ನವದೆಹಲಿ : ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ ಇದೆ. ಈಗ ಕೇಂದ್ರ ಸರ್ಕಾರ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 'ಪಿಎಂ ವಯಾ ವಂದನ ಯೋಜನೆ' ಪ್ರಾರಂಭಿಸಿದೆ. ಇದರ ಅಡಿಯಲ್ಲಿ ನೀವು ವಾರ್ಷಿಕವಾಗಿ 1,11,000 ರೂ.ಗಳವರೆಗೆ ಪಿಂಚಣಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಅವಧಿ ಎಷ್ಟು ವರ್ಷ?


ಹಿರಿಯ ನಾಗರಿಕರು ತಮ್ಮ ಜೀವನದ ನಿರ್ಣಾಯಕ ಹಂತದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪಿಎಂ ವಾಯ ವಂದನ ಯೋಜನೆ(PM Pension Yojana, Pension Yojana) ಪ್ರಾರಂಭಿಸಲಾಗಿದೆ. ಇದರ ಅವಧಿ ಮಾರ್ಚ್ 31, 2020 ರವರೆಗೆ ಇತ್ತು, ಆದರೆ ಈಗ ಅದನ್ನು 2023 ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ.


ಇದನ್ನೂ ಓದಿ : ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ WhatsApp DP ನೋಡುತ್ತಿದ್ದಾರೆ ಹೀಗೆ ಚೆಕ್ ಮಾಡಿ


ಯಾರು ಲಾಭ ಪಡೆಯುತ್ತಾರೆ?


ಈ ಯೋಜನೆಗೆ ಸೇರಲು ಕನಿಷ್ಠ ವಯಸ್ಸು 60 ವರ್ಷಗಳು. ಅಂದರೆ, 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು(Senior Citizens) ಇದರಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿಯಿಲ್ಲ.


LIC ಗೆ ಜವಾಬ್ದಾರಿ ಸಿಕ್ಕಿದೆ :


ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯ ಕಾರ್ಯಾಚರಣೆಯ ಜವಾಬ್ದಾರಿಯನ್ನು ಜೀವ ವಿಮಾ ನಿಗಮಕ್ಕೆ (LIC) ವಹಿಸಲಾಗಿದೆ. ಈ ಯೋಜನೆಯಲ್ಲಿ ಪಿಂಚಣಿಗಾಗಿ, ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು. ತದನಂತರ ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು.


ವಾರ್ಷಿಕ ಪಿಂಚಣಿ ಎಷ್ಟು?


ಈ ಯೋಜನೆಯಡಿ ನೀವು ತಿಂಗಳಿಗೆ 1000 ರೂ.ಗಳ ಪಿಂಚಣಿಗೆ 1,62,162 ರೂ. ಈ ಯೋಜನೆಯಡಿ ಗರಿಷ್ಠ ಮಾಸಿಕ ಪಿಂಚಣಿ(Monthly Pension) 9,250 ರೂ, ತ್ರೈಮಾಸಿಕ 27,750 ರೂ, ಅರ್ಧ ವಾರ್ಷಿಕ ಪಿಂಚಣಿ 55,500 ರೂ ಮತ್ತು ವಾರ್ಷಿಕ ಪಿಂಚಣಿ 1,11,000 ರೂ.


ಇದನ್ನೂ ಓದಿ : PF ಗ್ರಾಹಕರಿಗೆ ಗುಡ್ ನ್ಯೂಸ್ : ಈ ತಿಂಗಳು ನಿಮ್ಮಗೆ ಸಿಗಲಿದೆ ಶೇ.8.5 ಬಡ್ಡಿ!


ಹೂಡಿಕೆ ಮಾಡುವುದು ಹೇಗೆ?


ಪಿಎಂವಿವಿವೈ ಯೋಜನೆ(PMVVY)ಯ ಬಗ್ಗೆ ವಿವರವಾದ ಮಾಹಿತಿಗಾಗಿ ನೀವು 022-67819281 ಅಥವಾ 022-67819290 ಅನ್ನು ಡಯಲ್ ಮಾಡಬಹುದು. ಇದಲ್ಲದೆ, ನೀವು ಟೋಲ್-ಫ್ರೀ ಸಂಖ್ಯೆ - 1800-227-717 ಅನ್ನು ಸಹ ಕರೆ ಮಾಡಬಹುದು.


ಸೇವಾ ತೆರಿಗೆ ವಿನಾಯಿತಿ :


ಈ ಯೋಜನೆಗೆ ಸೇವಾ ತೆರಿಗೆ ಮತ್ತು ಜಿಎಸ್‌ಟಿ(GST)ಯಿಂದ ವಿನಾಯಿತಿ ನೀಡಲಾಗಿದೆ. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಯಾವುದೇ ಗಂಭೀರ ಅನಾರೋಗ್ಯ ಅಥವಾ ಸಂಗಾತಿಯ ಚಿಕಿತ್ಸೆಗಾಗಿ ನೀವು ಈ ಹಣವನ್ನು ಸಮಯಕ್ಕಿಂತ ಮುಂಚಿತವಾಗಿ ಹಿಂಪಡೆಯಬಹುದು.


ಅಗತ್ಯವಾದ ದಾಖಲೆಗಳು :


ಪ್ರಧಾನ್ ಮಂತ್ರಿ ವಾಯ ವಂದನ ಯೋಜನೆಯಲ್ಲಿ ಹೂಡಿಕೆ(Invest) ಮಾಡಲು, ನೀವು ಪ್ಯಾನ್ ಕಾರ್ಡ್‌ನ ಪ್ರತಿ, ವಿಳಾಸ ಪುರಾವೆಗಳ ಪ್ರತಿ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಝರಾಕ್ಸ್ ಹೊಂದಿರುವುದು ಕಡ್ಡಾಯವಾಗಿದೆ.


ಇದನ್ನೂ ಓದಿ : Viral Video: ಮದುವೆ ಮಂಟಪದಲ್ಲೇ ಲ್ಯಾಪ್‌ಟಾಪ್ ಹಿಡಿದು ಕುಳಿತ ವರ, ವಧು ಏನ್ ಮಾಡಿದ್ಲು ಗೊತ್ತಾ?


ಸಾಲ ಸೌಲಭ್ಯವೂ ಲಭ್ಯವಿದೆ :


ಈ ಯೋಜನೆಯಲ್ಲಿ ನಿಮಗಾಗಿ ಸಾಲ(Lone) ಸೌಲಭ್ಯವೂ ಇದೆ. ಇದರಲ್ಲಿ, ಪಾಲಿಸಿಯ 3 ವರ್ಷಗಳ ನಂತರ ನೀವು ಪಿಎಂವಿವಿವೈನಲ್ಲಿ ಸಾಲ ಪಡೆಯಬಹುದು. ಗರಿಷ್ಠ ಸಾಲದ ಮೊತ್ತವು ಖರೀದಿ ಬೆಲೆಯ 75% ಮೀರಬಾರದು. ಈ ಯೋಜನೆಯು ಸರ್ಕಾರದ ಇತರ ಪಿಂಚಣಿ ಯೋಜನೆಗಳಂತೆ ತೆರಿಗೆ ಪ್ರಯೋಜನಗಳನ್ನು ನೀಡುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ