Vehicle Scrappage Policy ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ, ಇಲ್ಲಿದೆ ವಿಶೇಷತೆ
Vehicle Scrappage Policy Launch: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದಲ್ಲಿ ನೂತನ ವಾಹನ ಸ್ಕ್ರಾಪೇಜ್ ನೀತಿಯನ್ನು ಪ್ರಾರಂಭಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ.
ನವದೆಹಲಿ: Vehicle Scrappage Policy Launch - ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೆಹಿಕಲ್ ಸ್ಕ್ರ್ಯಾಪೆಜ್ ಪಾಲಸಿಯನ್ನು (Vehicle Scrappage Policy) ಇಂದು ಬಿಡುಗಡೆಗೊಳಿಸಿದ್ದಾರೆ. ಗುಜರಾತ್ ನಲ್ಲಿ ನಡೆಯುತ್ತಿರುವ ಇನ್ವೆಸ್ಟರ್ಸ್ ಸಮಿಟ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ನಡೆಸುವ ಮೂಲಕ ಈ ನೂತನ ನೀತಿಯನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. 2021ರ ತಮ್ಮ ಬಜೆಟ್ ಭಾಷಣ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ನೀತಿಯನ್ನು ಪ್ರಸ್ತುತಪಡಿಸಿದ್ದರು.
PM Narendra Modi), ಯಾವುದೇ ದೇಶದ ಆರ್ಥಿಕತೆಯಲ್ಲಿ ಚಲನಶೀಲತೆ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ. ಹೊಸ ಸ್ಕ್ರ್ಯಾಪೆಜ್ ಪಾಲಸಿ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. Re-use, Recycle ಹಾಗೂ Recovery ಈ ನೀತಿಯ ಪ್ರಮುಖ ಉದ್ದೇಶ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ನೀತಿಯು ದೇಶದಲ್ಲಿ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ. ಹೆದ್ದಾರಿ ನಿರ್ಮಾಣದಲ್ಲಿ ಭಾರತ ತ್ಯಾಜ್ಯ ಉತ್ಪನ್ನವನ್ನು ಬಳಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಉಪಸ್ಥಿತರಿದ್ದರು.
EPFO: ಈ ಮಹತ್ವದ ಕೆಲಸವನ್ನು ಇಂದೇ ಮಾಡಿ, ಇಲ್ಲವೇ ಮುಂದಿನ ತಿಂಗಳಿನಿಂದ PF ಹಣ ಖಾತೆಗೆ ಬರುವುದಿಲ್ಲ
ಪ್ರಸ್ತುತ ಈ ನೀತಿ ಕಡ್ಡಾಯವಾಗಿಲ್ಲ
ಬಜೆಟ್ ಮಂಡನೆಯ ಬಳಿಕ ಈ ನೀತಿಯ ಕುರಿತು ಲೋಕಸಭೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ, ಹೊಸ ಸ್ಕ್ರ್ಯಾಪ್ಪೇಜ್ ನೀತಿ ಸ್ವಯಂಪ್ರೇರಿತವಾಗಿದೆ ಎಂದಿದ್ದಾರೆ. ಇದರರ್ಥ ನಿಮ್ಮ ಕಾರ್ ಪಾಲಿಸಿಯ ಅಡಿಯಲ್ಲಿ ನೀವು ಅದನ್ನು ಸ್ಕ್ರ್ಯಾಪ್‌ಗೆ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನೀವೇ ನಿರ್ಧರಿಸಬೇಕು. ಈ ನೀತಿಯ ಪ್ರಕಾರ, ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಕಡ್ಡಾಯಗೊಳಿಸಲಾಗಿದೆ.
Sanjukta Parashar: ಈ ಲೇಡಿ IPS ಹೆಸರು ಕೇಳಿದ್ರೆ ಉಗ್ರರಲ್ಲಿ ನಡುಕ ಹುಟ್ಟುತ್ತಂತೆ, 15 ತಿಂಗ್ಳಲ್ಲಿ 16 ಉಗ್ರರ ಎನ್ಕೌಂಟರ್
ಹಳೆ ಕಾರು ಮಾರಾಟದಿಂದ ಈ ಲಾಭ
ಈ ನೀತಿಯನ್ನು ಪ್ರಚಲಿತಗೊಳಿಸಲು ಸರ್ಕಾರ ಇದರ ಅಡಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಉದಾಹರಣೆಗೆ ಹಳೆ ಕಾರನ್ನು ಸ್ಕ್ರ್ಯಾಪ್ ಗೆ ನೀಡುವ ಮಾಲೀಕರಿಗೆ ಒಂದು ಸರ್ಟಿಫಿಕೇಟ್ ನೀಡಲಾಗುವುದು. ಹೊಸ ಕಾರು ಖರೀದಿಯ ವೇಳೆ ಅವರು ಈ ಸರ್ಟಿಫಿಕೇಟ್ ಅನ್ನು ತೋರಿಸುವ ಮೂಲಕ ನೋಂದಣಿ ಶುಲ್ಕದಿಂದ ವರು ಮುಕ್ತಿ ಪಡೆಯಬಹುದು.
ಇದನ್ನೂ ಓದಿ-ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಿದೆಯೇ, ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ