಪ್ರತಿ ವರ್ಷ 5 ಲಕ್ಷ ಪ್ರಯಾಣಿಕರ ಪ್ರಯಾಣ'
4 ವರ್ಷಗಳ ಹಿಂದೆ ದಿಯೋಘರ್ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡುವ ಅವಕಾಶ ಸಿಕ್ಕಿತ್ತು. ಕೊರೊನಾ ಸಂಕಷ್ಟದ ನಡುವೆಯೂ ಅದರ ಕೆಲಸ ವೇಗವಾಗಿ ನಡೆದಿದ್ದು, ಇಂದು ಜಾರ್ಖಂಡ್‌ಗೆ ಮತ್ತೊಂದು ವಿಮಾನ ನಿಲ್ದಾಣ ಸಿಗುತ್ತಿದೆ. ಪ್ರತಿ ವರ್ಷ ಸುಮಾರು 5 ಲಕ್ಷ ಪ್ರಯಾಣಿಕರು ದಿಯೋಘರ್ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಬಾಬಾರ ಭಕ್ತರಿಗೂ ಅನುಕೂಲವಾಗುತ್ತದೆ ಎಂದರು.
ಇದನ್ನೂ ಓದಿ : Viral Video : ಗೆಳೆಯರ ಈ ಕೆಲಸದಿಂದ ನೆತ್ತಿಗೇರಿತು ವರನ ಕೋಪ .! ಮುಂದೆ ..?
'ಸರ್ಕಾರದ ಪ್ರಯತ್ನದ ಫಲ ಇಂದು ಇಡೀ ದೇಶದಲ್ಲಿ ಗೋಚರಿಸುತ್ತಿದೆ. ಉಡಾನ್ ಯೋಜನೆಯಡಿ, ಕಳೆದ 5-6 ವರ್ಷಗಳಲ್ಲಿ, ಸುಮಾರು 70 ಹೊಸ ಸ್ಥಳಗಳಿಗೆ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಇಂದು ಸಾಮಾನ್ಯ ನಾಗರಿಕರು 400ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ವಿಮಾನ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ