ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಏಕೆ?: ಕೇಂದ್ರದ ಸಮರ್ಥನೆ ಹೀಗಿದೆ ನೋಡಿ…

ಕೊರೊನಾ ಜಾಗೃತಿ ಸಂದೇಶ ಮೂಡಿಸಲು ಪ್ರಧಾನಿ ಮೋದಿಯವರ ಭಾವಚಿತ್ರ ಬಳಕೆ.

Written by - Zee Kannada News Desk | Last Updated : Aug 11, 2021, 03:57 PM IST
  • ವಿಪಕ್ಷಗಳ ಆಡಳಿತವಿರುವ ಕೆಲ ರಾಜ್ಯಗಳಲ್ಲಿ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ತೆಗೆಯಲಾಗಿತ್ತು
  • ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು
  • ಜನರಲ್ಲಿ ಕೊರೊನಾ ಜಾಗೃತಿ ಸಂದೇಶ ಮೂಡಿಸಲು ಪ್ರಧಾನಿ ಮೋದಿ ಫೋಟೋ ಮತ್ತು ಸಂದೇಶ ಮುದ್ರಿಸಲಾಗುತ್ತಿದೆ ಎಂದ ಕೇಂದ್ರ
ಕೊವಿಡ್-19 ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಏಕೆ?: ಕೇಂದ್ರದ ಸಮರ್ಥನೆ ಹೀಗಿದೆ ನೋಡಿ…   title=
ಜನರಿಗೆ ಜಾಗೃತಿ ಸಂದೇಶ ನೀಡಲು ಪ್ರಧಾನಿ ಮೋದಿ ಫೋಟೋ ಬಳಕೆ

ನವದೆಹಲಿ: ಕೊರೊನಾ ಲಸಿಕೆ ಪಡೆದ ಬಳಿಕ ನೀಡಲಾಗುವ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹೇಳಿಕೆ ಮುದ್ರಿಸುತ್ತಿರುವ ಕ್ರಮಕ್ಕೆ ಕೇಂದ್ರ ಸರ್ಕಾರ ಸಮರ್ಥನೆ ನೀಡಿದೆ. ದೇಶದ ಜನರು ಕೋವಿಡ್-19 ಲಸಿಕೆ ಪೆಡದ ಬಳಿಕ ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕೆಂಬ ಉದ್ದೇಶದಿಂದ ಹಾಗೂ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಸಂದೇಶ ನೀಡಲು ಪ್ರಮಾಣಪತ್ರಗಳಲ್ಲಿ ಪ್ರಧಾನಿಯವರ ಭಾವಚಿತ್ರ ಮತ್ತು ಅವರ ಹೇಳಿಕೆ ಮುದ್ರಿಸಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರವು ಉತ್ತರ ನೀಡಿದೆ.   

ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಬಳಸುತ್ತಿರುವುದಕ್ಕೆ ವಿರೋಧಪಕ್ಷಗಳು ಸೇರಿದಂತೆ ಜನಸಾಮಾನ್ಯರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವಯಂ ಪ್ರಚಾರದ ಉದ್ದೇಶದಿಂದ ಮೋದಿಯವರ ಫೋಟೋವನ್ನು ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಮುದ್ರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದಲ್ಲದೆ ವಿಪಕ್ಷಗಳ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ತೆಗೆಯಲಾಗಿತ್ತು.

ಇದನ್ನೂ ಓದಿ: Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್

ಸಂಸತ್ತಿನ ಮೇಲ್ಮನೆಯಲ್ಲಿ ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಛಾಯಾಚಿತ್ರ ಮುದ್ರಿಸುವುದು ಅಗತ್ಯ ಮತ್ತು ಕಡ್ಡಾಯವೇ ಎಂಬ ಪ್ರಶ್ನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೇಳಲಾಗಿತ್ತು. ಇದಕ್ಕೆ ಲಿಖಿತ ಉತ್ತರ ನೀಡಿರುವ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ‘ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕಾಯಿಲೆ ಹರಡುವುದನ್ನು ತಡೆಯಲು ಕೊರೊನಾ ನಿಯಮಗಳನ್ನು ಪಾಲಿಸುವುದು ಬಹಳ ಅಗತ್ಯ ಕ್ರಮ. ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಗೂ ಸಂದೇಶ ಮುದ್ರಿಸುವುದು, ಲಸಿಕೆ ಪಡೆದ ಬಳಿಕವೂ ಕೋವಿಡ್-19 ನಿಯಮ ಪಾಲಿಸುವುದರ ಮಹತ್ವವನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದು ಬೃಹತ್ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದೆ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Free Ration : ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ

ಕೊರೊನಾ ಸಾಂಕ್ರಾಮಿಕದ ಬಗ್ಗೆ ಮಹತ್ವದ ಸಂದೇಶಗಳು ಜನರಿಗೆ ತಲುಪಲು ಮತ್ತು ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿ. ಲಸಿಕೆ ಪ್ರಮಾಣಪತ್ರದ ಮಾದರಿಯು ಜನರಿಗೆ ಲಸಿಕೆ ನೀಡಿದ ಬಳಿಕವೂ ಸೂಕ್ತ ನಡವಳಿಕೆಗಳನ್ನು ಪಾಲಿಸುವುದರ ಮಹತ್ವದ ಕುರಿತಾದ ಸಂದೇಶ ನೀಡಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆ ಪ್ರಮಾಣಪತ್ರಗಳ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಎಂದು ಕೇಂದ್ರವು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News