ನವದೆಹಲಿ: ಮಾರ್ಚ್ ನಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶ: ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷದಿಂದ ಸರ್ಕಾರ ಬಿದ್ದರೆ ನಮ್ಮನ್ನು ದೂಷಿಸಬೇಡಿ: ಶಿವರಾಜ್ ಸಿಂಗ್ ಚೌಹಾಣ್


ಅವರು ಇಂದೋರ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ, ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಧಾನ್ ಮತ್ತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರೊಂದಿಗೆ ಹಾಜರಿದ್ದರು.


ಮಮತಾ ಬ್ಯಾನರ್ಜಿ ದೇಶದ ಸಂವಿಧಾನ ಅನುಸರಿಸುತ್ತಿಲ್ಲ- ಕೈಲಾಶ್ ವಿಜಯ್ ವರ್ಗಿಯಾ


ವಿಜಯವರ್ಗಿಯಾ ಅವರು ತಮ್ಮ ಭಾಷಣದಲ್ಲಿ 'ಯಾರಿಗೂ ಹೇಳಬೇಡಿ. ನಾನು ಈವರೆಗೆ ಯಾರಿಗೂ ಇದನ್ನು ಹೇಳಿಲ್ಲ ...ಈ ಹಂತದಿಂದ ಮೊದಲ ಬಾರಿಗೆ ಇದನ್ನು ಸಾರ್ವಜನಿಕಗೊಳಿಸುತ್ತಿದ್ದೇನೆ. ಕಮಲ್ ನಾಥ್ ಸರ್ಕಾರವನ್ನು ಕೆಳಕ್ಕೆ ಬಿಳಿಸುವಲ್ಲಿ ಯಾರಾದರೂ ಪ್ರಮುಖ ಪಾತ್ರ ವಹಿಸಿದ್ದರೆ, ಅದು ನರೇಂದ್ರ ಮೋದಿ ಹೊರತು, ಧರ್ಮೇಂದ್ರ ಪ್ರಧಾನ್ ಅಲ್ಲ "ಎಂದು ಹೇಳಿದರು.


ವಿಶ್ವಾಸ ಮತ ಯಾಚನೆಗೂ ಮೊದಲೇ ರಾಜೀನಾಮೆ ಘೋಷಿಸಿದ ಕಮಲ್ ನಾಥ್ 


ಜೂನ್‌ನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ದು ಬಿಜೆಪಿಯ ಕೇಂದ್ರ ನಾಯಕತ್ವ ಎಂದು ಹೇಳಿದ್ದರು.ಮಾರ್ಚ್ ನಲ್ಲಿ ಸಿಂಧಿಯಾ ತಮ್ಮ ಬೆಂಬಲಿಗರೊಂದಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.