close

News WrapGet Handpicked Stories from our editors directly to your mailbox

ಮಮತಾ ಬ್ಯಾನರ್ಜಿ ದೇಶದ ಸಂವಿಧಾನ ಅನುಸರಿಸುತ್ತಿಲ್ಲ- ಕೈಲಾಶ್ ವಿಜಯ್ ವರ್ಗಿಯಾ

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಭಾರತೀಯ ಸಂವಿಧಾನವನ್ನು ಅನುಸರಿಸುತ್ತಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮಂಗಳವಾರ ಆರೋಪಿಸಿದ್ದಾರೆ.

Updated: Oct 22, 2019 , 04:25 PM IST
ಮಮತಾ ಬ್ಯಾನರ್ಜಿ ದೇಶದ ಸಂವಿಧಾನ ಅನುಸರಿಸುತ್ತಿಲ್ಲ- ಕೈಲಾಶ್ ವಿಜಯ್ ವರ್ಗಿಯಾ
file photo

ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಭಾರತೀಯ ಸಂವಿಧಾನವನ್ನು ಅನುಸರಿಸುತ್ತಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮಂಗಳವಾರ ಆರೋಪಿಸಿದ್ದಾರೆ.

ಉತ್ತರ 24 ರ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಲು ಕೇಳಿಕೊಂಡ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

'ಪಶ್ಚಿಮ ಬಂಗಾಳ ಸರ್ಕಾರ ಮಮತಾ ಬ್ಯಾನರ್ಜಿ ಸರ್ಕಾರವಾಗಿದೆ. ಇದು ಸಂವಿಧಾನವನ್ನು ಅನುಸರಿಸುವುದಿಲ್ಲ.ರಾಜ್ಯಪಾಲರು ಅನುಮತಿ ಪಡೆಯಬೇಕೆಂದರೆ ಮಮತಾಜಿ ಅವರ ಕಾನೂನು ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತದೆ ಹೊರತು ದೇಶದ ಕಾನೂನಲ್ಲ ಎಂದು ಸೂಚಿಸುತ್ತದೆ ಎಂದು ವಿಜಯವರ್ಗಿಯಾ ಎಎನ್‌ಐಗೆ ತಿಳಿಸಿದರು. ಎನ್‌ಆರ್‌ಸಿ ಕುರಿತು ಬ್ಯಾನರ್ಜಿ ಅವರ ನಿಲುವನ್ನು ಪ್ರಶ್ನಿಸಿದಾಗ, ವಿಜಯ ವರ್ಗಿಯಾ ಅವರು ಪಶ್ಚಿಮ ಬಂಗಾಳದಲ್ಲಿ ಈ ಇದನ್ನು ಜಾರಿಗೆ ತರಬೇಕೆ ಅಥವಾ ಬೇಡವೇ ? ಎಂಬುದು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ ಎಂದು ಹೇಳಿದರು.

"ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಲ್ಲ. ಇದು ಎನ್‌ಆರ್‌ಸಿಯನ್ನು ಜಾರಿಗೆ ತರಬೇಕೇ ಅಥವಾ ಬೇಡವೇ? ಎಂಬುದು ಕೇಂದ್ರ ಸರ್ಕಾರದ ನಿರ್ಧಾರ, ಯಾಕೆ ಅವರು ತುಂಬಾ ಚಿಂತಾಕ್ರಾಂತರಾಗಿದ್ದಾರೆ ಎಂದರು.